ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಅಭಾವ: ಮೋದಿಗೆ ಪ್ರಚಾರದ ಹುಚ್ಚು ಎಂದು ಕಾಂಗ್ರೆಸ್ ಸುಳ್ಳು ಮಾಹಿತಿ ನೀಡಿತೇ?

|
Google Oneindia Kannada News

ಬನ್ನಿಬನ್ನಿ ಎಂದು ಗೋಗರೆದರೂ ಲಸಿಕೆ ಹಾಕಿಸಿಕೊಳ್ಳದ ಸಾರ್ವಜನಿಕರು ಈಗ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಿದಾಡುತ್ತಿರುವುದರಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.

45ವರ್ಷದ ಮೇಲ್ಪಟ್ಟವರಿಗೂ ಏಪ್ರಿಲ್ ಒಂದರಿಂದ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡಿದ್ದರಿಂದ, ದೇಶದ ವಿವಿದೆಡೆ ಲಸಿಕೆ ಅಭಾವ ಎದುರಾಗಿದೆ. ಆದರೆ, ಕೇಂದ್ರ ಸರಕಾರ ದೇಶದಲ್ಲಿ ಯಾವುದೇ ರೀತಿಯ ಅಭಾವ ಇಲ್ಲ ಎಂದು ಸ್ಪಷ್ಟ ಪಡಿಸಿದೆ.

 ಇಷ್ಟು ಗಂಭೀರ ವಿಷಯ ನಿಮಗೆ ಉತ್ಸವದಂತೆ ಕಾಣುತ್ತಿದೆಯಾ?; ರಾಹುಲ್ ಗಾಂಧಿ ಇಷ್ಟು ಗಂಭೀರ ವಿಷಯ ನಿಮಗೆ ಉತ್ಸವದಂತೆ ಕಾಣುತ್ತಿದೆಯಾ?; ರಾಹುಲ್ ಗಾಂಧಿ

ವಾಣಿಜ್ಯ ನಗರಿ ಮುಂಬೈನಲ್ಲಿ ಲಸಿಕೆ ಖಾಲಿಯಾಗಿದ್ದರಿಂದ 71 ಸೆಂಟರ್ ಗಳನ್ನು ಬಂದ್ ಮಾಡಲಾಗಿದೆ. ಲಸಿಕೆ ಹಂಚಿಕೆಯಲ್ಲೂ ಕೇಂದ್ರ ಸರಕಾರ ತಾರತಮ್ಯ ತೋರುತ್ತಿದೆ ಎಂದು ವಿರೋಧ ಪಕ್ಷಗಳು ದೂರಿವೆ. ಇದಕ್ಕೆ ಪ್ರತಿಯಾಗಿ, ಮುಂಬೈನಲ್ಲಿ ಲಕ್ಷಾಂತರ ಲಸಿಕೆಯನ್ನು ವೇಸ್ಟ್ ಮಾಡಲಾಗಿದೆ ಕೇಂದ್ರ ಸಚಿವ ಜಾವ್ಡೇಕರ್ ದೂರಿದ್ದಾರೆ.

ಈ ನಡುವೆ, ಲಸಿಕೆ ಅಭಾವ ದೇಶದಲ್ಲಿ ಎದುರಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಕಾರಣ, ನರೇಂದ್ರ ಮೋದಿ ಸರಕಾರ ಪ್ರಚಾರದ ಬೆನ್ನ ಹಿಂದೆ ಬಿದ್ದಿರುವುದು ಎಂದು ಕೆಪಿಸಿಸಿ ಆರೋಪಿಸಿ, ಮೋದಿ ಸರಕಾರಕ್ಕೆ ಭಾರತೀಯರು ಮುಖ್ಯವಲ್ಲ ಎಂದಿದೆ.

 ಬೆಂಗಳೂರು ದಕ್ಷಿಣದಲ್ಲಿ ಏ.11ರಿಂದ 14ವರೆಗೆ ಲಸಿಕೆ ಉತ್ಸವ: ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಲ್ಲಿ ಏ.11ರಿಂದ 14ವರೆಗೆ ಲಸಿಕೆ ಉತ್ಸವ: ತೇಜಸ್ವಿ ಸೂರ್ಯ

 ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ

ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ

ದೇಶದ ವಿವಿದ ಕಡೆ ಲಸಿಕೆ ಅಭಾವ ಎದುರಾಗಿದೆ, ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪವು ವೇಗ ಪಡೆದುಕೊಂಡ ನಂತರ, ಕೇಂದ್ರ ಸರಕಾರ ಈ ಸಂಬಂಧ ಅಂಕಿಅಂಶ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಇದುವರೆಗೆ 9.1 ಕೋಟಿ ಲಸಿಕೆಯನ್ನು ಭಾರತೀಯರು ಹಾಕಿಸಿಕೊಂಡಿದ್ದಾರೆ. ಮತ್ತು, 2.4 ಕೋಟಿ ಲಸಿಕೆ ಇನ್ನೂ ಸ್ಟಾಕ್ ನಲ್ಲಿದೆ.

