ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆ: ಮಕ್ಕಳಲ್ಲಿ ಬಹುಬೇಗ ಹರಡುತ್ತಿದೆ ಕೊರೊನಾ ಸೋಂಕು

|
Google Oneindia Kannada News

ನವದೆಹಲಿ, ಏಪ್ರಿಲ್ 7: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದ್ದು, ಮೊದಲ ಅಲೆಗಿಂತ ಬಹುಬೇಗ ಕೊರೊನಾ ಸೋಂಕು ಆವರಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸೋಮವಾರ ಹಾಗೂ ಬುಧವಾರ ಎರಡು ದಿನವೂ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಇದಕ್ಕಿಂತಾ ದೊಡ್ಡ ಆತಂಕ ಎದುರಾಗಿರೋದು ಮಕ್ಕಳ ಎಂದರೆ ತಪ್ಪಾಗಲಾರದು.

 ದೇಶದಲ್ಲಿ ಕೊರೊನಾ ಏರಿಕೆಗೆ ಕಾರಣ ನಮೂದಿಸಿದ ಆರೋಗ್ಯ ಸಚಿವ ದೇಶದಲ್ಲಿ ಕೊರೊನಾ ಏರಿಕೆಗೆ ಕಾರಣ ನಮೂದಿಸಿದ ಆರೋಗ್ಯ ಸಚಿವ

ಮುಂಬೈನ ಮಕ್ಕಳ ತಜ್ಞ ಡಾ. ಸುಭಾಷ್ ರಾವ್ ಅವರ ಪ್ರಕಾರ, ರೂಪಾಂತರ ಹೊಂದಿರುವ ಕೊರೊನಾ ವೈರಸ್ ಬಹುಬೇಗ ಹರಡುತ್ತಿದೆ, ಅದರಲ್ಲೂ ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ: ಆರೋಗ್ಯ ಸಚಿವಾಲಯ ಕಳೆದ ವರ್ಷಕ್ಕಿಂತ ಈ ಬಾರಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ: ಆರೋಗ್ಯ ಸಚಿವಾಲಯ

ಕೊರೊನಾ ಮೊದಲ ಅಲೆಯಲ್ಲಿ ವಯಸ್ಕರು ಬೇಗ ಸೋಂಕಿಗೆ ತುತ್ತಾಗಿದ್ದರು

ಕೊರೊನಾ ಮೊದಲ ಅಲೆಯಲ್ಲಿ ವಯಸ್ಕರು ಬೇಗ ಸೋಂಕಿಗೆ ತುತ್ತಾಗಿದ್ದರು

ಕೊರೊನಾ ಮೊದಲ ಅಲೆಯ ವೇಳೆ ವಯಸ್ಕರು ಬೇಗ ಸೋಂಕಿಗೆ ತುತ್ತಾಗುತ್ತಿದ್ದರು. ಆದರೆ ಈಗ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸುತ್ತಿದ್ದಾರೆ ಎನ್ನುತ್ತಾರೆ ಡಾ. ರಾವ್. ಮಕ್ಕಳಿಂದ ವಯಸ್ಕರಿಗೆ ಸೋಂಕು ಹರಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಕೂಡಲೇ ಪರೀಕ್ಷೆ ಮಾಡಿಸಬೇಕು

ಕೂಡಲೇ ಪರೀಕ್ಷೆ ಮಾಡಿಸಬೇಕು

ಮಕ್ಕಳು ಹೊರಗೆ ಹೋಗಿ ಆಟವಾಡುವುದರಿಂದ ಹಾಗೂ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಕಾರಣ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ ಹೀಗಾಗಿ, ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪೋಷಕರು ಪರೀಕ್ಷೆ ಮಾಡಿಸಬೇಕಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಪೋಷಕರೂ ಕ್ವಾರಂಟೈನ್‌ಗೆ ಒಳಪಡಬೇಕಿದೆ.

ಮಕ್ಕಳಲ್ಲಿ ಲಕ್ಷಣಗಳು ಕಾಣಿಸುತ್ತಿರಲಿಲ್ಲ

ಮಕ್ಕಳಲ್ಲಿ ಲಕ್ಷಣಗಳು ಕಾಣಿಸುತ್ತಿರಲಿಲ್ಲ

ಎಲ್ಲಕ್ಕಿಂತಾ ಹೆಚ್ಚಾಗಿ ಮೊದಲನೇ ಅಲೆ ಇದ್ದ ವೇಳೆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೂ ಅವರಲ್ಲಿ ಲಕ್ಷಣಗಳು ಕಂಡುಬರುತ್ತಿರಲಿಲ್ಲ. ಆದರೆ, ಇದೀಗ ಸೋಂಕಿತರಾದ ಕೂಡಲೇ ಲಕ್ಷಣಗಳು ಕಂಡುಬರುತ್ತಿವೆ.

ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳು

ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳು

ಒಣ ಕೆಮ್ಮು, ವಾಂತಿ, ಭೇದಿ, ಅಸೌಖ್ಯ, ಮೈ-ಕೈ ನೋವು, ಜ್ವರ, ಶೀತ ಹೀಗೆ ಹಲವು ಸಾಮಾನ್ಯ ಲಕ್ಷಣಗಳು ಕೊರೊನಾ ಸೋಂಕಿತರಲ್ಲಿ ಕಂಡು ಬರುತ್ತಿವೆ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಚರ್ಮದ ಅಲರ್ಜಿ ಕೂಡಾ ಕಂಡುಬರ್ತಿದೆ.

English summary
While COVID-19 can strike people of all ages, it is largely believed that kids, unlike adults are at a low-risk threshold of suffering from complications. There have been fewer cases of COVID-19 striking kids or causing deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X