• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್ ತಂತ್ರಜ್ಞಾನದ ಸೆಳೆತದಲ್ಲಿ ಭಾರತೀಯ ಕೃಷಿ

|

ಬೆಂಗಳೂರು, ಜುಲೈ 6: ಜನಸಂಖ್ಯೆ ಹೆಚ್ಚಳ ಮತ್ತು ಕೃಷಿ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಅತ್ತ ನೀರಿನ ಕೊರತೆಯೂ ಕೃಷಿಕರನ್ನು ತೀವ್ರವಾಗಿ ಕಾಡುತ್ತಿದೆ.

ಭಾರತದ ಆರ್ಥಿಕತೆಯ ಬೆನ್ನಲುಬು ಕೃಷಿ ಇತ್ತೀಚಿನ ವರ್ಷಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ದೇಶದಲ್ಲಿ ಬಳಕೆಯಾಗುವ ಸುಮಾರು ಶೇ 84ರಷ್ಟು ತಾಜಾ ನೀರು ಕೃಷಿ ವಲಯಕ್ಕೆ ವಿನಿಯೋಗವಾಗುತ್ತಿದೆ. ಇದು ಜಾಗತಿಕ ಬಳಕೆ ಪ್ರಮಾಣಕ್ಕಿಂತಲೂ ಹೆಚ್ಚು.

ಕರ್ನಾಟಕ ಬಜೆಟ್ 2018 : ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಕೊಟ್ಟಿದ್ದೇನು?

ಕೃಷಿಯಲ್ಲಿ ನೀರಿನ ಮಿತವಾದ ಮತ್ತು ಸೂಕ್ತ ಪ್ರಮಾಣದ ಬಳಕೆ ದೊಡ್ಡ ತಲೆನೋವಾಗಿದೆ. ಅಗತ್ಯಕ್ಕಿಂತಲೂ ಅಧಿಕ ಪ್ರಮಾಣದ ನೀರನ್ನು ಭಾರತದ ಕೃಷಿ ಭೂಮಿ ಬಳಸಿಕೊಳ್ಳುತ್ತಿದೆ. ಜತೆಗೆ ಆಧುನಿಕ ತಂತ್ರಜ್ಞಾನದ ಕೊರತೆಯೂ ಕಾಡುತ್ತಿದೆ. ಈ ಕಾರಣದಿಂದ ಕೃಷಿ ಉತ್ಪನ್ನಗಳಲ್ಲಿ ನಿರ್ದಿಷ್ಟ ಗುರಿಯನ್ನು ತಪುಲುವುದು ಕಷ್ಟವಾಗುತ್ತಿದೆ.

ಕೃಷಿಯಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ಭಾರತವು ಇಸ್ರೇಕ್ ಜತೆ ಪ್ರಬಲ ಸಹಭಾಗಿತ್ವ ಮಾಡಿಕೊಂಡಿದೆ.

ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ವಿವಿಧ ರಾಜ್ಯಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಭಾರತದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯವಾದ ಕಿರು ನೀರಾವರಿ ಪದ್ಧತಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಮುಮದಾಗಿದೆ.

2003ರಲ್ಲಿಯೇ ಹನಿ ನೀರಾವರಿಯ ಮಹತ್ವವನ್ನು ಅರಿತಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 'ಹನಿ ನೀರಾವರಿ ಕಾರ್ಯ ಪಡೆ'ಯನ್ನು ರಚಿಸಿದ್ದವು.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ರೈತರು ಬೃಹತ್ ಪ್ರಮಾಣದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲು ಅವರನ್ನು ಉತ್ತೇಜಿಸಲು ಹನಿ ನೀರಾವರಿಯ ರಾಷ್ಟ್ರೀಯ ಯೋಜನೆಯಂತಹ ಸಂಸ್ಥೆಗಳ ಮೂಲಕ ಸರ್ಕಾರವು ಸಬ್ಸಿಡಿಯನ್ನು ವಿಸ್ತರಿಸಿತ್ತು.

