ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿಜ್ವರದ ಭಯದ ನಡುವೆ ಚಿಕನ್ ತಿನ್ನಬಹುದಾ? ಇಲ್ಲಿದೆ WHO ಉತ್ತರ...

|
Google Oneindia Kannada News

ನವದೆಹಲಿ, ಜನವರಿ 05: ಕೊರೊನಾ ಸೋಂಕಿನ ನಡುವೆಯೇ ವಾರದಿಂದೀಚೆಗೆ ದೇಶದ ಕೆಲವೆಡೆ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಮಧ್ಯಪ್ರದೇಶ, ರಾಜಸ್ತಾನ, ಕೇರಳ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಹಕ್ಕಿ ಜ್ವರದ ಮೂಲ H5N1 ವೈರಸ್. ಹಕ್ಕಿಗಳಲ್ಲಿ ಈ ವೈರಸ್ ಕಂಡುಬಂದು ಹಕ್ಕಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆ. ಹಕ್ಕಿ ಜ್ವರಕ್ಕೀಡಾದ ಕೋಳಿಯ ಮಾಂಸ ಸೇವಿಸುವುದರಿಂದ ಮನುಷ್ಯರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಮುಂದೆ ಓದಿ...

 ಕೋಳಿ ಫಾರಂಗಳಿಗೆ ಬೀಗ

ಕೋಳಿ ಫಾರಂಗಳಿಗೆ ಬೀಗ

ಹಕ್ಕಿ ಜ್ವರದ ಪ್ರಕರಣಗಳು ಕಂಡುಬರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಕೋಳಿ ಫಾರಂಗಳನ್ನು ಮುಚ್ಚಲಾಗುತ್ತದೆ. ಯಾರೂ ಕೋಳಿ ಮಾಂಸ ಸೇವನೆ ಮಾಡದಂತೆ ಸೂಚಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಕೋಳಿಗಳನ್ನು ಜೀವಂತವಾಗಿಯೇ ಮಣ್ಣಿಗೆ ಹಾಕಲಾಗುತ್ತದೆ. ಹಕ್ಕಿ ಜ್ವರ ಕಂಡುಬಂದಾಗ ಕೋಳಿ ಮಾಂಸವನ್ನು ತಿನ್ನದಂತೆ ಜಾಗರೂಕತೆ ವಹಿಸಲಾಗುತ್ತದೆ.

48 ಸಾವಿರ ಹಕ್ಕಿಗಳನ್ನು ಕೊಲ್ಲಲು ಆದೇಶಿಸಿದ ಕೇರಳ ಸರ್ಕಾರ48 ಸಾವಿರ ಹಕ್ಕಿಗಳನ್ನು ಕೊಲ್ಲಲು ಆದೇಶಿಸಿದ ಕೇರಳ ಸರ್ಕಾರ

 ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ಹಕ್ಕಿ ಜ್ವರದ ಪ್ರಕರಣಗಳು ಕಾಣಿಸಿಕೊಂಡಾಗ ಕೋಳಿ ಮಾಂಸ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೆ ಯಾವುದೇ ಸಮಸ್ಯೆಯಿಲ್ಲ ಎಂದು 2005ರಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಆದರೆ ವೈರಸ್ ಹೊಂದಿರುವ ಪಕ್ಷಿಗಳು ಆಹಾರ ಸರಪಳಿಯಲ್ಲಿ ಯಾವುದೇ ರೂಪದಲ್ಲಿ ಸೇರಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದೆ.

 ಕೋಳಿ ಮಾಂಸ ಸೇವನೆ ಬಗ್ಗೆ WHO ಎಚ್ಚರಿಕೆ

ಕೋಳಿ ಮಾಂಸ ಸೇವನೆ ಬಗ್ಗೆ WHO ಎಚ್ಚರಿಕೆ

ಕೋಳಿ ಮಾಂಸವನ್ನು 165f (74c) ತಾಪಮಾನದಲ್ಲಿ ಬೇಯಿಸಲೇಬೇಕು. ಕೋಳಿ ಮೊಟ್ಟೆಯನ್ನೂ ಚೆನ್ನಾಗಿ ಬೇಯಿಸಲೇಬೇಕು. ಇಲ್ಲದಿದ್ದರೆ ವೈರಸ್ ಮನುಷ್ಯನ ದೇಹ ಹೊಕ್ಕುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಕೆ ನೀಡಿದೆ. ಮೊಟ್ಟೆಯ ಬಿಳಿ ಹಾಗೂ ಹಳದಿ ಭಾಗ ಪೂರ್ತಿಯಾಗಿ ಬೇಯಿಸಿದ ನಂತರವಷ್ಟೇ ಸೇವನೆ ಒಳಿತು ಎಂದು ಹೇಳಿದೆ.

 ಇತ್ತೀಚೆಗೆ ಪತ್ತೆಯಾದ ಹಕ್ಕಿ ಜ್ವರ ಪ್ರಕರಣ

ಇತ್ತೀಚೆಗೆ ಪತ್ತೆಯಾದ ಹಕ್ಕಿ ಜ್ವರ ಪ್ರಕರಣ

ವಾರದಿಂದೀಚೆಗೆ ರಾಜಸ್ತಾನ, ಕೇರಳ, ಮಧ್ಯಪ್ರದೇಶ, ಹಿಮಾಚಲದಲ್ಲಿ ಹಕ್ಕಿ ಜ್ವರ ಭೀತಿ ಎದುರಾಗಿದೆ. ಕೇರಳದಲ್ಲಿ 12000 ಬಾತುಕೋಳಿಗಳು ಸಾವನ್ನಪ್ಪಿದ್ದು, 48,000 ಪಕ್ಷಿಗಳನ್ನು ಕೊಲ್ಲಲು ಕೇರಳ ಸರ್ಕಾರ ಸೂಚಿಸಿದೆ. ಹಿಮಾಚಲ ಪ್ರದೇಶದ ಪ್ರಸಿದ್ಧ ಪೊಂಗ್ ಡಮ್ ಪಕ್ಷಧಾಮದಲ್ಲಿ ಮಂಗಳವಾರ 1700ಕ್ಕೂ ಅಧಿಕ ವಲಸೆ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ. ರಾಜಸ್ತಾನದ ಇಂಧೋರ್ ನಲ್ಲಿಯೂ ಈಚೆಗೆ ನೂರಾರು ಕಾಗೆಗಳು ಸತ್ತುಬಿದ್ದಿದ್ದವು.

English summary
Is It Safe To Eat Chicken During Bird Flu Here is world health organisation anwer...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X