ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 5: ಉಪಗ್ರಹ ಕ್ಷೇತ್ರದಲ್ಲಿ ಭಾರತೀಯ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದೆ.

ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಮೂರನೇ ಉಪಗ್ರಹ ಯೋಜನೆಯನ್ನು ಉಡಾವಣೆ ಮಾಡಿದೆ. ಭಾರತೀಯ ವಿಜ್ಞಾನ ವಲಯದಲ್ಲಿ ಬಹುದೊಡ್ಡ ಸಾಧನೆಯೇ ಹೌದು.

ಇಂದು (ಡಿ. 5) ಉಡಾವಣೆಗೊಂಡ ಜಿಸ್ಯಾಟ್-11 ಇಸ್ರೋ ನಿರ್ಮಿಸಿದ ಅತ್ಯಂತ ತೂಕದ ಉಪಗ್ರಹ. ಭಾರತದ ಅತಿ ದೊಡ್ಡ ಭೂಸ್ಥಾಯಿ ಸಂವಹನ ಉಪಗ್ರಹ ಕೂಡ.

ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

ದೇಶದ ಮೂಲೆ ಮೂಲೆಗೂ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಉದ್ದೇಶದ ಈ ಉಪಗ್ರಹವನ್ನು ಫ್ರಾನ್ಸ್‌ನ ಜಿಯಾನಾದ ಕೌರೌ ಎಂಬಲ್ಲಿನ ಏರಿಯನ್ ಲಾಂಚ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಬೆಳಗಿನ ಜಾವ ಉಡಾವಣೆ ಮಾಡಲಾಯಿತು.

ದೇಶದ ಸಂವಹನ ಕ್ಷೇತ್ರಕ್ಕೆ ಸಾಕಷ್ಟು ನೆರವಾಗಬಲ್ಲ, ಇಸ್ರೋದ ಈ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು? ಮುಂದೆ ಓದಿ...

ಭಾರತಕ್ಕೆ ಅಗತ್ಯವಾಗಿದ್ದ ಯೋಜನೆ

ಭಾರತಕ್ಕೆ ಅಗತ್ಯವಾಗಿದ್ದ ಯೋಜನೆ

ಇಸ್ರೋ ದೇಶದೊಳಗಿನ ಶಕ್ತಿಯುತ ಸಂವಹನ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಜಿಸ್ಯಾಟ್-11 ಕೂಡ ಇದೇ ರೀತಿಯ ಕಾಣಿಕೆ ನೀಡುವುದನ್ನು ಮುಂದುವರಿಸಲಿದೆ.

ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಅಂದಾಜು 450 ಮಿಲಿಯನ್ ತಲುಪಿದೆ. ದೇಶದ ಭೌಗೋಳಿಕ ಸಂರಚನೆ ಮತ್ತು ವಾತಾವರಣದ ಗುಣಗಳಿಗೆ ಅನುಗುಣವಾಗಿ ಈ ಉಪಗ್ರಹ ಅತಿ ಅಗತ್ಯವಾಗಿತ್ತು ಎನ್ನುತ್ತದೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ರೂಪಿಸಿರುವ ವಿಡಿಯೋ. ಭಾರತದ ಪ್ರತಿ ಮೂಲೆಗೂ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸುವುದು ಮುಖ್ಯವಾಗಿತ್ತು.

