ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಸಂಪರ್ಕ ಕಳೆದುಕೊಂಡ ಜಿಎಸ್‌‌ಎಟಿ-6ಎ ಉಪಗ್ರಹ

By Mahesh
|
Google Oneindia Kannada News

ಹಾಸನ, ಏಪ್ರಿಲ್ 01: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕ್ಷೇತ್ರದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದ ಜಿಎಸ್‌‌ಎಟಿ-6ಎ ಉಪಗ್ರಹದ ಸಂಪರ್ಕ ಕಳೆದುಕೊಂಡಿರುವುದಾಗಿ ಇಲ್ಲಿನ ಮಾಸ್ಟರ್ ಕಂಟ್ರೋಲ್ ಕೇಂದ್ರದಿಂದ ಮಾಹಿತಿ ಬಂದಿದೆ.

ಭಾನುವಾರದಂದು ಉಪಗ್ರಹ ತನ್ನ ಅಂತಿಮ ಹಂತ ತಲುಪುವ ನಿರೀಕ್ಷೆಯಿತ್ತು. ಆದರೆ, ಸಂಪರ್ಕ ಕಳೆದುಕೊಂಡಿದ್ದು, ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಜಿಸ್ಯಾಟ್-6ಎ ಸಂವಹನ ಉಪಗ್ರಹ ಯಶಸ್ವೀ ಉಡಾವಣೆ ಮಾಡಿದ ಇಸ್ರೋಜಿಸ್ಯಾಟ್-6ಎ ಸಂವಹನ ಉಪಗ್ರಹ ಯಶಸ್ವೀ ಉಡಾವಣೆ ಮಾಡಿದ ಇಸ್ರೋ

ಜಿಎಸ್‌ಎಲ್‌ವಿ-ಎಫ್08 ರಾಕೆಟ್‌ ಮೂಲಕ ಜಿಎಸ್‌‌ಎಟಿ-6ಎ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಮಾರ್ಚ್‌ 29ರಂದು ಉಡಾವಣೆ ಯಶಸ್ವಿಯಾದ ಬಳಿಕ ಉಪಗ್ರಹವನ್ನು ಕಕ್ಷೆಗೆ ಮುಟ್ಟಿಸುವ ಕೊನೆ ಹಂತದ ಪ್ರಕ್ರಿಯೆಗೂ ಈ ಘಟನೆ ನಡೆದಿದೆ.

ISRO has lost contact with GSAT-6A

ಜಿಸ್ಯಾಟ್-6ಎ 2,140 ಕೆಜಿಯ ಉಪಗ್ರಹವಾಗಿದ್ದು, ಈ ಉಪಗ್ರಹ ಉಡಾವಣೆಯಿಂದ ಭಾರತೀಯ ಸೇನೆಗೆ ಇದರಿಂದ ಲಾಭವಾಗಲಿದೆ. ಸೇನೆಗೆ ಬೇಕಾದ ಸಂವಹನ ತಂತ್ರಜ್ಞಾನಗಳು ಮತ್ತಷ್ಟು ಸರಳವಾಗಲಿವೆ. ಇಸ್ರೋ ಕೈಗೊಳ್ಳಲಿರುವ ಚಂದ್ರಯಾನ-2 ಯೋಜನೆಗೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನೂ ಇಸ್ರೋ ಈ ಉಡಾವಣೆ ಜೊತೆ ನಡೆಸುತ್ತಿದೆ.

English summary
The Indian Space Research Organisation (ISRO) confirmed on Sunday afternoon that communication with GSAT-6A, the country's newest communication satellite, was lost after the second firing of the on-board engine, which was performed on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X