ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮೃತಿ ಇರಾನಿಗೆ ಒಲಿಯಲಿದೆಯೇ ಗುಜರಾತ್ ಸಿಎಂ ಪಟ್ಟ?

By Manjunatha
|
Google Oneindia Kannada News

Recommended Video

ಸ್ಮ್ರಿತಿ ಇರಾನಿಗೆ ಗುಜರಾತ್ ನ್ ಮುಂದಿನ ಸಿ ಎಂ ಪಟ್ಟ | Oneindia Kannada

ಅಹಮದಾಬಾದ್, ಡಿಸೆಂಬರ್ 19: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಪಡೆದಿರುವ ಬಿಜೆಪಿಗೆ ಈಗ ಮುಖ್ಯಮಂತ್ರಿ ಆಯ್ಕೆಯ ಚಿಂತೆ ಶುರುವಾಗಿದೆ.

ಗುಜರಾತ್ : ಎಕ್ಸಿಟ್‌ ಪೋಲ್, ಫಲಿತಾಂಶದ ವಿಶ್ಲೇಷಣೆಗುಜರಾತ್ : ಎಕ್ಸಿಟ್‌ ಪೋಲ್, ಫಲಿತಾಂಶದ ವಿಶ್ಲೇಷಣೆ

ಕಾಂಗ್ರೆಸ್ ಒಡ್ಡಿದ ಸವಾಲನ್ನು ಕಷ್ಟಪಟ್ಟೇ ನೀಗಿಸಿರುವ ಬಿಜೆಪಿಗೆ, ಮೋದಿ ಅವರ ಕೊನೆಯ ಹತ್ತು ದಿನದ ಪ್ರಚಾರ ಕಾರ್ಯ ಚುನಾವಣೆ ಗೆಲ್ಲಲು ಎಷ್ಟು ದೊಡ್ಡ ಸಹಾಯ ಮಾಡಿದೆ ಎಂಬ ಅರಿವಿದೆ, ಹಾಗಾಗಿ ಈ ಬಾರಿ ಬಿಜೆಪಿ ಸ್ವಂತ 'ಕರಿಷ್ಮಾ' ಹೊಂದಿರುವ, ಉತ್ತಮ ನಾಯಕತ್ವ ಗುಣಗುಳ್ಳ, ಈಗಾಗಲೇ ಜನಪ್ರಿಯತೆಯ ಪ್ರಭೆ ಹೊಂದಿರುವ ವ್ಯಕ್ತಿಯನ್ನು ಸಿಎಂ ಕುರ್ಚಿಯ ಮೇಲೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಅವರ ಮೊದಲ ಆಯ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎನ್ನಲಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆ 2017
ಪಕ್ಷ W 2012
ಬಿಜೆಪಿ 99 115
ಕಾಂಗ್ರೆಸ್ 77 61
ಜಿಪಿಪಿ 0 2
ಎನ್‌ಸಿಪಿ 1 2
ಇತರೆ 5 2

ಗುಜರಾತ್ ಮುಖ್ಯಮಂತ್ರಿ ಸಂಭಾವ್ಯರ ಪಟ್ಟಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೆಸರು ಮೊದಲಿನಲ್ಲಿದೆ. ಗಟ್ಟಿ ನಾಯಕತ್ವ ಗುಣಗುಳ್ಳುಳ್ಳ, ಅತ್ಯುತ್ತಮವಾದ ಸಂವಹನ ಕೌಶಲ್ಯ ಉಳ್ಳ ಸ್ಮೃತಿ ಇರಾನಿ ಅವರಿಗೆ ಪಟ್ಟ ಕಟ್ಟಿದರೆ ಗುಜರಾತ್‌ಗೆ ಸ್ವತಂತ್ರ ನಾಯಕ ಸಿಕ್ಕಂತಾಗುತ್ತದೆ, ಚುನಾವಣಾ ಸಮಯದಲ್ಲಿ ಮೋದಿ ಅವರ ಕೆಲಸ ಸುಗಮವಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಗುಜರಾತ್ : ಚುನಾವಣಾ ಪೂರ್ವ ಸಮೀಕ್ಷೆ, ಫಲಿತಾಂಶಗುಜರಾತ್ : ಚುನಾವಣಾ ಪೂರ್ವ ಸಮೀಕ್ಷೆ, ಫಲಿತಾಂಶ

ಅಲ್ಲಗಳೆದ ಸ್ಮೃತಿ

ಅಲ್ಲಗಳೆದ ಸ್ಮೃತಿ

ಈಗಾಗಲೇ ಕೇಂದ್ರದಲ್ಲಿ ತಮ್ಮ ಸಾಮರ್ಥ್ಯವನ್ನು ರುಜುವಾತು ಮಾಡಿರುವ ಸ್ಮೃತಿ ಇರಾನಿ ಅವರು, ಮೋದಿ ಅವರ ಮೆಚ್ಚಿನ ಸಚಿವರಲ್ಲಿ ಒಬ್ಬರು ಕೂಡ, ಕೇಂದ್ರದ ಪ್ರಭಾವಿ ಸಚಿವರಾಗಿದ್ದ ಮನೋಹರ್ ಪರ್ರಿಕರ್ ಅವರನ್ನು ಗೋವಾ ಆಡಳಿತಕ್ಕೆ ವಾಪಾಸು ಕಳಿಸಿ ಅಲ್ಲಿ ಕಳೆಗುಂದುತ್ತಿದ್ದ ಬಿಜೆಪಿಗೆ ಚೈತನ್ಯ ತುಂಬಿದಂತೆ ಗುಜರಾತ್ ವಿಷಯದಲ್ಲೂ ಮಾಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ ಈ ವಿಷಯವನ್ನು ಅಲ್ಲಗಳೆದಿರುವ ಸ್ಮೃತಿ ಇರಾನಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ ಎಂದಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರುಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಪಟೇಲ್ ಸಮುದಾಯಕ್ಕೆ ಪಟ್ಟ