Array

ಕುಗ್ರಾಮಗಳಿಗೂ ಬ್ರಾಡ್ ಬ್ಯಾಂಡ್

ಇಂದಿನ ಯುಗದಲ್ಲಿ ಉಪಗ್ರಹ ಆಧಾರಿತ ಬ್ರಾಂಡ್ ಬ್ಯಾಂಡ್ ಸಂಪರ್ಕಗಳು ಧ್ವನಿ, ಡಾಟಾ ಮತ್ತು ವಿಡಿಯೋ ಪ್ರಸಾರದ ಸೌಲಭ್ಯಗಳನ್ನು ಒಳಗೊಂಡಿದ್ದು, ಭಾರಿ ಪರಿಣಾಮ ಬೀರುತ್ತಿವೆ ಮತ್ತು ಇಡೀ ವ್ಯವಸ್ಥೆಯನ್ನೇ ಬದಲಿಸುವಂತಿವೆ. ಗ್ರಾಮೀಣ ಪ್ರದೇಶಗಳು, ಸಂಪರ್ಕವೇ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಪ್ರಾಜೆಕ್ಟ್ ಯೋಜನೆ ಅಡಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವ ಬಹುತೇಕ ಗುರಿಗಳನ್ನು ಈ ಉಪಗ್ರಹದಿಂದ ಈಡೇರಿಸಲು ಸಾಧ್ಯ. ಈ ಯೋಜನೆಯು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವೂ ಆಗಿದೆ ಎಂದು ಇದ್ರೋ ಅಧ್ಯಕ್ಷ ಡಾ.ಕೆ. ಶಿವನ್ ತಿಳಿಸಿದ್ದಾರೆ.

ಫ್ರಾನ್ಸ್ ನಲ್ಲಿ ಭಾರತದ ಜಿಸ್ಯಾಟ್- 11 ಉಪಗ್ರಹ ಯಶಸ್ವೀ ಉಡಾವಣೆಫ್ರಾನ್ಸ್ ನಲ್ಲಿ ಭಾರತದ ಜಿಸ್ಯಾಟ್- 11 ಉಪಗ್ರಹ ಯಶಸ್ವೀ ಉಡಾವಣೆ

ಸ್ಮಾರ್ಟ್ ಸಿಟಿಗಳ ಬೆಸುಗೆ

ಜಿಸ್ಯಾಟ್-11 ಯೋಜನೆಯು 15 ವರ್ಷಗಳ ಜೀವಿತಾವಧಿ ಹೊಂದಿದೆ. ಈ ರೀತಿಯ ಬೃಹತ್ ಸಂವಹನ ಉಪಗ್ರಹಗಳು ಸ್ಮಾರ್ಟ್ ಸಿಟಿಗಳನ್ನು ಬೆಸೆಯುವಲ್ಲಿ ನೆರವಾಗಲಿವೆ. ಮನೆಗಳು, ಉದ್ಯಮಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸುವ ಜೊತೆಯಲ್ಲಿ ದೂರಸಂಪರ್ಕ ಮತ್ತು ಬಹು ಮಾಧ್ಯಮ ಸೌಲಭ್ಯಗಳನ್ನು ಕೂಡ ನೀಡಲಿದೆ. ವಿಶೇಷವೆಂದರೆ ಈ ಉಪಗ್ರಹವು ವಿಮಾನದ ಒಳಗೂ ಸಂಪರ್ಕ ಹೊಂದಲು ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ದೇಶದಾದ್ಯಂತ ಅಧಿಕ ವೇಗದ ಡಾಟಾ ಸೇವೆಯಲ್ಲಿ ಕಲ್ಪಿಸಲಿದೆ.

Array

ಸೆಕೆಂಡಿಗೆ 16 ಜಿಬಿ ಡಾಟಾ

5870 ಕೆಜಿ ತೂಕವಿರುವ ಜಿಸ್ಯಾಟ್ 11, ದೇಶದ ಪ್ರತಿ ಮೂಲೆಗೂ ಸೆಕೆಂಡಿಗೆ 16 ಜಿಬಿ ಡಾಟಾ ಸಂಪರ್ಕ ಸೇವೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ. 500 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಕುಗ್ರಾಮಗಳಿಗೂ ಅಂತರ್ಜಾಲದ ಸೌಲಭ್ಯ ಎಟಕುವಂತೆ ಮಾಡಲಿದೆ. ಇದರಿಂದ ಭಾರತವನ್ನು ಡಿಜಿಟಲೀಕರಣ ಮಾಡುವ ಯೋಜನೆ ಪ್ರಬಲಗೊಳ್ಳಲಿದೆ. ಕೋಟ್ಯಂತರ ಇಂಟರ್ನೆಟ್ ಬಳಕೆದಾರರಿಗೆ ಪ್ರಯೋಜನವಾಗಲಿದೆ.

ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!

English summary
ISRO on December 5 launched GSAT-11 Satellite from French Guiana. Here is the details on the benefits of GSAT-11 in Indian internet and broadband sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X