• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್ ಮದ್ಯ ಕಂಪೆನಿಯಿಂದ ಮಹಾತ್ಮ ಗಾಂಧಿಗೆ ಅವಮಾನ, ಕ್ಷಮೆ ಯಾಚನೆ

|

ಇಸ್ರೇಲಿನ 71ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಮದ್ಯದ ಬಾಟಲಿ ಮೇಲೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರ ಹಾಕಿದ್ದಕ್ಕೆ ಬುಧವಾರದಂದು ಇಸ್ರೇಲಿ ಕಂಪೆನಿಯು ಭಾರತ ಸರಕಾರದ ಕ್ಷಮೆ ಕೇಳಿದೆ. ಭಾರತೀಯರ್ ಭಾವನೆಗಳಿಗೆ ಧಕ್ಕೆ ಆಗಿರುವುದಕ್ಕೆ ಮದ್ಯ ತಯಾರಿಕಾ ಕಂಪೆನಿಯು ಕ್ಷಮೆ ಯಾಚಿಸಿದೆ.

ಮದ್ಯದ ಬಾಟಲಿ ಮೇಲೆ ಗಾಂಧಿ ಚಿತ್ರ ಇರುವ ಬಗ್ಗೆ ಮಂಗಳವಾರದಂದು ರಾಜ್ಯ ಸಭಾ ಸದಸ್ಯರು ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕೂಡಲೇ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಖಾತೆ ಸಚಿವರಾದ ಎಸ್.ಜೈಶಂಕರ್ ಅವರಿಗೆ ಸೂಚನೆ ನೀಡಬೇಕು ಎಂದು ಸಭಾಪತಿಗಳಾದ ಎಂ.ವೆಂಕಯ್ಯ ನಾಯ್ಡು ಅವರನ್ನು ಕೇಳಿಕೊಳ್ಳಲಾಗಿತ್ತು.

ಟಾಯ್ಲೆಟ್ ಸೀಟ್ ಕವರ್ ನಲ್ಲಿ ಹಿಂದೂ ದೇವತೆಗಳ ಚಿತ್ರ; #BoycottAmazon ಟ್ವಿಟ್ಟರ್ ನಲ್ಲಿ ಟ್ರೆಂಡ್

ಮಲ್ಕಾ ಬಿಯರ್ ನಿಂದ ಹೃದಯಪೂರ್ವಕವಾಗಿ ಭಾರತದ ಜನರು ಹಾಗೂ ಸರಕಾರಕ್ಕೆ ಕ್ಷಮೆ ಕೋರುತ್ತೇವೆ. ನಾವು ಮಹಾತ್ಮ ಗಾಂಧಿ ಅವರನ್ನು ಗೌರವಿಸುತ್ತೇವೆ. ನಮ್ಮ ಕಂಪೆನಿಯ ಮದ್ಯದ ಬಾಟಲಿ ಮೇಲೆ ಅವರ ಚಿತ್ರ್ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕಂಪೆನಿ ಹೇಳಿದೆ.

ಇಸ್ರೇಲಿನಲ್ಲಿ ಇರುವ ಭಾರತದ ರಾಯಭಾರ ಕಚೇರಿಯಿಂದ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಆ ನಂತರ ಕಂಪೆನಿಯು ಮದ್ಯದ ಉತ್ಪಾದನೆ ಹಾಗೂ ಪೂರೈಕೆಯನ್ನು ನಿಲ್ಲಿಸಿದೆ. ಜತೆಗೆ ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಉತ್ಪನ್ನಗಳನ್ನು ವಾಪಸ್ ಪಡೆಯಲು ಕೂಡ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ. ಮಹಾತ್ಮ ಗಾಂಧಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಹಾಕಿದ್ದೇ ಹೊರತು ಮತ್ತ್ಯಾವ ಕಾರಣಕ್ಕೂ ಅಲ್ಲ ಎಂದು ಕಂಪೆನಿ ಹೇಳಿದೆ.

English summary
Israeli company apologised India for labeling Mahatma Gandhi picture on liquor bottle. Company manufactured limited edition liquor bottle for Israel independence day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X