ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2: ಇಸ್ರೋಗೆ ಮತ್ತೊಮ್ಮೆ ಭರವಸೆ ನೀಡಿದ ನಾಸಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ಚಂದ್ರಯಾನ 2 ಯೋಜನೆಯ ಅಂತಿಮ ಘಟ್ಟದಲ್ಲಿ ಇಸ್ರೋ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡ ವಿಕ್ರಂ ಲ್ಯಾಂಡರ್ ಪತ್ತೆಗೆ ಅಮೆರಿಕದ ನಾಸಾ ಮತ್ತೊಂದು ಪ್ರಯತ್ನ ನಡೆಸಿದೆ. ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್ಆರ್ಓ) ಲ್ಯಾಂಡರ್ ವಿಕ್ರಂ ಇಳಿದಿರಬಹುದಾದ ಪ್ರದೇಶದ ಇನ್ನೊಂದಷ್ಟು ಚಿತ್ರಗಳನ್ನು ತೆಗೆದಿದೆ. ಈ ಚಿತ್ರಗಳು ನಾಪತ್ತೆಯಾದ ವಿಕ್ರಮನ ಪತ್ತೆಗೆ ನೆರವಾಗುವ ಭರವಸೆ ನೀಡಿವೆ.

ಮೊದಲ ಬಾರಿ ನಾಸಾದ ಎಲ್‌ಆರ್‌ಓ ವಿಕ್ರಂ ಇಳಿದ ಸ್ಥಳದ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದಾಗ ಆ ಭಾಗದಲ್ಲಿ ಬಹುತೇಕ ನೆರಳು ಆವರಿಸಿತ್ತು. ಇದರಿಂದ ಚಿತ್ರಗಳು ಸ್ಪಷ್ಟವಾಗಿ ಮೂಡಿಬಂದಿರಲಿಲ್ಲ. ಈಗ ಚಂದ್ರನ ಮೇಲೆ ಬೆಳಕಿನ ವಾತಾವರಣ ಉತ್ತಮವಾಗಿದ್ದ ಸಂದರ್ಭದಲ್ಲಿ ಚಿತ್ರಗಳನ್ನು ತೆಗೆಯಲಾಗಿದೆ. ಜತೆಗೆ ಲ್ಯಾಂಡರ್ ಪತ್ತೆಗೆ ಕಠಿಣ ಪ್ರಯತ್ನ ನಡೆಸಲಾಗಿದೆ.

ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್

'ಸೋಮವಾರದಂದು ಚಂದ್ರನ ಮೇಲಿನ ಬೆಳಕಿನ ಸ್ಥಿತಿ ಸಾಕಷ್ಟು ಉತ್ತಮವಾಗಿತ್ತು. ಕಳೆದ ತಿಂಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ನೆರಳಿನ ಪ್ರಮಾಣ ಕಡಿಮೆಯಿತ್ತು. ಆರ್ಬಿಟರ್ ಈ ಬೆಳಕಿನ ಪ್ರಯೋಜನ ಪಡೆದುಕೊಂಡು ಕೆಲವು ಚಿತ್ರಗಳನ್ನು ತೆಗೆದಿದೆ' ಎಂದು ಎಲ್ಆರ್‌ಓ ಯೋಜನೆಯ ವಿಜ್ಞಾನಿ ನೋಹ್ ಪೆಟ್ರೋ ತಿಳಿಸಿದ್ದಾರೆ.

ಐಐಆರ್‌ಎಸ್ ಪೇಲೋಡ್ ತೆಗೆದ ಚಿತ್ರ

ಐಐಆರ್‌ಎಸ್ ಪೇಲೋಡ್ ತೆಗೆದ ಚಿತ್ರ

ಚಂದ್ರಯಾನ 2ರ ಐಐಆರ್‌ಎಸ್ ಪೇಲೋಡ್ ತೆಗೆದ ಚಂದ್ರನ ಮೇಲ್ಮೈನ ಮೊದಲ ಮಿನುಗುವ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ. ಚಂದ್ರನ ಮೇಲ್ಭಾಗದಿಂದ ಕಡಿದಾದ ಮತ್ತು ಅಂಟಿಕೊಂಡಂತಿರುವ ಚಾನೆಲ್‌ಗಳ ಮೂಲಕ ಪ್ರತಿಫಲಿತಗೊಳ್ಳುವ ಸೂರ್ಯನ ಕಿರಣಗಳನ್ನು ಮಾಪನ ಮಾಡುವಂತೆ ಐಐಆರ್‌ಎಸ್ ಪೇಲೋಡ್‌ಅನ್ನು ವಿನ್ಯಾಸಗೊಳಿಸಲಾಗಿದೆ.

