ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರಿ ಹುಡುಕಲು ಗೂಗಲ್ ಮ್ಯಾಪ್ ಬೇಕಿಲ್ಲ; ಬರಲಿದೆ ಸ್ವದೇಶಿ ಮ್ಯಾಪ್

|
Google Oneindia Kannada News

ನವದೆಹಲಿ, ಫೆಬ್ರವರಿ 13: ನಗರಗಳ ಒಳಗೆ ಹಾಗೂ ಇತರೆ ಗೊತ್ತಿಲ್ಲದ ಸ್ಥಳಗಳಿಗೆ ತೆರಳುವವರಿಗೆ ಇರುವ ಮಾರ್ಗದರ್ಶಕವೆಂದರೆ ಗೂಗಲ್ ಮ್ಯಾಪ್. ಆಧುನಿಕ ಯುಗದಲ್ಲಿ ಹೆಚ್ಚಿನವರು ತಮ್ಮ ದಿಕ್ಕು ಕಂಡುಕೊಳ್ಳಲು ಗೂಗಲ್ ಮ್ಯಾಪ್ ಬಳಸುತ್ತಾರೆ. ಅಲ್ಲದೆ ಇದು ವಿವಿಧ ಸ್ಥಳ, ಸಂಸ್ಥೆಗಳು, ಅಂಗಡಿ, ಹೋಟೆಲ್ ಮುಂತಾದವುಗಳನ್ನು ಹುಡುಕಲು ಸಹ ನೆರವಾಗುತ್ತದೆ. ಹಾಗೆಂದು ಗೂಗಲ್ ನಕಾಶೆ ಯಾವಾಗಲೂಸರಿಯಾದ ದಾರಿಯನ್ನೇ ತೋರಿಸುತ್ತದೆ ಎನ್ನುವಂತಿಲ್ಲ. ಎಷ್ಟೋ ಬಾರಿ ದಾರಿಯೇ ಇಲ್ಲದ ಜಾಗದಲ್ಲಿ ಹೋಗುವಂತೆಯೂ ಸೂಚಿಸಿ ಜನರನ್ನು ಕಂಗೆಡಿಸುತ್ತದೆ.

ಈ ನಡುವೆ ಗೂಗಲ್ ಮ್ಯಾಪ್‌ಗೆ ಪರ್ಯಾಯವಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಉಪಗ್ರಹ ಆಧಾರಿತ ಹೊಸ ನೇವಿಗೇಷನ್ ಸೌಲಭ್ಯವನ್ನು ನೀಡಲಿದೆ ಎಂದು ಹೇಳಲಾಗಿತ್ತು. ಆ ಸಮಯ ಹತ್ತಿರಬರುತ್ತಿದೆ. ನೇವಿಗೇಷನ್ ಪರಿಹಾರ ಪೂರೈಕೆದಾರ ಮ್ಯಾಪ್ ಮೈ ಇಂಡಿಯಾ ಸಂಸ್ಥೆ ಹಾಗೂ ಇಸ್ರೋ ಸಂಸ್ಥೆ ಗೂಗಲ್ ಮ್ಯಾಪ್ ಬದಲು ಸ್ವದೇಶಿ ನಕಾಶೆ ಸೌಲಭ್ಯ ಒದಗಿಸಲು ಕೈಜೋಡಿಸಿವೆ.

 ಗೂಗಲ್ ಸಬ್‌ಸೀ ಕೇಬಲ್: ಸೆಕೆಂಡಿಗೆ 250 ಟಿಬಿ ಡೇಟಾ ತಲುಪಿಸುತ್ತದೆ! ಗೂಗಲ್ ಸಬ್‌ಸೀ ಕೇಬಲ್: ಸೆಕೆಂಡಿಗೆ 250 ಟಿಬಿ ಡೇಟಾ ತಲುಪಿಸುತ್ತದೆ!

