ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

|
Google Oneindia Kannada News

Recommended Video

Chandrayaan 2 : ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

ನವದೆಹಲಿ, ಸೆಪ್ಟೆಂಬರ್ 26: ವಿಕ್ರಮ ಲ್ಯಾಂಡರ್ ಆಯುಷ್ಯ ಕಳೆದುಕೊಂಡರೂ ಆರ್ಬಿಟರ್ ಚಂದ್ರನ ಸುತ್ತ ಸುತ್ತುತ್ತಿದ್ದು, ಅದರ ಕಾರ್ಯಕ್ಷಮತೆಯ ಬಗ್ಗೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತೆ ಸಿಹಿಸುದ್ದಿ ನೀಡಿದ್ದಾರೆ.

"ಚಂದ್ರಯಾನ 2 ಆರ್ಬಿಟರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ವಿಕ್ರಂ ಲ್ಯಾಂಡರ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತ ಡೆಟಾ ಪರಿಶೀಲಿಸಲು ನೇಮಿಸಿರುವ ರಾಷ್ಟ್ರ ಮಟ್ಟದ ಸಮಿತಿ ತನ್ನ ಅಭಿಪ್ರಾಯವನ್ನು ಇನ್ನೂ ಹೇಳಬೇಕಿದೆ" ಎಂದು ಶಿವನ್ ಹೇಳಿದ್ದಾರೆ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ಇಸ್ರೋ ಈಗ ಭವಿಷ್ಯದ ಬಾಹ್ಯಾಕಾಶ ಯೋಜನೆಗೆ ತಯಾರಿ ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಶಿವನ್ ಹೇಳಿದರು.

ಯಶಸ್ವಿ ಕಾರ್ಯನಿರ್ವಹಣೆ

ಯಶಸ್ವಿ ಕಾರ್ಯನಿರ್ವಹಣೆ

"ಆರ್ಬಿಟರ್ ಸುಮಾರು ಏಳು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಪೇಲೋಡ್ ಆಪರೇಶನ್ ಗಳೂ ಯಶಸ್ವಿಯಾಗಿ ನಡೆಯುತ್ತಿವೆ. ಆದರೆ ಲ್ಯಾಂಡರ್ ಕಡೆಯಿಂದ ಯಾವುದೇ ಸಿಗ್ನಲ್ ಲಭ್ಯವಾಗಿಲ್ಲ. ಲ್ಯಾಂಡರ್ ಸಂಪರ್ಕ ಕಡಿತಕ್ಕೆ ಕಾರಣವೇನು ಎಂಬ ಬಗ್ಗೆ ಈ ಸಮಿತಿ ವರದಿ ನೀಡಲಿದೆ. ನಾವು ಈಗ ಇಸ್ರೋದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಬಗ್ಗೆ ತಯಾರಿ ನಡೆಸುತ್ತಿದ್ದೇವೆ" ಎಂದು ಶಿವನ್ ಹೇಳಿದರು.

'ವಿಕ್ರಂ'ಗೆ ಇಂದು ಕೊನೇ ದಿನ: ಸಂಪರ್ಕದ ಬಗ್ಗೆ ಇಸ್ರೋ ಹೇಳಿದ್ದೇನು?'ವಿಕ್ರಂ'ಗೆ ಇಂದು ಕೊನೇ ದಿನ: ಸಂಪರ್ಕದ ಬಗ್ಗೆ ಇಸ್ರೋ ಹೇಳಿದ್ದೇನು?

ಸಂಪರ್ಕಕ್ಕೆ ಸಿಗದ ವಿಕ್ರಂ

ಸಂಪರ್ಕಕ್ಕೆ ಸಿಗದ ವಿಕ್ರಂ

ಸೆಪ್ಟೆಂಬರ್ 7 ರಂದು ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು.

ಚಂದ್ರನಲ್ಲಿ ಅಸಹನೀಯ ಚಳಿ

ಚಂದ್ರನಲ್ಲಿ ಅಸಹನೀಯ ಚಳಿ

ಸೆಪ್ಟೆಂಬರ್ 21 ರ ಒಳಗಾಗಿ, ಅಂದರೆ ಚಂದ್ರನಲ್ಲಿ ಚಳಿ ಆರಂಭವಾಗುವ ಮುನ್ನವೇ ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗಬೇಕಿತ್ತು. ಅದಿಲ್ಲವೆಂದರೆ ಇನ್ನೆಂದಿಗೂ ಆದು ಸಂಪರ್ಕಕ್ಕೆ ಸಿಗಲು ಸಾಧ್ಯವಿಲ್ಲ ಎಂದು ಇಸ್ರೋ ಹೇಳಿತ್ತು. ಸೆ.22 ರಿಂದ ಚಂದ್ರನಲ್ಲಿ ಆಸಹನೀಯ ಎಂಬಷ್ಟು ಚಳಿ ಆರಂಭವಾಗಿದ್ದು, ಕನಿಷ್ಠ -200 ವರೆಗೂ ತಲುಪಲಿದೆ. ಇ ವಾತಾವರಣದಲ್ಲಿ ವಿಕ್ರಂ ಲ್ಯಾಂದರ್ ಬದುಕುವುದಿಲ್ಲ ಎಂದು ಇಸ್ರೋ ಈ ಮೊದಲೇ ಹೇಳಿದೆ.

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

98% ಯಶಸ್ವಿ!

98% ಯಶಸ್ವಿ!

ಚಂದ್ರಯಾನ 2 ಕೊನೆಯಲ್ಲಿ ಲ್ಯಾಂಡರ್ ಸಂಪರ್ಕ ಕಳೆದುಕೊಂಡರೂ ಶೇ.98 ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಆಅರ್ಬಿಟರ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಚಂದ್ರನ ದಕ್ಷಿಣ ಧ್ರುವದ ಕುರಿತು ಅದೇ ಅಗತ್ಯ ಮಾಹಿತಿಗಳನ್ನು ನೀಡಲಿದೆ.

English summary
ISRO President K Sivan said, Orbiter is doing extremely well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X