ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆ ಸೇರಿಕೊಂಡಿದ್ದ ಕೇರಳದ ನಿವಾಸಿಯನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.

ಮತ್ತೆ ಕಾಸರಗೋಡಿನ 11 ಮಂದಿ ಕಾಣೆ, ಉಗ್ರರ ಜೊತೆ ಸೇರಿರುವ ಶಂಕೆಮತ್ತೆ ಕಾಸರಗೋಡಿನ 11 ಮಂದಿ ಕಾಣೆ, ಉಗ್ರರ ಜೊತೆ ಸೇರಿರುವ ಶಂಕೆ

ಕೇರಳದ ವಯನಾಡಿನ ನಿವಾಸಿಯಾಗಿರುವ 26 ವರ್ಷದ ನಶೀದುಲ್ ಹಮ್ಜಾಫರ್‌ನನ್ನು ಅಫ್ಘಾನಿಸ್ತಾನದ ಭದ್ರತಾ ಸಂಸ್ಥೆಗಳು ಐಸಿಸ್ ಸೇರುವ ಸಲುವಾಗಿ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಕಳೆದ ವರ್ಷ ಬಂಧಿಸಿದ್ದವು.

ಆಫ್ಘಾನಿಸ್ತಾನದಲ್ಲಿ ಕೇರಳ ಮೂಲದ ಮತ್ತೊಬ್ಬ ಉಗ್ರನ ಸಾವು!ಆಫ್ಘಾನಿಸ್ತಾನದಲ್ಲಿ ಕೇರಳ ಮೂಲದ ಮತ್ತೊಬ್ಬ ಉಗ್ರನ ಸಾವು!

ಕಾಸರಗೋಡು ಜಿಲ್ಲೆಯ 14 ಆರೋಪಿಗಳು ಭಾರತ ಮತ್ತು ತಾವು ಕೆಲಸ ಮಾಡುತ್ತಿದ್ದ ಮಧ್ಯಪ್ರಾಚ್ಯದಿಂದ 2016ರ ಮೇ ತಿಂಗಳಿನಿಂದ ಜುಲೈ ಆರಂಭದ ವಾರದಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿಕೊಂಡಿದ್ದರು.

ISIS operative from Kerala deported to India

ಇತರೆ ಆರೋಪಿಗಳ ಸಹಾಯದೊಂದಿಗೆ ನಶೀದುಲ್, ಸಾಮಾಜಿಕ ಮಾಧ್ಯಮಗಳ ಮೂಲಕ ಈ ಸಂಚಿನ ಭಾಗವಾಗಿ ತೊಡಗಿಕೊಂಡಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.

ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?

ಇತರೆ ಆರೋಪಿಗಳಾದ ಅಬ್ದುಲ್ ರಶೀದ್ ಅಬ್ದುಲ್ಲಾ ಮತ್ತು ಅಷ್ಫಕ್ ಮಜೀದ್ ಅವರನ್ನು ತನ್ನ ಕಾಲೇಜು ಸಹಪಾಠಿಗಳಾದ ಶಿಹಾಸ್, ಫೀರೋಜ್ ಖಾನ್ ಮತ್ತು ಬೆಸ್ಟಿನ್ ವಿನ್ಸೆಂಟ್ ಮೂಲಕ ಸಂಪರ್ಕಿಸಿದ್ದ ಎಂಬುದನ್ನು ಎನ್‌ಐಎ ತಿಳಿಸಿದೆ.

English summary
A resident of Kerala who had joined the Islamic State has been deported to India from Kabul, Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X