ಈ ಎರಡೂ ಸಂಸ್ಥೆಗಳು ಸೇರಿ ಭಾರತ ನಿರ್ಮಿತ ನಕಾಶೆ ಪೋರ್ಟಲ್ ಮತ್ತು ಭೂಬಾಹ್ಯಾಕಾಶ ಸೇವೆಗಳನ್ನು ಸಿದ್ಧಪಡಿಸಿವೆ ಎಂದು ಮ್ಯಾಪ್ ಮೈ ಇಂಡಿಯಾದ ಸಿಇಒ ಹಾಗೂ ಕಾರ್ಯಕಾರಿ ನಿರ್ದೇಶಕ ರೋಹನ್ ವರ್ಮಾ ತಿಳಿಸಿದ್ದಾರೆ. ಮುಂದೆ ಓದಿ.

ಗೂಗಲ್ ಮ್ಯಾಪ್ ಬೇಕಾಗೊಲ್ಲ

ಗೂಗಲ್ ಮ್ಯಾಪ್ ಬೇಕಾಗೊಲ್ಲ

'ಈ ಸಹಯೋಗವು ಆತ್ಮನಿರ್ಭರ ಭಾರತ ಯೋಜನೆಗೆ ಮತ್ತಷ್ಟು ಉತ್ಸಾಹ ತುಂಬಲಿದೆ. ಇನ್ನು ಮುಂದೆ ಭಾರತೀಯರು ಭಾರತದ ಹೊರಗೆ ಸಿದ್ಧವಾದ ಸೇವೆಯ ಬದಲು ಸ್ವದೇಶಿಗರೇ ನಿರ್ಮಿಸಿದ ಸೌಲಭ್ಯವನ್ನು ಅವಲಂಬಿಸಬಹುದು. ನಿಮಗೆ ಇನ್ನು ಮುಂದೆ ಗೂಗಲ್ ಮ್ಯಾಪ್ ಅಥವಾ ಅರ್ಥ್ ಅಗತ್ಯ ಬರುವುದಿಲ್ಲ' ಎಂದು ರೋಹನ್ ವರ್ಮಾ ಹೇಳಿದ್ದಾರೆ.

ಒಪ್ಪಂದಕ್ಕೆ ಸಹಿ

ಒಪ್ಪಂದಕ್ಕೆ ಸಹಿ

ಬಾಹ್ಯಾಕಾಶ ಇಲಾಖೆಯು (ಡಿಒಎಸ್) ಭೂಪ್ರಾದೇಶಿಕ ತಂತ್ರಜ್ಞಾನ ಕಂಪೆನಿಯಾಗಿರುವ ಮ್ಯಾಪ್ ಮೈ ಇಂಡಿಯಾ ಮಾಲೀಕ ಸಂಸ್ಥೆ ಸಿಇ ಇನ್ಫೋ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಜತೆ ಶುಕ್ರವಾರ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ತಮ್ಮ ಜಿಯೋಪೋರ್ಟಲ್‌ಗಳನ್ನು ಒಂದುಗೂಡಿಸುವ ಮೂಲಕ ಮತ್ತು ಭೂಬಾಹ್ಯಾಕಾಶ ಪರಿಣತಿಯನ್ನು ವೃದ್ಧಿಸುವ ಮೂಲಕ ದಿಕ್ಸೂಚಿ ಸೇವೆಯನ್ನು ಅಭಿವೃದ್ಧಿಪಡಿಸಲಿವೆ.

ದ್ವಿಚಕ್ರವಾಹನ ಸಂಚಾರಿಗಳೇ ಗಮನಿಸಿ, ಗೂಗಲ್ ಮಾರ್ಗದರ್ಶಿಯಲ್ಲಿ ಕನ್ನಡದ್ವಿಚಕ್ರವಾಹನ ಸಂಚಾರಿಗಳೇ ಗಮನಿಸಿ, ಗೂಗಲ್ ಮಾರ್ಗದರ್ಶಿಯಲ್ಲಿ ಕನ್ನಡ