ದಟ್ಟವಾಗಿದ್ದ ನೆರಳು

ದಟ್ಟವಾಗಿದ್ದ ನೆರಳು

ಸೆ. 7ರಂದು ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್‌ಅನ್ನು ಪತ್ತೆಹಚ್ಚಲು ಸೆ. 17ರಂದು ನಾಸಾದ ಎಲ್‌ಆರ್‌ಓ ಈ ಭಾಗದಲ್ಲಿ ಒಂದು ಸುತ್ತು ಹಾಕಿ ಚಿತ್ರಗಳನ್ನು ತೆಗೆದಿತ್ತು. ಆದರೆ ಆ ವೇಳೆ ಚಂದ್ರನ ಮೇಲೆ ಕತ್ತಲು ಆವರಿಸುತ್ತಾ ಬಂದಿತ್ತು. ಜತೆಗೆ ಆ ಭಾಗದಲ್ಲಿ ತಗ್ಗುದಿಣ್ಣೆಗಳು ಹೆಚ್ಚಿರುವುದರಿಂದ ನೆರಳಿನ ಪ್ರಮಾಣವೂ ದಟ್ಟವಾಗಿತ್ತು. ಕುಳಿಯೊಳಗೆ ಲ್ಯಾಂಡರ್ ಇಳಿದಿದ್ದರೆ ಅದು ನೆರಳಿನ ಕಾರಣದಿಂದ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ನಾಸಾ ಹೇಳಿತ್ತು.

ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್

ಚಿತ್ರಗಳ ಮೌಲ್ಯಮಾಪನ

ಚಿತ್ರಗಳ ಮೌಲ್ಯಮಾಪನ

'ನಮ್ಮ ಆರ್ಬಿಟರ್ ಸೋಮವಾರದಂದು ಆರ್ಬಿಟರ್ ಇಳಿದ ಪ್ರದೇಶದ ಮೇಲೆ ಹಾದು ಹೋಗಿದೆ. ಆಗ ತೆಗೆದ ಚಿತ್ರಗಳನ್ನು ನಮ್ಮ ಕ್ಯಾಮೆರಾ ತಂಡ ಮೌಲ್ಯಮಾಪನ ಮಾಡುತ್ತಿದೆ. ಹೀಗಾಗಿ ಅದರ ಬಗ್ಗೆ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು' ಎಂದು ಪೆಟ್ರೋ ಹೇಳಿದ್ದಾರೆ.

ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ

ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ

'ನಾವು ಅತ್ಯಂತ ಜಾಗರೂಕತೆಯಿಂದ ಪರಿಶೀಲನೆ ನಡೆಸಲಿದ್ದೇವೆ. ಎಷ್ಟು ಸಾಧ್ಯವೋ ಅಷ್ಟು ಕಠಿಣವಾಗಿ ಕೆಲಸ ಮಾಡಲಿದ್ದೇವೆ. ವಿಕ್ರಂ ಲ್ಯಾಂಡರ್‌ಗೆ ಏನಾಗಿದೆ ಎಂಬುದನ್ನು ಶೀಘ್ರವೇ ಅದನ್ನು ಪತ್ತೆಹಚ್ಚಲಿದ್ದೇವೆ ಕೂಡ' ಎಂದು ವಾಷಿಂಗ್ಟನ್‌ ಸಮೀಪದ ಮೇರಿಲ್ಯಾಂಡ್‌ನಲ್ಲಿನ ಗೊಡ್ಡಾರ್ಡ್ ಬಾಹ್ಯಾಕಾಶ ವೈಮಾನಿಕ ಕೇಂದ್ರದಲ್ಲಿರುವ ಪೆಟ್ರೋ ಭರವಸೆ ನೀಡಿದ್ದಾರೆ.

ಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋ

ನ.10ರಂದು ಮತ್ತೊಮ್ಮೆ ಸುತ್ತಾಟ

ನ.10ರಂದು ಮತ್ತೊಮ್ಮೆ ಸುತ್ತಾಟ

'ಇದು ಬಹಳ ದೊಡ್ಡ ಪ್ರದೇಶ. ಇಷ್ಟು ವಿಶಾಲ ಪ್ರದೇಶದಲ್ಲಿ ನಾವು ನಿರ್ದಿಷ್ಟವಾಗಿ ಎಲ್ಲಿ ಹುಡುಕಾಟ ಕಾರ್ಯಾಚರಣೆ ನಡೆಸಬೇಕು ಎನ್ನುವುದು ತಿಳಿದಿಲ್ಲ. ಹೀಗಾಗಿ ಲ್ಯಾಂಡರ್ ಇಳಿದಿರಬಹುದಾದ ಸ್ಥಳವನ್ನು ಪತ್ತೆಹಚ್ಚಲು ಕೆಲವು ಸಮಯ ಬೇಕಾಗಬಹುದು. ಈ ಚಿತ್ರಗಳ ಪರಿಶೀಲನೆ ನಡೆಸುವುದು ಸಹ ಕ್ಲಿಷ್ಟಕರ ಸಂಗತಿ. ಎಲ್‌ಆರ್‌ಓ ನ.10ರಂದು ಮತ್ತೊಮ್ಮೆ ಈ ಭಾಗದಲ್ಲಿ ಸುತ್ತಾಟ ನಡೆಸಲಿದ್ದು, ಆಗ ಚಂದ್ರನ ಈ ಪ್ರದೇಶದಲ್ಲಿ ಇನ್ನೂ ಉತ್ತಮ ಬೆಳಕಿನ ಲಭ್ಯತೆ ಇರುತ್ತದೆ. ಇದರಿಂದ ಚಿತ್ರಗಳು ಇನ್ನಷ್ಟು ಸ್ಪಷ್ಟವಾಗಿ ಲಭಿಸಬಹುದು' ಎಂದಿದ್ದಾರೆ.

English summary
NASA said that its ISRO will be making a rigorous search for the Chandrayaan 2 Vikram lander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X