ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದಿಯುವ ನೀರಿನ ಆವಿ ಸೇವಿಸಿದರೆ ಕೊರೊನಾ ವೈರಾಣು ಸಾಯುತ್ತಾ? ಏನಂತಾರೆ ವೈದ್ಯರು

|
Google Oneindia Kannada News

ಒಂದು ಕಡೆ ಅನ್ ಲಾಕ್ ಮೂಲಕ ನಿರ್ಬಂಧನೆಗಳನ್ನು ಸರಕಾರ ಸಡಿಲಿಸುತ್ತಾ ಬಂದರೆ, ಇನ್ನೊಂದು ಕಡೆ, ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ, ಗುಣಮುಖರಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.

ಅಕ್ಟೋಬರ್ ಹದಿನೈದರಿಂದ ಅನ್ ಲಾಕ್ - 5 ಆರಂಭವಾಗುತ್ತಿದೆ. ದಸರಾ, ದೀಪಾವಳಿ, ಜಾತ್ರೆ ಮುಂತಾದವುಗಳು ಸಾಲುಸಾಲಾಗಿ ಬರುತ್ತಿರುವುದರಿಂದ, ಸರಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸುರಕ್ಷತೆಯ ಜೊತೆಗೆ, ಆರ್ಥಿಕ ಚಟುವಟಿಕೆ ಉತ್ತೇಜನಕ್ಕೂ ಸರಕಾರ ಆದ್ಯತೆ ನೀಡಿದೆ.

ಶಾಕಿಂಗ್: ಕೊರೊನಾ ಟೆಸ್ಟ್ ಮಾಡಿಸುವುದೇ ಮೂರ್ಖತನ, ಮಾಡಿಸಿದರೆ ಪಾಸಿಟಿವ್ ಪಕ್ಕಾ!ಶಾಕಿಂಗ್: ಕೊರೊನಾ ಟೆಸ್ಟ್ ಮಾಡಿಸುವುದೇ ಮೂರ್ಖತನ, ಮಾಡಿಸಿದರೆ ಪಾಸಿಟಿವ್ ಪಕ್ಕಾ!

ಕೊರೊನಾ ಹಾವಳಿಯ ನಂತರ ಮನೆಮದ್ದು, ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ರೋಗ ನಿರೋಧಕ ಗುಣ ಹೆಚ್ಚಿಸುವ ಕಷಾಯಗಳು ಕಾಂಡಿಮೆಂಟ್ಸ್ ಅಂಗಡಿಗಳಲ್ಲೇ ಲಭ್ಯವಾಗುತ್ತಿದೆ. ವಿವಿಧ ರೀತಿಯ ಬೇರುಗಳನ್ನೂ ಜನರು ಆದ್ಯತೆಯಿಂದ ಖರೀದಿಸುತ್ತಿದ್ದಾರೆ.

ಕೊರೊನಾ ಲಸಿಕೆ ಲಭ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚಾರಕೊರೊನಾ ಲಸಿಕೆ ಲಭ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚಾರ

ಕುದಿಯುವ ನೀರಿನ ಆವಿಯನ್ನು ಸೇವಿಸಿದರೆ ಕೊರೊನಾ ವೈರಾಣು ಸಾಯುತ್ತಾ ಎನ್ನುವ ವಿಚಾರ, ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ವಿಚಾರದಲ್ಲಿ ಕೋವಿಡ್ ಇಂಡಿಯನ್ ಸೈಂಟಿಸ್ಟ್ ಅಶೋಶಿಯೇಷನ್ ಸದಸ್ಯರಾದ ಡಾ. ಎಸ್.ಕೃಷ್ಣಮೂರ್ತಿ ಏನು ಹೇಳುತ್ತಾರೆ? ಮುಂದೆ ಓದಿ..

ನಾಲ್ಕರಿಂದ ಐದು ಬಾರಿ ಕುದಿಯುವ ನೀರಿನ ಆವಿಯನ್ನು ಸೇವಿಸಿದರೆ ವೈರಾಣು ಸಾಯುತ್ತದೆ

ನಾಲ್ಕರಿಂದ ಐದು ಬಾರಿ ಕುದಿಯುವ ನೀರಿನ ಆವಿಯನ್ನು ಸೇವಿಸಿದರೆ ವೈರಾಣು ಸಾಯುತ್ತದೆ

ಕೊರೊನಾ ರೋಗದ ವೈರಾಣು ಮೂಗು, ಶ್ವಾಸಕೋಶಕ್ಕೆ ತಗುಲಿ ಉಸಿರಾಟಕ್ಕೆ ತೊಂದರೆ ಮಾಡುತ್ತದೆ. ಈ ವೈರಾಣುವನ್ನು ಸಂಪೂರ್ಣವಾಗಿ ನಾಶ ಮಾಡಲು ವೈದ್ಯರ ಬಳಿ ಹೋಗಬೇಕಾಗಿಲ್ಲ. ರೋಗದ ಲಕ್ಷಣ ಇರುವವರು ದಿನವೊಂದಕ್ಕೆ ನಾಲ್ಕರಿಂದ ಐದು ಬಾರಿ ಕುದಿಯುವ ನೀರಿನ ಆವಿಯನ್ನು ಸೇವಿಸಿದರೆ ವೈರಾಣು ಸಾಯುತ್ತದೆ ಎಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಚೀನಾದವರು ಲಸಿಕೆಯಿಲ್ಲದೇ ಇದನ್ನೇ ಪ್ರಯೋಗಿಸಿ ಕೊರೊನಾ ಮುಕ್ತರಾಗಿದ್ದಾರೆ

