ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೆ ಕರೆನ್ಸಿ ನೋಟು ಮುದ್ರಣ, ಚೀನಾದಲ್ಲಲ್ಲ : ಆರ್ ಬಿಐ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 14: ಭಾರತದ ರೂಪಾಯಿ ಕರೆನ್ಸಿ ನೋಟುಗಳನ್ನು ಚೀನಾ ದೇಶದ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂಬ ವರದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಳ್ಳಿ ಹಾಕಿದೆ.

ಭಾರತದ ಎಲ್ಲಾ ನೋಟುಗಳನ್ನು ದೇಶದೊಳಗೆಯೇ ಮುದ್ರಿಸಲಾಗುತ್ತಿದೆ. ಬೇರೆ ಯಾವ ದೇಶದ ಕಂಪನಿಗಳಿಗೆ ಗುತ್ತಿಗೆ ನೀಡಿಲ್ಲ ಎಂದು ಆರ್ ಬಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಹೊಸ ನೋಟು ಅಸಲಿಯೋ ನಕಲಿಯೋ? ಹೀಗೆ ಪರೀಕ್ಷಿಸಿಹೊಸ ನೋಟು ಅಸಲಿಯೋ ನಕಲಿಯೋ? ಹೀಗೆ ಪರೀಕ್ಷಿಸಿ

ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಬಂದ ವರದಿಯಂತೆ ಚೀನಾ ಈಗ ನೋಟು ಮುದ್ರಣ ಕ್ಷೇತ್ರಕ್ಕೆ ಕಾಲಿಸಿರಿದ್ದು, ನೇಪಾಳ, ಮಲೇಶಿಯಾ, ಶ್ರೀಲಂಕಾ, ಬ್ರೆಜಿಲ್ ಅಲ್ಲದೆ ಭಾರತದ ನೋಟುಗಳ ಮುದ್ರಣ ಮಾಡುತ್ತಿದೆ ಎನ್ನಲಾಗಿತ್ತು.

Is China printing India currency? Rubbish says government

ಚೀನಾದ ಬ್ಯಾಂಕ್​ನೋಟ್ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ನ ಚೇರ್ಮನ್ ಲೂಯಿ ಗುಯಿಶೆಂಗ್ ಅವರು ಚೀನಾ ಸೆಂಟ್ರಲ್ ಬ್ಯಾಂಕಿನ ನಿಯತಕಾಲಿಕೆಯಲ್ಲಿ ಮೇ ತಿಂಗಳಿನಲ್ಲಿ ಬರೆದ ಲೇಖನದಲ್ಲಿ ಬಗ್ಗೆ ಉಲ್ಲೇಖಿಸಿದ್ದರು. 2015ರಲ್ಲಿ ನೇಪಾಳದ ಕರೆನ್ಸಿ ಮುದ್ರಣದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದಿದ್ದರು.

ಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆ

ಭಾರತದ ನೋಟುಗಳನ್ನ ಮುದ್ರಿಸಲು ಚೀನಾಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಭದ್ರತೆಗೆ ಅಪಾಯ ತಂದೊಡ್ಡಿದಂತಾಗುತ್ತದೆ, ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕಿಸ್ತಾನಕ್ಕೆ ಈಗ ಖೋಟಾ ನೋಟು ಮುದ್ರಿಸುವ ದಾರಿ ಇನ್ನಷ್ಟು ಸುಗಮವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ನಿರೀಕ್ಷಿಸಿ! 1,000 ರೂಪಾಯಿ ನೋಟು ಮತ್ತೆ ಬರಲಿದೆ ನಿರೀಕ್ಷಿಸಿ! 1,000 ರೂಪಾಯಿ ನೋಟು ಮತ್ತೆ ಬರಲಿದೆ

ಚೀನಾದಲ್ಲಿ ಭಾರತದ 100 ರೂಪಾಯಿ, 1,000, 5 ರುಪಾಯಿ ಕರೆನ್ಸಿ ನೋಟನ್ನು ಮುದ್ರಿಸಲಾಗುತ್ತಿದೆ ಎಂಬ ಸುದ್ದಿ ಬಗ್ಗೆ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಪ್ರತಿಕ್ರಿಯಿಸಿ, ಇದೆಲ್ಲವು ಆಧಾರರಹಿತ ಸುದ್ದಿ ಎಂದಿದ್ದಾರೆ. ಎಲ್ಲಾ ನೋಟುಗಳು ಆರ್ ಬಿಐ ಮೂಲಕ ಭಾರತ ಸರ್ಕಾರದ ಕಣ್ಗಾವಲಿನಲ್ಲೇ ಮುದ್ರಣವಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

English summary
The Centre has termed as baseless, reports claiming that China is printing currencies for India and other countries. A report by the South China Morning Post said that China is printing currencies for several nations including Nepal, Malaysia, Sri Lanka, Malaysia and Brazil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X