ಭೂಪ್ರಾದೇಶಿಕ ಪರಿಹಾರ

ಭೂಪ್ರಾದೇಶಿಕ ಪರಿಹಾರ

'ಈ ಸಹಭಾಗಿತ್ವವು ಭೂ ಅವಲೋಕನಾ ದತ್ತಾಂಶಗಳು, ನಾವಲ್‌ಸಿ, ವೆಬ್ ಸೇವೆಗಳು ಮತ್ತು ಮ್ಯಾಪ್ ಮೈ ಇಂಡಿಯಾದಲ್ಲಿನ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಭುವನ್, ವೇದಾಸ್ ಮತ್ತು ಮೋಸ್ದಾಕ್ ಜಿಯೋಪೋರ್ಟಲ್‌ಗಳನ್ನು ಬಳಸಿಕೊಂಡು ಜಂಟಿಯಾಗಿ ಗುರುತಿಸುವ ಮತ್ತು ಸಮಗ್ರ ಭೂಪ್ರಾದೇಶಿಕ ಪರಿಹಾರವೊಂದನ್ನು ನಿರ್ಮಿಸಲಿವೆ' ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ಇಸ್ರೋದ್ ನಾವೆಲ್‌ಸಿ

ಇಸ್ರೋದ್ ನಾವೆಲ್‌ಸಿ

ಇಸ್ರೋ ಈಗಾಗಲೇ ನಾವಲ್‌ಸಿ (ಭಾರತೀಯ ಪ್ರಾದೇಶಿಕ ನೇವಿಗೇಷನ್ ಉಪಗ್ರಹ ವ್ಯವಸ್ಥೆ ಅಥವಾ ಐಆರ್‌ಎನ್‌ಎಸ್ಎಸ್) ಅಭಿವೃದ್ಧಪಡಿಸಿದ್ದು, ಅದು ಸ್ವದೇಶಿ ನಿರ್ಮಿತ ನೇವಿಗೇಷನ್ ವ್ಯವಸ್ಥೆ ಇಂಡಿಯನ್ ಕಂಸ್ಟೆಲ್ಲೇಷನ್ ಜತೆ ಕೆಲಸ ಮಾಡುತ್ತಿದೆ.

ಹಲವಾರು ಸವಲತ್ತುಗಳು

ಹಲವಾರು ಸವಲತ್ತುಗಳು

ಇಸ್ರೋ ಪಾಲುದಾರಿಕೆಯಲ್ಲಿ ಮ್ಯಾಪ್ ಮೈ ಇಂಡಿಯಾದ ಎಂಡ್ ಯೂಸರ್ ನಕಾಶೆ, ಆಪ್‌ಗಳು ಮತ್ತು ಸೇವೆಗಳು ಇಸ್ರೋದ ಉಪಗ್ರಹ ಚಿತ್ರ, ಭೂ ಸರ್ವೇಕ್ಷಣೆಯ ದತ್ತಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಭಾರತದ ಎಲ್ಲ ಸೂಕ್ಷ್ಮ ಪ್ರದೇಶಗಳನ್ನೂ ಸುಲಭವಾಗಿ ಕಂಡುಕೊಳ್ಳಬಹುದು. ಜತೆಗೆ ಹವಾಮಾನ, ಮಾಲಿನ್ಯ, ಕೃಷಿ ಉತ್ಪನ್ನ, ಭೂ ಬಳಕೆ ಬದಲಾವಣೆಗಳು, ಪ್ರವಾಹ, ಭೂಕುಸಿದಂತಹ ವಿಪತ್ತುಗಳ ವಿಶ್ಲೇಷಣೆಗಳು ಹಾಗೂ ಒಳನೋಟಗಳನ್ನು ಕೂಡ ಇದು ಒದಗಿಸಲಿದೆ ಎಂದು ಮ್ಯಾಪ್ ಮೈ ಇಂಡಿಯಾ ಹೇಳಿದೆ.

English summary
ISRO and MapMyIndia signed an agreement to build India made mapping solution as an alternative to Google Maps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X