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಹನಿ ನೀರಾವರಿ ವಲಯದಲ್ಲಿ ಇನ್ನಷ್ಟು ತೀವ್ರವಾದ ಅಳವಡಿಕೆ ಅಗತ್ಯವಾಗಿರುವುದರಿಂದ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಮುಖ್ಯವಾಗಿ ಕೃಷಿ ಹಾಗೂ ಸಾಮಾನ್ಯ ಬಳಕೆಗೆ ನೀರನ್ನು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಿಸುವುದರಲ್ಲಿ ಇಸ್ರೇಕ್, ಜಗತ್ತಿಗೆ ಒಂದು ಉದಾಹರಣೆಯನ್ನು ಹಾಕಿಕೊಟ್ಟಿದೆ.

ಹನಿ ನೀರಾವರಿಯು ಇಸ್ರೇಲ್‌ನಲ್ಲಿ ಚಾಲ್ತಿಗೆ ಬಂದು ಈಗ ವಿಶ್ವವ್ಯಾಪಿ ಹರಡಿದೆ. ಭಾರತದ ಕೃಷಿ ಜಗತ್ತನ್ನು ಭಾರಿ ಪ್ರಮಾಣದಲ್ಲಿ ಬದಲಿಸಲು ಹನಿ ನೀರಾವರಿ ತಂತ್ರಜ್ಞಾನ ನೆರವಾಗಬಲ್ಲದು ಎನ್ನುವುದು ಈಗಾಗಲೇ ದೃಢಪಟ್ಟಿದೆ.

ನೀರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್, ತನ್ನ ನೀರು ಪುನರ್ಬಳಕೆ ಮತ್ತು ಸಂಸ್ಕರಣೆಯ ತಂತ್ರಜ್ಞಾನಗಳಿಂದ ನೀರಾವರಿಗೆ ಘನನೀರನ್ನು ಬಳಸಿಕೊಳ್ಳುವ ಮಾದರಿಯನ್ನು ಹಾಕಿಕೊಟ್ಟಿದೆ.

ತನ್ನ ಆಂತರಿಕವಾಗಿ ಬಳಕೆಯಾದ ಶೇ 80ರಷ್ಟು ನೀರನ್ನು ಮರುಬಳಕೆ ಮಾಡುತ್ತದೆ. ಇದನ್ನು ಸಂಸ್ಕರಿಸಿ ಸುಮಾರು ಶೇ 50ರಷ್ಟು ನೀರನ್ನು ಕೃಷಿಗೆ ಬಳಸುತ್ತದೆ.

ಸಾಮಾನ್ಯ ಕೃಷಿ ಪದ್ಧತಿಯಲ್ಲಿ ನೀರು ಪೈಪ್ ಹಾಗೂ ಇತರೆ ಸಾಧನಗಳ ಮೂಲಕ ಮಣ್ಣು ಅಥವಾ ಬೇರಿಗೆ ನೇರವಾಗಿ ತಲುಪುತ್ತದೆ. ಇಸ್ರೇಲ್‌ ನೀರಾವರಿ ಪದ್ಧತಿಯಲ್ಲಿ ಕೃಷಿ ಸಸ್ಯಗಳ ಬೇರಿಗೆ ನಿಧಾನವಾಗಿ ತಲುಪುತ್ತದೆ.

ಭಾರತ-ಇಸ್ರೇಲ್ ಸಹಭಾಗಿತ್ವ ಒಪ್ಪಂದದ ಬಳಿಕ ಭಾರತದ ಕೃಷಿಗೆ ಅನೇಕ ಹೊಸ ತಂತ್ರಜ್ಞಾನಗಳನ್ನು ತರಲು ನೆರವಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲಿಯೇ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನಗಳನ್ನು, ಸಾಧನಗಳನ್ನು ಸಿದ್ಧಪಡಿಸುವ ಕೆಲಸ ಆರಂಭಿಸಲಾಗಿದೆ.

English summary
Indian agriculture sector is facing numerous challenges in recent years. Government is trying to adopt israel irrigation system and technology to better usage of water and increase productivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X