ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ತಿರುಗಿಬಿದ್ದರೆ ರಾಮ್ ವಿಲಾಸ್ ಪಾಸ್ವಾನ್?!

|
Google Oneindia Kannada News

ನವದೆಹಲಿ, ಮಾರ್ಚ್ 19: ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಟಿಡಿಪಿ, ಶಿವಸೇನಾ ಪಕ್ಷಗಳು ಎನ್ ಡಿಎ ಮೈತ್ರಿಕೂಟದಿಂದ ಹೊರಹೋಗಿದ್ದಾಯ್ತು. ಇದೀಗ ಸ್ವತಃ ಕೇಂದ್ರ ಸಚಿವರೇ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಲ್ಲದೆ, ಮೈಮರೆತರೆ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ!

ಮುಂದುವರಿದ ಬಂಡಾಯ, ಬಿಜೆಪಿ ನಡವಳಿಕೆಗೆ ಎನ್.ಡಿ.ಎ ಮಿತ್ರಪಕ್ಷ ಆಕ್ರೋಶಮುಂದುವರಿದ ಬಂಡಾಯ, ಬಿಜೆಪಿ ನಡವಳಿಕೆಗೆ ಎನ್.ಡಿ.ಎ ಮಿತ್ರಪಕ್ಷ ಆಕ್ರೋಶ

ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವರಾಗಿರುವ, ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್, ಬಿಜೆಪಿಯಲ್ಲಿ ಕೆಲವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎನ್ನುವ ಮೂಲಕ ಬಂಡಾಯದ ಕಿಡಿ ಹೊತ್ತಿರುವ ಸೂಚನೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೀನಾಯ ಸೋಲುಕಂಡ ಬಿಜೆಪಿಯನ್ನು ಅವರು ಪರೋಕ್ಷವಾಗಿ ಕುಟುಕಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಲ್ಪಸಂಖ್ಯಾತರು ಮತ್ತು ದಲಿತರನ್ನು ಬಿಜೆಪಿ ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಬಿಜೆಪಿಯಲ್ಲಿ ಯಾರೂ ಜಾತ್ಯತೀತ ಮುಖಂಡರಿಲ್ಲವೇ? ಬಿಜೆಪಿಯಲ್ಲಿ ಸುಶೀಲ್ ಮೋದಿ, ರಾಮ್ ಕೃಪಾಳ್ ಯಾದವ್ ರಂಥ ನಾಯಕರಿದ್ದರೂ, ಅಂಥವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಉಳಿದವರ ಧ್ವನಿ ಮಾತ್ರವೇ ಗಮನಕ್ಕೆ ಬರುತ್ತಿದೆ ಎಂದು ಅವರು ಹೇಳಿದ್ದಾರೆ.

English summary
They (BJP) need to change mass perception in terms of minorities, dalits. Aren't there secular leaders in BJP?There are people like Sushil Modi,Ram Kripal Yadav,what happens is that their voice gets suppressed&there are others whose voice gets attention said Union Min Ram Vilas Paswan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X