ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್-ಪಿಡಿಪಿ ಮೈತ್ರಿ ಸರ್ಕಾರ?

|
Google Oneindia Kannada News

ನವದೆಹಲಿ, ಜುಲೈ 02: ಸದ್ಯಕ್ಕೆ ರಾಜ್ಯಪಾಲರ ಆಳ್ವಿಕೆಯಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೆಯಾ? ಅಂಥದೊಂದು ಅನುಮಾನ ಸೃಷ್ಟಿಯಾಗುವ ಸನ್ನಿವೇಶಗಳು ಕಂಡುಬಂದಿವೆ!

ದೆಹಲಿಯಲ್ಲಿ ಇಂದು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಮತೆ ಹಲವು ಮುಖಂಡರು ಸಭೆ ಸೇರಲಿದ್ದು, ಜಮ್ಮು ಕಾಶಂಇರದ ರಾಜಕೀಯ ಸ್ಥಿತವಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಡಿಪಿ ಜೊತೆಗೆ ಮೈತ್ರಿಯಿಲ್ಲ, ಸ್ಪಷ್ಟಪಡಿಸಿದ ಕಾಂಗ್ರೆಸ್ಪಿಡಿಪಿ ಜೊತೆಗೆ ಮೈತ್ರಿಯಿಲ್ಲ, ಸ್ಪಷ್ಟಪಡಿಸಿದ ಕಾಂಗ್ರೆಸ್

ಹಿರಿಯ ಮುಖಂಡರಾದ ಕರನ್ ಸಿಂಗ್, ಪಿ ಚಿದಂಬರಂ, ಗುಲಾಂ ನಬಿ ಆಜಾದ್ ಮತ್ತು ಅಂಬಿಕಾ ಸೋನಿ ಸೇರಿದಂತೆ ಹಲವು ನಾಯಕರು ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ಸಭೆ ಸೇರಲಿದ್ದು, ಈ ಕುರಿತು ಚರ್ಚೆ ನಡೆಸಲಿದ್ದಾರೆ.

Is it true? Congress-PDP alliance in Jammu and Kashmir?

'ಈಗಲೇ ಆಗಲಿ, ಭವಿಷ್ಯದಲ್ಲೇ ಆಗಲಿ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ) ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ' ಕಾಂಗ್ರೆಸ್ ಸ್ಪಷ್ಟಪಡಿಸಿದೆಯಾದರೂ ಈಗಿನ ಕೆಲವು ಬೆಳವಣಿಗೆಳು ಮೈತ್ರಿ ಸಾಧ್ಯತೆಯನ್ನು ದಟ್ಟವಾಗಿಸಿವೆ.

ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?

ಒಟ್ಟು 87 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಶ್ನಲ್ ಕಾನ್ಪರೆನ್ಸ್ 15, ಕಾಂಗ್ರೆಸ್ 12 ಮತ್ತು 7 ಸ್ಥಾನಗಳನ್ನು ಇತರರು ಗೆದ್ದಿದ್ದರು. ಇದೀಗ ಕಾಂಗ್ರೆಸ್ -ಪಿಡಿಪಿ ಮೈತ್ರಿ ಮಾಡಿಕೊಳ್ಳುವುದಾದರೆ ಇತರರೂ ಕೈಜೋಡಿಸಲೇಬೇಕಾಗುತ್ತದೆ.

English summary
Top Congress leader are meeting to discuss about political situation in Jammu and Kashmir. BJP withdrew its support to PDP in this state. Currently Jammu and Kashmir is under Governor's rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X