ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ವೆಬ್ ತಾಣ ಹ್ಯಾಕ್ ಮಾಡಿದ್ದು ಏತಕ್ಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜು. 13: ಬ್ರಿಟಿಷ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ಸಾಧನೆ ಮರೆರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ವೆಬ್ ತಾಣಕ್ಕೆ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ. ಇಸ್ರೋದ ವಾಣಿಜ್ಯ ವಿಭಾಗದ ವೆಬ್ ತಾಣಕ್ಕೆ ಕನ್ನ ಹಾಕಲಾಗಿದೆ. ಹ್ಯಾಕರ್ ಗಳ ಪತ್ತೆ ಕಾರ್ಯ ನಡೆಯುತ್ತಿದೆ.

ನಾಲ್ಕು ವರ್ಷದ ಹಿಂದೆ ಪಾಕಿಸ್ತಾನದ ಸೈಬರ್ ಸಂಸ್ಥೆಯೊಂದು ಸಿಬಿಐನ ತಾಣವನ್ನೇ ಹ್ಯಾಕ್ ಮಾಡಿತ್ತು. ನಂತರ ವೆಬ್ ತಾಣವನ್ನು ಸುರಕ್ಷಿತವಾಗಿರಿಸಲಾಗುತ್ತು.[ಭಾರದ ಉಪಗ್ರಹ ಉಡ್ಡಯನ: ಇಸ್ರೋಗೆ ಮತ್ತೊಂದು ಗರಿ]

isro

ಸೈಬರ್ ಯುದ್ಧ
ಈ ಬಗೆಯ ಕ್ರಮಗಳ ಮೂಲಕ ಚೀನಾ ಮತ್ತು ಪಾಕಿಸ್ತಾನ ಸೈಬರ್ ಯುದ್ಧ ಮಾಡುತ್ತಿವೆ. ಕೇವಲ ಡಾಟಾ ಅಪಹರಿಸಲು ವೆಬ್ ತಾಣವನ್ನು ಹ್ಯಾಕ್ ಮಾಡಲಾಗುತ್ತಿಲ್ಲ. ಇದರೊಂದಿಗೆ ತಪ್ಪು ಸಂದೇಶಗಳನ್ನು ಸಾರಿ ಮೇಲುಗೈ ಸಾಧಿಸಲು ದೇಶಗಳು ನೋಡುತ್ತಿವೆ. ಡಾಟಾ ಕಳ್ಳತನ ಮಾಡುವುದರೊಂದಿಗೆ, ವಿವಿಧ ಬಗೆಯ ಸಂದೇಶ ಮಾರ್ಪಾಡು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಯೋಚನೆ ಪಾಕಿಸ್ತಾನಿಯರದ್ದು.

ಹ್ಯಾಕ್ ಮಾಡುವುದು ಒಂದು ಮೋಜೆ?
ಚೀನಾದವರಿಗೆ ಹ್ಯಾಕ್ ಮಾಡುವುದು ಒಂದು ಮೋಜಿನ ಸಂಗತಿಯಾಗಿ ಹೋಗಿದೆ. ಅಲ್ಲದೇ ಪಾಕಿಸ್ತಾನಿಗಳು ವೆಬ್ ತಾಣ ಹ್ಯಾಕ್ ಮಾಡುವುದಲ್ಲದೇ 'ತಾಕತ್ತು ಇದ್ದರೆ ಹಿಡಿಯರಿ', 'ನಿಮ್ಮನ್ನು ನಾಶ ಮಾಡುತ್ತೇವೆ ' ಎಂಬ ಬಗೆಯ ಬಗೆಯ ಸಂದೇಶಗಳನ್ನು ರವಾನೆ ಮಾಡಲಾಗುತ್ತದೆ. ಗುಪ್ತಚರ ಇಲಾಖೆ ಎಷ್ಟೇ ಜಾಗರೂಕವಾಗಿದ್ದರೂ ಪಾಕಿಸ್ತಾನಿಗಳೂ ವೆಬ್ ತಾಣವನ್ನು ಹ್ಯಾಕ್ ಮಾಡಿರುವುದು ಮಾತ್ರ ವಿಚಿತ್ರ.

ಭಾರತದ ವೆಬ್ ತಾಣಗಳ ಮೇಲೆ ಕನ್ನ
2011 ರಿಂದ 2014ರ ನಡುವಿನ ಅವಧಿಯಲ್ಲಿ ಭಾರತದ 86,959 ವೆಬ್ ತಾಗಳನ್ನು ಹ್ಯಾಕ್ ಮಾಡಲಾಗಿತ್ತು. ಅಲ್ಲದೇ ಈ ಬಗೆಯ ಕುಟಿಲ ತಂತ್ರಗಳು ಮುಂದುವರಿದೇ ಇದೆ. ಸರ್ಕಾರಕ್ಕೆ ಸಂಬಂಧೀಸಿದ, ವೈಜ್ಞಾನಿಕ ಮತ್ತು ವಿಜ್ಞಾನ ಕ್ಷೇತ್ರಕ್ಕೆಸಮಬಂಧಿಸಿದ ವೆಬ್ ತಾಣಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಸರ್ಕಾರದೊಂದಿಗೆ ಸಂಬಂಧ ಇರಿಸಿಕೊಂಡುರುವ ಖಾಸಗಿ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದು ಕಂಡುಬಂದಿದೆ.

ಅಮೆರಿಕ, ಸ್ಪೇನ್ ನಲ್ಲೂ ಈ ಬೆಗೆಯ ವೆಬ್ ತಾಣ ಹ್ಯಾಕಿಂಗ್ ಪ್ರಕರಣಗಳು ಸಾಕಷ್ಟು ದಾಖಲಾಗಿವೆ. ಆದರೆ ನಿಜವಾದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಅಲ್ಲಿನ ಸರ್ಜಾರಗಳೀ ವಿಫಲವಾಗಿವೆ.

English summary
The hacking or the defacing of the website of Antrix Corporation Limited, the marketing arm of the Indian Space Research Organisation appears to be an act of mischief by a cyber army.While the probe to find the culprits behind the attack is on, it has been made clear that no sensitive data was compromised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X