ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆ

|
Google Oneindia Kannada News

ಬೆಂಗಳೂರು, ನವೆಂಬರ್ 14: ಇಸ್ರೋ ಪ್ರಸಕ್ತ ವರ್ಷ ಉಡಾವಣೆ ಮಾಡಿದ ಚಂದ್ರಯಾನ 2 ಯೋಜನೆ ಭಾಗಶಃ ಯಶಸ್ವಿಯಾಗಿದೆ. ವಿಕ್ರಂ ಲ್ಯಾಂಡರ್ ನಿರೀಕ್ಷೆಯಂತೆ ಚಂದ್ರನ ಅಂಗಳದ ಮೇಲೆ ಸುಗಮವಾಗಿ ಇಳಿದು ಚಟುವಟಿಕೆ ನಡೆಸಿ ಮಹತ್ವದ ಮಾಹಿತಿಗಳನ್ನು ರವಾನಿಸುವ ಕಾರ್ಯದಲ್ಲಿ ವಿಫಲವಾದರೂ, ಆರ್ಬಿಟರ್ ನೌಕೆ ಮತ್ತು ಅದರಲ್ಲಿನ ಪೇಲೋಡ್‌ಗಳು ತಮ್ಮ ಹೊಣೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ.

ಈ ನಡುವೆ ಬಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವದ ಯೋಜನೆಯತ್ತ ಹೆಜ್ಜೆ ಇರಿಸಿದೆ. 2020ರ ನವೆಂಬರ್‌ ಅಂತ್ಯದೊಳಗೆ ಚಂದ್ರಯಾನ 3ರ ಕಾರ್ಯಚಟುವಟಿಕೆಗಳನ್ನು ಆರಂಭಿಸಲಿದೆ.

ಚಂದ್ರಯಾನ 2 ಮುಕ್ತಾಯವಾಗಿಲ್ಲ: ಹೊಸ ಭರವಸೆ ನೀಡಿದ ಕೆ.ಶಿವನ್ಚಂದ್ರಯಾನ 2 ಮುಕ್ತಾಯವಾಗಿಲ್ಲ: ಹೊಸ ಭರವಸೆ ನೀಡಿದ ಕೆ.ಶಿವನ್

ಒಟ್ಟಾರೆ ಚಂದ್ರಯಾನ 3 ಯೋಜನೆಯ ಸಮಿತಿ ಮತ್ತು ಮೂರು ಉಪ ಸಮಿತಿಗಳು ಸೇರಿದಂತೆ ಇಸ್ರೋ ಬಹು ಸಮಿತಿಗಳನ್ನು ರಚಿಸಿದೆ. ಅಕ್ಟೋಬರ್‌ನಿಂದ ಈ ಸಮಿತಿಗಳು ಕನಿಷ್ಠ ನಾಲ್ಕು ಉನ್ನತ ಮಟ್ಟದ ಸಭೆಗಳನ್ನು ನಡೆಸಿದೆ. ಈ ಸಭೆಯಲ್ಲಿ ಚಂದ್ರಯಾನ 3 ಯೋಜನೆಯ ರೂಪುರೇಷೆ ಬಗ್ಗೆ ಗಹನವಾಗಿ ಚರ್ಚಿಸಲಾಗಿದೆ.

ಹೊಸ ಯೋಜನೆಯಲ್ಲಿ ಆರ್ಬಿಟರ್ ಇಲ್ಲ

ಹೊಸ ಯೋಜನೆಯಲ್ಲಿ ಆರ್ಬಿಟರ್ ಇಲ್ಲ

ಚಂದ್ರಯಾನ 3 ಯೋಜನೆಯು ಆರ್ಬಿಟರ್‌ಅನ್ನು ಒಳಗೊಂಡಿರುವುದಿಲ್ಲ. ಈ ಯೋಜನೆಯಲ್ಲಿ ಲ್ಯಾಂಡರ್ ಮತ್ತು ರೋವರ್ ಮಾತ್ರ ಬಾನಂಗಳದತ್ತ ಹಾರಲಿವೆ. ಚಂದ್ರಯಾನ 2ರ ಆರ್ಬಿಟರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಲ್ಲಿ ಆರ್ಬಿಟರ್ ಒಳಗೊಂಡಿಲ್ಲ.

