ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯದ ಮೂರು ರಾಜ್ಯಗಳಲ್ಲೂ ಬಿಜೆಪಿಯದ್ದೇ ಸರ್ಕಾರ!

|
Google Oneindia Kannada News

ನವದೆಹಲಿ, ಮಾರ್ಚ್ 05: ಈಶಾನ್ಯ ರಾಜ್ಯಗಳಲ್ಲೂ ಕೇಸರಿ ರಂಗು ಮೂಡುವ ಮೂಲಕ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಜೊತೆಗೆ ವಾಮಪಂಥ ಮುಕ್ತ ಭಾರತ ಸಂಕಲ್ಪಕ್ಕೆ ಮತ್ತಷ್ಟು ಒತ್ತು ಸಿಕ್ಕಂತಾಗಿದೆ. ತ್ರಿಪುರ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮತ್ತು ಬಿಜೆಪಿ ಮಿತ್ರಪಕ್ಷಗಳು ಸರ್ಕಾರ ರಚಿಸುವುದು ಖಚಿತ.

ತ್ರಿಪುರದಲ್ಲಂತೂ ಬಿಜೆಪಿಗೆ ಬಹುಮತ ಸಿಕ್ಕಾಗಿದೆ. ಆದರೆ ಕಾಂಗ್ರೆಸ್ಸು ಅತಿ ದೊಡ್ಡ ಪಕ್ಷ(ಸಿಂಗಲ್ ಲಾರ್ಜೆಸ್ಟ್ ಪಾರ್ಟಿ)ವಾಗಿ ಹೊರಹೊಮ್ಮಿರುವ ಮೇಘಾಲಯದಲ್ಲೂ ಬಿಜೆಪಿ ತನ್ನ ಪಾರಮ್ಯ ಮೆರೆಯಲಿದೆಯಾ? ಹೌದು, ಎನ್ನುತ್ತಿವೆ ಬಿಜೆಪಿ ಮೂಲಗಳು. ಜೊತೆಗೆ ನಾಗಾಲ್ಯಾಂಶ್ ನಲ್ಲೂ ಬಿಜೆಪಿ ಮತ್ತು ಮೈತ್ರಿಕೂಟವೇ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಈಶಾನ್ಯದಲ್ಲಿ ಬಿಜೆಪಿ ಯಶಸ್ಸಿಗೆ ನಾಲ್ವರು ತಂತ್ರಗಾರರೇ ಕಾರಣಈಶಾನ್ಯದಲ್ಲಿ ಬಿಜೆಪಿ ಯಶಸ್ಸಿಗೆ ನಾಲ್ವರು ತಂತ್ರಗಾರರೇ ಕಾರಣ

ತ್ರಿಪುರ ವಿಧಾನಸಭೆಗೆ ಫೆ.18 ಮತ್ತು ಮೇಘಾಲಯ, ನಾಗಾಲ್ಯಾಂಡ್ ವಿಧಾನಸಭೆಗೆ ಫೆ.27 ರಂದು ಚುನಾವಣೆ ನಡೆದಿತ್ತು. ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಮಾ.3 ರಂದು ಬಿಡುಗಡೆಯಾಗಿತ್ತು.

ಈಶಾನ್ಯ ರಾಜ್ಯಗಳಲ್ಲಿ ಕೇಸರಿ ರಂಗು ಚೆಲ್ಲಿದ 'ನಿಪುಣ' ಹಿಮಂತಈಶಾನ್ಯ ರಾಜ್ಯಗಳಲ್ಲಿ ಕೇಸರಿ ರಂಗು ಚೆಲ್ಲಿದ 'ನಿಪುಣ' ಹಿಮಂತ

ಮೇಘಾಲಯಲದಲ್ಲೂ ಅರಳಲಿದೆ ಕಮಲ..!

ಮೇಘಾಲಯಲದಲ್ಲೂ ಅರಳಲಿದೆ ಕಮಲ..!

