ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಇಸ್ರೇಲ್ ಜಂಟಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿ

|
Google Oneindia Kannada News

ನವದೆಹಲಿ, ಜನವರಿ 6: ಭಾರತ ಮತ್ತು ಇಸ್ರೇಲ್‌ಗಳು ಕಳೆದ ವಾರ ಮಧ್ಯಮ ಪ್ರಮಾಣದ ಭೂಮಿಯಿಂದ ವಾಯುವಿಗೆ ಚಿಮ್ಮುವ ಕ್ಷಿಪಣಿ (ಎಂಆರ್‌ಎಸ್‌ಎಎಂ) ರಕ್ಷಣಾ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಮಂಗಳವಾರ ತಿಳಿಸಿದೆ.

ಭಾರತ ಮತ್ತು ಇಸ್ರೇಲ್ ಎರಡೂ ದೇಶಗಳು ಸೇರಿ ಅಭಿವೃದ್ಧಿಪಡಿಸಿರುವ ಈ ರಕ್ಷಣಾ ವ್ಯವಸ್ಥೆಯು 50-70 ಕಿಮೀ ವ್ಯಾಪ್ತಿಯಲ್ಲಿನ ಶತ್ರು ವಿಮಾನಗಳನ್ನು ಹೊಡೆದುರುಳಿಸಬಲ್ಲದು.

ರಷ್ಯಾ ಜತೆಗಿನ ರಕ್ಷಣಾ ಒಪ್ಪಂದ: ಅಮೆರಿಕದಿಂದ ಭಾರತಕ್ಕೆ ನಿರ್ಬಂಧದ ಎಚ್ಚರಿಕೆರಷ್ಯಾ ಜತೆಗಿನ ರಕ್ಷಣಾ ಒಪ್ಪಂದ: ಅಮೆರಿಕದಿಂದ ಭಾರತಕ್ಕೆ ನಿರ್ಬಂಧದ ಎಚ್ಚರಿಕೆ

ಪ್ರಸ್ತುತ ಭಾರತೀಯ ಸೇನೆಯ ಮೂರೂ ವಿಭಾಗಗಳು ಹಾಗೂ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವೈಮಾನಿಕ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಬಳಸುತ್ತಿದ್ದು, ಡಿಆರ್‌ಡಿಒ ಹಾಗೂ ಐಎಐ ಜಂಟಿಯಾಗಿ ಇವುಗಳನ್ನು ಅಭಿವೃದ್ಧಿಪಡಿಸಿವೆ. ಎಂಆರ್‌ಎಸ್‌ಎಎಂ ವ್ಯವಸ್ಥೆಯು ನಿರ್ದೇಶನ ಮತ್ತು ನಿಯಂತ್ರಣಗಳನ್ನು ಒಳಗೊಂಡಿದೆ. ಆಧುನಿಕ ಆರ್ರೇ ರೇಡಾರ್, ಮೊಬೈಲ್ ಲಾಂಚರ್ ಸೌಲಭ್ಯಗಳಿವೆ.

India-Israel Successfully Test MRSAM Air And Missile Defence System

ಈ ಶಸ್ತ್ರ ವ್ಯವಸ್ಥೆಯ ಎಲ್ಲ ಗುರಿಗಳೂ ಪರೀಕ್ಷೆ ವೇಳೆ ಯಶಸ್ವಿಯಾಗಿ ತಲುಪಿವೆ. ಡಿಜಿಟಲ್ ಎಂಎಂಆರ್ ರೇಡಾರ್ ವ್ಯವಸ್ಥೆಯಲ್ಲಿನ ತೊಂದರೆಗಳನ್ನು ನಿವಾರಿಸಿ ಎಂಆರ್‌ಎಸ್‌ಎಎಂ ಪ್ರತಿಬಂಧಕವನ್ನು ಕಾರ್ಯಾಚರಣೆಗೆ ಪರೀಕ್ಷಿಸಲಾಗಿದೆ. ಇದು ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೇಲ್ ಸಂಸ್ಥೆಯ ಹೇಳಿಕೆ ನೀಡಿದೆ.

'ಎಂಆರ್ಎಸ್ಎಎಂ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಬಹಳ ಆಧುನಿಕ ತಂತ್ರಜ್ಞಾನವಾಗಿದ್ದು, ವಿವಿಧ ಬಗೆಯ ಬೆದರಿಕೆಗಳನ್ನು ಎದುರಿಸುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವಾಯು ರಕ್ಷಣಾ ವ್ಯವಸ್ಥೆಯ ಪ್ರತಿ ಪ್ರಯೋಗವೂ ಬಹಳ ಸಂಕೀರ್ಣ ಕಾರ್ಯಾಚರಣೆ ಪ್ರಯತ್ನ. ಕೋವಿಡ್ ಕಾರಣದ ಮಿತಿಗಳು ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಬೋಯಜ್ ಲೆವಿ ಹೇಳಿದ್ದಾರೆ.

English summary
India and Israel successfully tested a Medium Range Surface to Air Missile (MRSAM) defence system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X