ಶಿಫಾರಸುಗಳ ಪರಿಶೀಲನೆ

ಶಿಫಾರಸುಗಳ ಪರಿಶೀಲನೆ

ಚಂದ್ರಯಾನ 3ರ ಸಂರಚನೆ (ಕಾನ್ಫಿಗರೇಷನ್) ಯಾವ ರೀತಿ ಇರಬೇಕು ಎಂಬ ಕಾರ್ಯಸೂಚಿಯನ್ನು ಪರಾಮರ್ಶಿಸುವ ಕುರಿತು ಮಂಗಳವಾರ ಅವಲೋಕನ ಸಮಿತಿ ಸಭೆ ನಡೆಸಿತ್ತು. ಸಂಚಾಲನೆ, ಸೆನ್ಸಾರ್‌ಗಳು, ಒಟ್ಟಾರೆ ಎಂಜಿನಿಯರಿಂಗ್, ನಾವಿಗೇಷನ್ ಮತ್ತು ಮಾರ್ಗದರ್ಶನ ಕುರಿತು ವಿವಿಧ ಉಪ ಸಮಿತಿಗಳು ನೀಡಿರುವ ಶಿಫಾರಸುಗಳನ್ನು ಸಹ ಸಮಿತಿ ಪರಿಶೀಲಿಸಿತು.

ಇಸ್ರೋ ಇದುವರೆಗೂ ಯೋಜನೆಯ 10 ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಿದೆ. ಇದರಲ್ಲಿ ಲ್ಯಾಂಡರ್ ಇಳಿಯುವ ಸ್ಥಳದ ಆಯ್ಕೆ, ಪರಿಪೂರ್ಣ ಸಂಚರಣೆ (ನಾವಿಗೇಷನ್) ಮತ್ತು ಸ್ಥಳೀಯ ಸಂಚರಣೆ ಒಳಗೊಂಡಿದೆ.

ಪತ್ತೆಯಾಗದ ವಿಕ್ರಂ ಲ್ಯಾಂಡರ್: ಬರಿಗೈಲಿ ಮರಳಿದ ನಾಸಾ ಆರ್ಬಿಟರ್ಪತ್ತೆಯಾಗದ ವಿಕ್ರಂ ಲ್ಯಾಂಡರ್: ಬರಿಗೈಲಿ ಮರಳಿದ ನಾಸಾ ಆರ್ಬಿಟರ್

ಸುಧಾರಿತ ಲ್ಯಾಂಡರ್ ವ್ಯವಸ್ಥೆ

ಸುಧಾರಿತ ಲ್ಯಾಂಡರ್ ವ್ಯವಸ್ಥೆ

ಲ್ಯಾಂಡರ್ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯವಿರುವ ಬದಲಾವಣೆಗಳ ಕುರಿತಾದ ವಿಸ್ತೃತ ವಿಶ್ಲೇಷಣೆಯನ್ನು ನಡೆಸುವುದು ಅಗತ್ಯವಾಗಿದ್ದು, ಇದಕ್ಕಾಗಿ ಚಂದ್ರಯಾನ 2ರ ಪರಿಣತರ ಸಮಿತಿಯ ಶಿಫಾರಸುಗಳು ಮತ್ತು ಚಂದ್ರಯಾನ 2 ಸಿದ್ಧತೆಯ ಅಂತಿಮ ಹಂತದ ಕಾರಣ ಅಳವಡಿಸಲು ಸಾಧ್ಯವಾಗದ ಶಿಫಾರಸುಗಳನ್ನು ಇಲ್ಲಿ ಪರಿಗಣಿಸಬೇಕು ಎಂದು ಅಕ್ಟೋಬರ್ 5ರಂದು ಇಸ್ರೋದ ಸೂಚನೆ ಹೊರಡಿಸಿರುವುದಾಗಿ ವಿಜ್ಞಾನಿಯೊಬ್ಬರು ತಿಳಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಹೆಚ್ಚು ಗಟ್ಟಿಯಾದ ಲ್ಯಾಂಡರ್