ಭಾರತೀಯರನ್ನು ಮೋದಿ ಸರಕಾರ ಕಡೆಗಣಿಸಿತು ಎಂದು ಸುಳ್ಳು ಹೇಳಿತೇ ಕಾಂಗ್ರೆಸ್?

ಈ ನಡುವೆ ನಮಗೆ ಬೇಕಿದ್ದರೂ ವಿದೇಶಕ್ಕೆ ಲಸಿಕೆ ರಫ್ತು ಮಾಡಲಾಗಿದೆ ಎಂದು ಕೆಪಿಸಿಸಿ ಆರೋಪಿಸಿದೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಹೀಗೆ, "ಈವರೆಗೆ ದೇಶದಲ್ಲಿ ನೀಡಿದ ವ್ಯಾಕ್ಸಿನ್ ಡೋಸ್‌ಗಳ ಸಂಖ್ಯೆ ಸುಮಾರು 9 ಕೋಟಿ, ಈವರೆಗೆ ವಿದೇಶಗಳಿಗೆ ರಫ್ತಾದ ಡೋಸ್‌ಗಳು ಸುಮಾರು 65 ಕೋಟಿ, @BJP4Karnataka ಹೇಳಿ, ದೇಶದ ನಾಗರಿಕರನ್ನು ಕಡೆಗಣಿಸಿದ್ದೇಕೆ?ನಿಮಗೆ ದೇಶ ಮೊದಲಲ್ಲ, ಪ್ರಚಾರ ಮೊದಲು ಅಲ್ಲವೇ?"ಎಂದು ಪ್ರಶ್ನಿಸಿದೆ.

 ಭಾರತ ಇದುವರೆಗೆ ರಫ್ತು ಮಾಡಿದ ಲಸಿಕೆ 6.45 ಕೋಟಿ

ಭಾರತ ಇದುವರೆಗೆ ರಫ್ತು ಮಾಡಿದ ಲಸಿಕೆ 6.45 ಕೋಟಿ

ಜನವರಿ 25ನೇ ತಾರೀಕಿನಿಂದ ಏಪ್ರಿಲ್ ಆರರ ವರೆಗಿನ ಅಂಕಿ ಅಂಶದ ಪ್ರಕಾರ ಭಾರತ ಇದುವರೆಗೆ ರಫ್ತು ಮಾಡಿದ ಲಸಿಕೆ 6.45 ಕೋಟಿ. ಕಾಂಗ್ರೆಸ್ ಆಪಾದಿಸುತ್ತಿರುವಂತೆ 65 ಕೋಟಿ ಅಲ್ಲ. ಇದುವರೆಗೆ, ಭಾರತ ಲಸಿಕೆ ಅಭಿಯಾನದಲ್ಲಿ ಮಂಚೂಣಿಯಲ್ಲಿದ್ದು, ವಿಶ್ವಾದ್ಯಂತ ಇದು ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡಾ ಮೋದಿ ಸರಕಾರಕ್ಕೆ ಶಹಬ್ಬಾಸ್ ಗಿರಿಯನ್ನು ನೀಡಿತ್ತು.

 1.5 ಕೋಟಿ ಲಸಿಕೆಯನ್ನು ಮೋದಿ ಸರಕಾರ ಉಚಿತವಾಗಿ ನೀಡಿದೆ

1.5 ಕೋಟಿ ಲಸಿಕೆಯನ್ನು ಮೋದಿ ಸರಕಾರ ಉಚಿತವಾಗಿ ನೀಡಿದೆ

ಬಾಂಗ್ಲಾದೇಶಕ್ಕೆ ಮೊದಲು ಲಸಿಕೆಯನ್ನು ಮೋದಿ ಸರಕಾರ ಕಳುಹಿಸಿತ್ತು. ಇದಾದ ನಂತರ ನೇಪಾಳ, ಭೂತಾನ್, ಶ್ರೀಲಂಕಾ, ಬ್ರೆಜಿಲ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಇದುವರೆಗೆ 85 ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಲಾಗಿದೆ. ಇದರಲ್ಲಿ 1.5 ಕೋಟಿ ಲಸಿಕೆಯನ್ನು ಮೋದಿ ಸರಕಾರ ಉಚಿತವಾಗಿ ನೀಡಿದೆ.

English summary
Is KPCC Tweet On India's Vaccination Drive Shows Wrong Information On Modi Government?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X