ಪಟೇಲ್ ಸಮುದಾಯಕ್ಕೆ ಪಟ್ಟ

ಸ್ಮೃತಿ ಇರಾನಿ ನಂತರ ಮಂಕುಶ್ ಎಂ ಮಾಂಡವಿಯಾ ಅವರ ಹೆಸರು ಎರಡನೇ ಸ್ಥಾನದಲ್ಲಿದೆ. ಕೇಂದ್ರದಲ್ಲಿ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವರಾಗಿರುವ ಇವರು ಪಟೇಲ್ ಸಮುದಾಯಕ್ಕೆ ಸೇರಿದವರು, ಪಟೇಲ್ ರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಬಿಜೆಪಿ ವಿರುದ್ಧ ದಂಗೆ ಎದ್ದಿರುವ ಪಟೇಲ್ ಸಮುದಾಯವನ್ನು ತೃಪ್ತಗೊಳಿಸುವುದು ಹಾಗೂ ಮುಂದೆ ತಮಗೆ ಮುಳುವಾಗಲಿರುವ ಹಾರ್ದಿಕ್ ಪಟೇಲ್ ಅವರನ್ನು ಕಟ್ಟಿಹಾಕುವ ಯೋಚನೆಯನ್ನೂ ಬಿಜೆಪಿ ಮಾಡಿದೆ.

ಅನುಭವಕ್ಕೆ ಮಣೆ

ಅನುಭವಕ್ಕೆ ಮಣೆ

ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ಅವರು ಮೂರನೇ ಸಂಭಾವ್ಯ ಅಭ್ಯರ್ಥಿ ಎನ್ನಲಾಗುತ್ತಿದೆ. ಈ ಮುಂಚಿನ ಗುಜರಾತ್ ಚುನಾವಣೆಗಳಲ್ಲಿ ಪ್ರಭಾವ ಬೀರಿದ್ದ ವಜುಭಾಯ್ ವಾಲಾ ಅವರ ಬಗ್ಗೆ ಗುಜರಾತ್‌ ಜನರಿಗೆ ಗೌರವವಿದೆ ಅದನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಸಲುವಾಗಿ ವಜುಭಾಯ್ ಅವರನ್ನು ಮುಖ್ಯಮಂತ್ರಿ ಮಾಡಿದರೂ ಆಶ್ಚರ್ಯವಿಲ್ಲ. ಈ ಮುಂಚೆ ಹಣಕಾಸು, ಕಾರ್ಮಿಕ ಸೇರಿದಂತೆ ಅನೇಕ ಖಾತೆಗಳನ್ನು ನಿರ್ವಹಿಸಿರುವ ಅನುಭವವೂ ವಜುಭಾಯ್ ಅವರಿಗಿದೆ. ಆದರೆ ಜೀವನದ ಇಳಿಸಂಜೆಯಲ್ಲಿರುವ ವಜುಭಾಯ್ ವಾಲಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆಯೇ.

ಅಮಿತ್ ಷಾ ಘೋಷಣೆ

ಅಮಿತ್ ಷಾ ಘೋಷಣೆ

ಗುಜರಾತ್‌ ಚುನಾವಣಾ ಫಲಿತಾಂಶ ಅಲ್ಲಿನ ಜನತೆಗೆ ಬದಲಾವಣೆ ಬೇಕಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ ಹಾಗಾಗಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರನ್ನು ಬದಲಾಯಿಸಲು ಚಿಂತನೆ ನಡೆಸಿದೆ ಗುಜರಾತ್ ಬಿಜೆಪಿ. ವಿಜಯ್ ರೂಪಾಣಿ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ವತಃ ಪ್ರಯಾಸದ ಗೆಲುವು ಪಡೆದಿರುವುದರಿಂದ ಅವರ ಜನಪ್ರಿಯತೆಯ ಬಗ್ಗೆ ಬಿಜೆಪಿಗೆ ಅನುಮಾಗಳಿವೆ. ಪಕ್ಷದ ಮುಖಂಡರ ಸಭೆ ನಡೆಸಿ ಮುಖ್ಯಮಂತ್ರಿಯ ಆಯ್ಕೆಯ ಮಾಡಲಾಗುತ್ತದೆ ಎಂದು ಅಮಿತ್ ಷಾ ಹೇಳಿದ್ದು ಇಂದು ಸಂಜೆಯ ಒಳಗೆ ಮುಖ್ಯಮಂತ್ರಿಗಳ ಘೋಷಣೆ ಆಗಲಿದೆ.

English summary
Textiles and I&B minister Smriti Irani is the probable front runner in the 'race' of Gujrat CM seat. With strong leadership qualities and being one of Modi's closest ministers, Irani could be the next CM of Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X