ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ವಿತರಣೆಯಲ್ಲಿ ಮೋದಿ 'ರಾಜಕೀಯ' ಆರೋಪ: ಸತ್ಯಾಸತ್ಯತೆಯ ಪರಿಚಯ

|
Google Oneindia Kannada News

ಯಾವಾಗ ಕೊರೊನಾ ಎರಡನೇ ಅಲೆ, ನೈಟ್ ಕರ್ಫ್ಯೂ ಹೇರಿಕೆ ಮುಂತಾದವು ಆರಂಭವಾದವೋ, ಲಸಿಕೆಯ ಮೇಲಿನ ಡಿಮಾಂಡ್ ಕೂಡಾ ಜಾಸ್ತಿಯಾಗುತ್ತಾ ಸಾಗಿದೆ. ಕೊರೊನಾದಿಂದ ತತ್ತರಿಸಿ ಹೋಗಿರುವ ಮುಂಬೈ ಮಹಾನಗರದಲ್ಲಿ ಲಸಿಕೆ ಅಭಾವದಿಂದ ಕೆಲವು ವಿತರಣೆ ಕೇಂದ್ರಗಳು ಬಂದ್ ಆಗಿವೆ.

ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ನಂತರ ಏಪ್ರಿಲ್ 11-14ರ ಅವಧಿಯಲ್ಲಿ 'ಲಸಿಕೆ ಉತ್ಸವ' ನಡೆಸುವ ಸಲಹೆಯನ್ನು ಪ್ರಧಾನಿ ಮೋದಿ ನೀಡಿದರು. ಈ ನಡುವೆ, ತಮ್ಮತಮ್ಮ ರಾಜ್ಯಗಳಲ್ಲಿ ಲಸಿಕೆಯ ಅಭಾವವಿದೆ ಎಂದು ಸಿಎಂಗಳು ದೂರಲಾರಂಭಿಸಿದರು.

 ಲಸಿಕೆ ಅಭಾವ: ಮೋದಿಗೆ ಪ್ರಚಾರದ ಹುಚ್ಚು ಎಂದು ಕಾಂಗ್ರೆಸ್ ಸುಳ್ಳು ಮಾಹಿತಿ ನೀಡಿತೇ? ಲಸಿಕೆ ಅಭಾವ: ಮೋದಿಗೆ ಪ್ರಚಾರದ ಹುಚ್ಚು ಎಂದು ಕಾಂಗ್ರೆಸ್ ಸುಳ್ಳು ಮಾಹಿತಿ ನೀಡಿತೇ?

ಲಸಿಕೆ ವಿತರಣೆಯಲ್ಲೂ ಕೇಂದ್ರ ಸರಕಾರ ತಾರತಮ್ಯ ತೋರುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದರಿಂದ, ಕೇಂದ್ರ ಆರೋಗ್ಯ ಇಲಾಖೆ ಇದಕ್ಕೆ ಸ್ಪಷ್ಟನೆಯನ್ನು ನೀಡಿದೆ. ಕೆಲವು ರಾಜ್ಯ ಸರಕಾರಗಳ ಈ ಆರೋಪ ಆಧಾರ ರಹಿತ ಎಂದಿದೆ.

ಏಪ್ರಿಲ್ 8 ಮಧ್ಯಾಹ್ನ 12.30ರವರೆಗೆ ಅನ್ವಯವಾಗುವಂತೆ ರಾಜ್ಯಾವಾರು ಲಸಿಕೆ ವಿತರಣೆಯ ಚಾರ್ಟ್ ಲಭ್ಯವಿದ್ದು, ಅದರ ಪ್ರಕಾರ, ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ದೂರವಾದದು ಎನ್ನುವುದು ಸಾಬೀತಾಗುತ್ತದೆ. ರಾಜ್ಯಾವಾರು ಲಸಿಕೆ ವಿತರಣೆ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?

 ಕೇಂದ್ರ ಹೆಚ್ಚು ಲಸಿಕೆ ಕಳುಹಿಸಿಕೊಟ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಮಹಾರಾಷ್ಟ್ರ

ಕೇಂದ್ರ ಹೆಚ್ಚು ಲಸಿಕೆ ಕಳುಹಿಸಿಕೊಟ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಮಹಾರಾಷ್ಟ್ರ

ಪಟ್ಟಿಯ ಪ್ರಕಾರ ಕೇಂದ್ರ ಸರಕಾರ ಅತಿಹೆಚ್ಚು ಲಸಿಕೆ ಕಳುಹಿಸಿಕೊಟ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಹಾರಾಷ್ಟ್ರ (1,06,19,190) ನಂತರ ಗುಜರಾತ್ (1,05,19,330) ಇದಾದ ನಂತರ ರಾಜಸ್ಥಾನ (1,04,95,860), ಉತ್ತರ ಪ್ರದೇಶ (92,09,330), ಪಶ್ಚಿಮ ಬಂಗಾಳಕ್ಕೆ 83,83,340 ಲಸಿಕೆಯನ್ನು ಕೇಂದ್ರ ರವಾನಿಸಿದೆ. ಈ ಐದು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ ಎನ್ನುವುದು ಗಮನಿಸಬೇಕಾದ ವಿಚಾರ.

 ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 70,57,900 ಲಸಿಕೆ ರವಾನೆ

ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 70,57,900 ಲಸಿಕೆ ರವಾನೆ

ಇನ್ನು, ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 70,57,900, ಆಂಧ್ರ ಪ್ರದೇಶಕ್ಕೆ 37,94,920, ಕೇರಳಕ್ಕೆ 56,06,790, ತೆಲಂಗಾಣಕ್ಕೆ 25,99,230 ಮತ್ತು ತಮಿಳುನಾಡಿಗೆ 54,28,950 ಲಸಿಕೆಯನ್ನು ಮೋದಿ ಸರಕಾರ ರವಾನಿಸಿಯಾಗಿದೆ. ಅತಿಕಮ್ಮಿ ಲಸಿಕೆ ರವಾನೆಯಾಗಿರುವ ರಾಜ್ಯವೆಂದರೆ ಸಣ್ಣ ಭೌಗೋಳಿಕ ವ್ಯಾಪ್ತಿಯ ಗೋವಾಕ್ಕೆ. ಅಲ್ಲಿಗೆ 2,64,370 ಲಸಿಕೆ ಸಪ್ಲೈ ಆಗಿದೆ. ಇನ್ನು, ಲಸಿಕೆ ಅಭಾವ ಎನ್ನುವ ಆರೋಪದ ಬಗ್ಗೆ ಅಂಕಿ ಅಂಶ ಏನು ಹೇಳುತ್ತೆ.

 ಪಶ್ಚಿಮ ಬಂಗಾಳದಲ್ಲಿ ಲಸಿಕೆ ಅಭಾವ ಎದುರಾಗಿದೆ ಎನ್ನುವ ಹೇಳಿಕೆ

ಪಶ್ಚಿಮ ಬಂಗಾಳದಲ್ಲಿ ಲಸಿಕೆ ಅಭಾವ ಎದುರಾಗಿದೆ ಎನ್ನುವ ಹೇಳಿಕೆ

ಅಂಕಿಅಂಶದ ಪ್ರಕಾರ ಮಹಾರಾಷ್ಟ್ರದಲ್ಲಿ 15,00,840 ಸ್ಟಾಕ್‌ನಲ್ಲಿರಬೇಕು. ರಾಜಸ್ಥಾನದಲ್ಲಿ 14,64,310, ಪಶ್ಚಿಮ ಬಂಗಾಳದಲ್ಲಿ 13,27,820 , ಗುಜರಾತ್ ನಲ್ಲಿ 20,53,340, ಛತ್ತೀಸಗಢದಲ್ಲಿ 11,29,510 ಮತ್ತು ತಮಿಳುನಾಡಿನಲ್ಲಿ 16,70,760 ಲಸಿಕೆ ಸ್ಟಾಕ್ ನಲ್ಲಿರಬೇಕು. ಈ ಪಟ್ಟಿಯ ಪ್ರಕಾರ ಮಹಾರಾಷ್ತ್ರ. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಲಸಿಕೆ ಅಭಾವ ಎದುರಾಗಿದೆ ಎನ್ನುವ ಹೇಳಿಕೆಯನ್ನು ನೀಡಿದ್ದವು.

 2.5 ಕೋಟಿ ಲಸಿಕೆ ವಿವಿಧ ರಾಜ್ಯಗಳಿಗೆ ವಿತರಣೆಯಾಗಲು ಪೈಪ್ ಲೈನ್ ನಲ್ಲಿ

2.5 ಕೋಟಿ ಲಸಿಕೆ ವಿವಿಧ ರಾಜ್ಯಗಳಿಗೆ ವಿತರಣೆಯಾಗಲು ಪೈಪ್ ಲೈನ್ ನಲ್ಲಿ

ಇಷ್ಟೇ ಅಲ್ಲದೇ 2,45,15,320 ಕೋಟಿ ಲಸಿಕೆ ವಿವಿಧ ರಾಜ್ಯಗಳಿಗೆ ವಿತರಣೆಯಾಗಲು ಪೈಪ್‌ಲೈನ್‌ನಲ್ಲಿದೆ. ಈ ಲಸಿಕೆಗಳು ಇನ್ನು ಹನ್ನೆರಡು ದಿನಗಳೊಳಗೆ ಎಲ್ಲಾ ರಾಜ್ಯಗಳಿಗೆ ವಿತರಣೆಯಾಗಲಿದೆ. ಏಪ್ರಿಲ್ ಒಂದರ ಪ್ರಕಾರ ಸರಾಸರಿ 35,82,968 ಲಸಿಕೆಗಳನ್ನು ಸಾರ್ವಜನಿಕರು ಹಾಕಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಮಹಾರಾಷ್ಟ್ರ 3,91,460 ಲಸಿಕೆ ನೀಡುತ್ತಿದೆ. ಇನ್ನು, ಕರ್ನಾಟದಲ್ಲಿ 2,02,805 ಲಸಿಕೆ ವಿತರಣೆಯಾಗುತ್ತಿದೆ.

English summary
Is Narendra Modi Led Union Government Doing Politics While Issuing Corona Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X