ಚೀನಾದವರು ಲಸಿಕೆಯಿಲ್ಲದೇ ಇದನ್ನೇ ಪ್ರಯೋಗಿಸಿ ಕೊರೊನಾ ಮುಕ್ತರಾಗಿದ್ದಾರೆ

'ಚೀನಾ ದೇಶದವರು ಲಸಿಕೆಯಿಲ್ಲದೇ ಇದನ್ನೇ ಪ್ರಯೋಗಿಸಿ ಕೊರೊನಾ ರೋಗದಿಂದ ಮುಕ್ತರಾಗಿದ್ದಾರೆ. ಕುದಿಯುವ ನೀರಿನ ಆವಿಗೆ ವೈರಾಣು ಸಾಯಿಸುವ ಶಕ್ತಿಯಿದೆ. ಆವಿಯನ್ನು ಸೇವಿಸಿ, ವೈದ್ಯರ ಬಳಿ ಹೋಗದೆಯೇ ಈ ಸೋಂಕಿನವರು ಗುಣಮುಖರಾಗಿದ್ದಾರೆ. ಇದಕ್ಕೆ ಬೇರೆ ಯಾವ ಔಷಧಿಯೂ ಬೇಕಾಗಿಲ್ಲ' ಎನ್ನುವ ಸಂದೇಶ ಹರಿದಾಡುತ್ತಿದೆ.

ಡಾ.ಕೃಷ್ಣಮೂರ್ತಿ ವಿಡಿಯೋ ಬಿಡುಗಡೆ

ಡಾ.ಕೃಷ್ಣಮೂರ್ತಿ ವಿಡಿಯೋ ಬಿಡುಗಡೆ

ಈ ವಿಚಾರದ ಬಗ್ಗೆ ಡಾ.ಕೃಷ್ಣಮೂರ್ತಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ, 'ಕೊರೊನಕ್ಕೂ ಮುನ್ನ, ಅಂದರೆ 2013ರಲ್ಲಿ ಕೊಕ್ರೈನ್ ಲೈಬ್ರೆರಿಯಲ್ಲಿ, ಕುದಿಯುವ ನೀರಿನ ಆವಿಗೆ ವೈರಾಣುವನ್ನು ಸಾಯಿಸುವಷ್ಟು ಶಕ್ತಿಯಿದೆಯೇ ಎಂದು ಪರೀಕ್ಷಿಸಲು ಆರು ಜನರ ಮೇಲೆ ಈ ವಿಧಾನವನ್ನು ಪ್ರಯೋಗಿಸಲಾಯಿತು. ಇದರ ಫಲಿತಾಂಶದ ಪ್ರಕಾರ, ಆವಿಯು ಸಾಮಾನ್ಯ ನೆಗಡಿಗೂ ಪರಿಹಾರವಲ್ಲ. ಹಾಗಾಗಿ, ಕುದಿಯುವ ನೀರಿನ ಆವಿ ಕೊರೊನಾ ವೈರಾಣುವನ್ನು ಸಾಯಿಸುವುದಿಲ್ಲ' ಎಂದು ಡಾ.ಕೃಷ್ಣಮೂರ್ತಿ ಹೇಳಿದ್ದಾರೆ.

ಬಿಸಿನೀರನ್ನು ಹೆಚ್ಚಾಗಿ ಕುಡಿಯಲು ಬಳಸಿದರೆ ಒಳ್ಳೆಯದು

ಬಿಸಿನೀರನ್ನು ಹೆಚ್ಚಾಗಿ ಕುಡಿಯಲು ಬಳಸಿದರೆ ಒಳ್ಳೆಯದು

"ಕುದಿಯುವ ನೀರಿನ ಆವಿ ಶ್ವಾಸಕೋಸಕ್ಕೆ ತಲುಪುವುದಿಲ್ಲ. ಇನ್ನು ಆವಿಯನ್ನು ತುಂಬಾ ಹೊತ್ತು ಸೇವಿಸಿದರೆ ಉಸಿರಾಟದ ಪ್ರಕ್ರಿಯೆಗೆ ತೊಂದರೆಯಾಗುವ ಸಾಧ್ಯತೆಯಿದೆ. ವೈರಾಣುಗಳು ಐವತ್ತು ಡಿಗ್ರಿಯ ಶಾಖಕ್ಕೆ ಸಾಯುತ್ತದೆ. ಆದರೆ, ಅಷ್ಟು ಬಿಸಿಯನ್ನು ನಮ್ಮ ದೇಹ ತಡೆದುಕೊಳ್ಳುವುದಿಲ್ಲ. ಹಾಗಾಗಿ, ಕುದಿಯುವ ನೀರಿನ ಆವಿಯನ್ನು ಸೇವಿಸಲು ನಾನು ರೆಕೆಮೆಂಡ್ ಮಾಡುವುದಿಲ್ಲ. ಆದರೆ, ಬಿಸಿನೀರನ್ನು ಹೆಚ್ಚಾಗಿ ಕುಡಿಯಲು ಬಳಸಿದರೆ ಒಳ್ಳೆಯದು" ಎಂದು ಡಾ. ಎಸ್.ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

Recommended Video

ಒನ್‌ ಇಂಡಿಯಾ ಫಲಶ್ರುತಿ: ನೀಗಿತು ಹಾಸ್ಮಿನಗರ ಬಡಾವಣೆ ಜನರ ಬವಣೆ.. ವಿದ್ಯುತ್ ಕಂಬ, ತಂತಿಗಳ ತ್ವರಿತ ದುರಸ್ತಿ

English summary
Is Inhaling The Steam Is Right Technique To Kill The Coronavirus? What Doctor Says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X