ಹೆಚ್ಚು ಗಟ್ಟಿಯಾದ ಲ್ಯಾಂಡರ್

ಚಂದ್ರಯಾನ 3 ಯೋಜನೆಯಲ್ಲಿ ಲ್ಯಾಂಡರ್‌ನ ಕಾಲುಗಳನ್ನು ಬಲಪಡಿಸುವುದು ಪ್ರಮುಖ ಆದ್ಯತೆಯಾಗಿದೆ. ಇದರಿಂದ ಅತಿ ವೇಗದಿಂದ ಚಲಿಸುವಾಗಲೂ ಅದು ದೃಢವಾಗಿ ಚಂದ್ರನ ಮೇಲೆ ಇಳಿಯಲು ನೆರವಾಗಲಿದೆ ಎಂದು ಮತ್ತೊಬ್ಬ ವಿಜ್ಞಾನಿ ತಿಳಿಸಿದ್ದಾರೆ. ಇಸ್ರೋ ಹೊಸದಾದ ರೋವರ್ ಮತ್ತು ಲ್ಯಾಂಡರ್‌ಅನ್ನು ನಿರ್ಮಿಸುತ್ತಿದೆ. ಲ್ಯಾಂಡರ್‌ನಲ್ಲಿ ಎಷ್ಟು ಸಂಖ್ಯೆಯ ಪೇಲೋಡ್‌ಗಳು ಇರಲಿವೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಇಂಧನವನ್ನು ಸಾಗಿಸುವ ಪ್ರತ್ಯೇಕಿಸಬಹುದಾದ ಮಾದರಿಯ ವಾಹಕವನ್ನು ಹೊಂದಲು ಇಸ್ರೋ ತಂಡ ಬಯಸಿದೆ. ಇದನ್ನು ಪ್ರೊಪಲ್ಷನ್ ಸಾಧನ ಎಂದು ಕರೆಯಲಾಗುತ್ತದೆ. ಇದು ಲ್ಯಾಂಡರ್ ಒಳಗೆ ರೋವರ್ ಸೆಟ್ಟಿಂಗ್‌ಗಳನ್ನು ಹೊಂದಿರುವ ಲ್ಯಾಂಡಿಂಗ್ ಸಾಧನವನ್ನು ಚಂದ್ರನ ಕಕ್ಷೆಗೆ ಕೊಂಡೊಯ್ಯಲು ನೆರವಾಗುತ್ತದೆ.

ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್

ಇಂಧನ ರವಾನೆ ಸರಾಗ

ಇಂಧನ ರವಾನೆ ಸರಾಗ

ಚಂದ್ರಯಾನ 2ರಲ್ಲಿ ಉಡಾವಣೆಯಾದ ಬಳಿಕ ಲ್ಯಾಂಡಿಂಗ್ ಸಾಧನ ಪ್ರತ್ಯೇಕವಾಗುವವರೆಗೂ ಇಂಧನವನ್ನು ಆರ್ಬಿಟರ್‌ನಲ್ಲಿಯೇ ಸಾಗಿಸಲಾಗಿತ್ತು. ಇದರಲ್ಲಿ ಇಂಧನ ಬಳಕೆಯನ್ನು ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳು ನಿಯಂತ್ರಿಸುತ್ತಿದ್ದರು. ಈಗ ಈ ಪ್ರಕ್ರಿಯೆಯನ್ನು ಪ್ರೊಪಲ್ಷನ್ ಮಾದರಿ ಸುಲಭಗೊಳಿಸುತ್ತದೆ. ಭೂಮಿಯ ಸುತ್ತ ಮತ್ತು ಚಂದ್ರನ ಕಕ್ಷೆಗೆ ವರ್ಗಾಯಿಸುವ ಸಂದರ್ಭದಲ್ಲಿ ನಡೆಸುವ ಮಾನವ ನಿಯಂತ್ರಿತ ಚಲನೆಯ ಕಾರ್ಯಚಟುವಟಿಕೆಗಳನ್ನು ಕಡಿಮೆಗೊಳಿಸಲು ಇಸ್ರೋ ಪ್ರಯತ್ನಿಸುತ್ತಿದೆ. ಆರು ಕೌಶಲ ಚಲನೆಗಳ ಬದಲು ಮೂರು ಅಥವಾ ನಾಲ್ಕು ಚಲನೆಗಳನ್ನು ಹೊಂದಲಾಗುತ್ತದೆ ಎಂದು ಮೂಲಗಳು ಹೇಳಿವೆ.

English summary
ISRO will begun its work on Chandrayaan 3 mission in November 2020. This mission will not include orbiter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X