ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ

|
Google Oneindia Kannada News

ದೇಶದಲ್ಲಿ ಇಷ್ಟೆಲ್ಲಾ ರಾಜ್ಯಗಳಲ್ಲಿ ಇಂದು ಬಿಜೆಪಿ ಅಧಿಕಾರದಲ್ಲಿ ಇದೆ ಎಂದರೆ, ಪಕ್ಷದ ಕಾರ್ಯಕರ್ತರು ಮತ್ತು ಅದರಲ್ಲೂ ಕೆಲವು ರಾಷ್ಟ್ರ ಮಟ್ಟದ ಮುಖಂಡರು ನೆನಪಿಸಿಕೊಳ್ಳಬೇಕಾಗಿರುವುದು ಲಾಲ್ ಕೃಷ್ಣ ಅಡ್ವಾಣಿಯವರನ್ನು.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವು ಮುಖಂಡರನ್ನು ಮೂಲೆಗುಂಪು ಮಾಡಲಾಯಿತು ಎನ್ನುವ ಮಾತು ಪಕ್ಷದೊಳಗೆಯೇ ಕೇಳಿ ಬರುತ್ತಿತ್ತು.

'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?

ಈ ರೀತಿಯ ಮಾತುಗಳಿಗೆ ಪುರಾವೆ ನೀಡುವಂತೆ ಅಡ್ವಾಣಿಯವರಿಗೆ ಗೌರವ ಕೊಡದೇ ನಡೆದುಕೊಂಡ ರೀತಿಯ ಚಿತ್ರಗಳೂ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿದ್ದವು. ವಿರೋಧ ಪಕ್ಷಗಳಿಗೆ ಬಿಜೆಪಿ ವಿರುದ್ದ ತಿರುಗಿಬೀಳಲು ಇದೂ ಒಂದು ಅಸ್ತ್ರವಾಗಿತ್ತು.

ಇಬ್ಬರು ಹಿರಿಯ ಮುಖಂಡರಾದ ಅಡ್ವಾಣಿ ಮತ್ತು ಜೋಶಿ ಈಗ ಸಕ್ರಿಯ ರಾಜಕಾರಣದಲ್ಲಿಲ್ಲ, ಕಾರಣ ಅವರ ವಯಸ್ಸು. ಇವರಿಗಾಗಿ ಮಾರ್ಗದರ್ಶಕ ಮಂಡಳಿ ಎನ್ನುವುದಿದ್ದರೂ ಇವರ ಮಾರ್ಗದರ್ಶನ ಪಡೆಯಲು ಒಂದು ದಿನವೂ ಸಭೆ ಸೇರಿದ ಉದಾಹರಣೆಗಳಿಲ್ಲ. ಆದರೆ, ಬಿಜೆಪಿಯ ಈ ಕಾನೂನು ಇತರರಿಗೆ ಯಾಕೆ ಅನ್ವಯಿಸುವುದಿಲ್ಲ?

ತಮ್ಮ ತಪ್ಪನ್ನು ಮುಚ್ಚಿಡಲು ಸಿಎಂ ಬಿಎಸ್ವೈ ವಿರುದ್ದ ದೂರು ಕೊಟ್ಟರೇ ಈಶ್ವರಪ್ಪತಮ್ಮ ತಪ್ಪನ್ನು ಮುಚ್ಚಿಡಲು ಸಿಎಂ ಬಿಎಸ್ವೈ ವಿರುದ್ದ ದೂರು ಕೊಟ್ಟರೇ ಈಶ್ವರಪ್ಪ

 75 ವರ್ಷ ದಾಟಿದ ಮುಖಂಡರಿಗೆ ಟಿಕೆಟ್ ನೀಡುವುದಿಲ್ಲ, ಅಮಿತ್ ಶಾ

75 ವರ್ಷ ದಾಟಿದ ಮುಖಂಡರಿಗೆ ಟಿಕೆಟ್ ನೀಡುವುದಿಲ್ಲ, ಅಮಿತ್ ಶಾ

75ವರ್ಷಗಳ ದಾಟಿದ ಮುಖಂಡರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಅಡ್ವಾಣಿಯವರ ಕ್ಷೇತ್ರವಾಗಿದ್ದ ಗಾಂಧಿ ನಗರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದರು. ಈ ವೇಳೆ ಕೇಳಿದ ಪ್ರಶ್ನೆಗೆ, "75 ವರ್ಷ ದಾಟಿದ ಮುಖಂಡರಿಗೆ ಟಿಕೆಟ್ ನೀಡುವುದಿಲ್ಲ, ಇದು ಪಕ್ಷದ ನಿರ್ಧಾರ"ಎಂದು ಅಮಿತ್ ಶಾ ಹೇಳಿದ್ದರು. ಪಕ್ಷದ ಈ ನಿರ್ಧಾರದಿಂದ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಗೆ ಟಿಕೆಟ್ ಸಿಕ್ಕಿರಲಿಲ್ಲ.

 ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಟಿಕೆಟ್

ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಟಿಕೆಟ್

ಆದರೆ, ಆ ಚುನಾವಣೆಗೂ ಮುನ್ನ ನಡೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಟಿಕೆಟ್ ನೀಡಿದ್ದೂ ಅಲ್ಲದೇ, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿತ್ತು. ಬಿಎಸ್ವೈಗೆ ಈಗ 78 ವಯಸ್ಸು, ಆದರೂ ಅವರು ಸಕ್ರಿಯ ರಾಜಕಾರಣದಲ್ಲಿದ್ದಾರೆ.

 ಮೆಟ್ರೋ ಮ್ಯಾನ್ ಎಂದೇ ಕರೆಯಲ್ಪಡುವ ಇ.ಶ್ರೀಧರನ್

ಮೆಟ್ರೋ ಮ್ಯಾನ್ ಎಂದೇ ಕರೆಯಲ್ಪಡುವ ಇ.ಶ್ರೀಧರನ್

ಇನ್ನೊಂದು, ಉದಾಹರಣೆಯಾದರೆ, ನಿನ್ನೆ (ಏಪ್ರಿಲ್ 6) ಮುಕ್ತಾಯಗೊಂಡ ಕೇರಳ ಅಸೆಂಬ್ಲಿ ಚುನಾವಣೆ. ಮೆಟ್ರೋ ಮ್ಯಾನ್ ಎಂದೇ ಕರೆಯಲ್ಪಡುವ ಇ.ಶ್ರೀಧರನ್ ಅವರಿಗೆ ಬಿಜೆಪಿ ರೆಡ್ ಕಾರ್ಪೆಟ್ ಸ್ವಾಗತ ಕೋರಿ ಪಕ್ಷಕ್ಕೆ ಬರ ಮಾಡಿಕೊಂಡಿತ್ತು. ಇಷ್ಟೇ ಅಲ್ಲದೇ, ಪಾಲಕ್ಕಾಡ್ ಕ್ಷೇತ್ರದಲ್ಲಿ ಟಿಕೆಟ್ ಅನ್ನೂ ನೀಡಿದೆ. ಶ್ರೀಧರನ್ ಅವರಿಗೆ ವಯಸ್ಸು 75+13=88.

Recommended Video

ಸರ್ಕಾರಿ ಬಸ್‌ ಇಲ್ಲ...ಖಾಸಗಿ ಬಸ್‌ ಪ್ರಯಾಣಕ್ಕೆ ದುಪ್ಪಟ್ಟು ದರ! | Oneindia Kannada
 ಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ

ಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ

ಯಡಿಯೂರಪ್ಪ ಮತ್ತು ಶ್ರೀಧರನ್ ವಿಚಾರದಲ್ಲಿ ಬಿಜೆಪಿ ತಾನು ಹಾಕಿಕೊಂಡಿದ್ದ ನಿಯಮವನ್ನು ತಾನೇ ಮುರಿದುಕೊಂಡಿದೆ. ವಿರೋಧ ಪಕ್ಷವಾದ ಕಾಂಗ್ರೆಸ್, 'ಬಿಜೆಪಿ ಹೇಳೋದು ಒಂದು ಮಾಡೋದು ಇನ್ನೊಂದು, ಆ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತ ಇಲ್ಲ'ಎಂದು. ಈ ಎರಡು ಉದಾಹರಣೆಯನ್ನು ಅವಲೋಕಿಸುವುದಾದರೆ, ಬಿಜೆಪಿಯಲ್ಲಿ ಅಡ್ವಾಣಿ, ಜೋಶಿಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ ಎಂದೇ ಹೇಳಬಹುದು.

English summary
Is Narendra modi Led BJP Neglects LK Advani and other veteran leaders?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X