ಮೇಘಾಲಯದಲ್ಲಿ ಚುನಾವಣೆ ನಡೆದ ಒಟ್ಟು 59 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು 2 ಕ್ಷೇತ್ರಗಳನ್ನು ಮಾತ್ರ. ಆದರೆ ನ್ಯಾಶ್ನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ), ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿ(ಯುಡಿಪಿ), ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ(ಎಚ್ ಎಸ್ ಪಿಡಿಪಿ), ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್(ಪಿಡಿಎಫ್) ಜೊತೆ ಸೇರಿ ಮೇಘಾಲಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಇಲ್ಲಿನ ತುರಾ ಕ್ಷೇತ್ರದ ಸಂಸದ, ಎನ್ ಪಿಪಿ ಮುಖಂಡ ಕೊನ್ರಾಡ್ ಸಂಗ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಎಲ್ಲಾ ಪಕ್ಷಗಳೂ ಒಮ್ಮತದಿಂದ ಆಯ್ಕೆ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಅವರು ಇಂದೇ(ಮಾ.5) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೇಘಾಲಯ ಚುನಾವಣಾ ಫಲಿತಾಂಶ: ಬಿಜೆಪಿ-2, ಕಾಂಗ್ರೆಸ್-21, ಯುಡಿಪಿ-6, ಎನ್ ಪಿಪಿ-19, ಇತರರು-11

ನಾಗಾಲ್ಯಾಂಡ್ ನಲ್ಲೂ ಕೇಸರಿ ಬಣ್ಣ!

ನಾಗಾಲ್ಯಾಂಡ್ ನಲ್ಲೂ ಕೇಸರಿ ಬಣ್ಣ!

ನಾಗಾಲ್ಯಾಂಡ್ ನಲ್ಲೂ ಬಿಜೆಪಿ ಮೈತ್ರಿಕೂಟವೇ ಸರ್ಕಾರ ರಚಿಸುವುದು ಖಚಿತವಾಗಿದೆ. ಇಲ್ಲಿ ನಾಗಾ ಪೀಪಲ್ಸ್ ಫ್ರಂಟ(ಎನ್ ಪಿಎಫ್) 27(60) ಸ್ಥಾನಗಳನ್ನು ಗೆದ್ದಿದ್ದರು, ಬಿಜೆಪಿ ಮತ್ತು ಎನ್ ಡಿಪಿಪಿ ಗಳು ಸೇರಿದರೆ 29 ಸ್ಥಾನವಾಗುತ್ತದೆ. ಇನ್ನುಳಿದ ಎರಡು ಸ್ಥಾನಗಳಿಗೆ ಜೆಡಿಯು ಮತ್ತು ಇನ್ನೊಬ್ಬರು ಸ್ವತಂತ್ರ ಅಭ್ಯರ್ಥಿ ಬೆಂಬಲ ನೀಡಲು ಸಿದ್ಧರಿರುವುದರಿಂದ ಬಿಜೆಪಿಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ಸುಲಭವಾಗಿ ಸಿಕ್ಕಲಿದೆ. ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ನೈಫಿಯು ರಿಯೋ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಒಮ್ಮತದಿಂದ ಆರಿಸಲಾಗಿದೆ.

ನಾಗಾಲ್ಯಾಂಡ್ ಚುನಾವಣಾ ಫಲಿತಾಂಶ:
ಬಿಜೆಪಿ- 12, ಎನ್ ಡಿಪಿಪಿ-17, ಕಾಂಗ್ರೆಸ್- 0, ಎನ್ ಪಿಎಫ್ -27, ಇತರರು- 4

ತ್ರಿಪುರದಲ್ಲಿ ಎಡಪಕ್ಷಕ್ಕೆ ಮುಖಭಂಗ!

ತ್ರಿಪುರದಲ್ಲಿ ಎಡಪಕ್ಷಕ್ಕೆ ಮುಖಭಂಗ!

ಕಳೆದ 25 ವರ್ಷಗಳಿಂದ ತ್ರಿಪುರದಲ್ಲಿ ಅನಭಿಷಿಕ್ತ ದೊರೆಯಾಗಿ ಆಳಿದ ಎಡಪಕ್ಷಕ್ಕೆ ಚುನಾವಣಾ ಫಲಿತಾಂಶ ಮಂಗಳಾರತಿ ಎತ್ತಿದೆ! ಈ ಭಾಗದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಈಶಾನ್ಯ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುವ ಹಿಂದೆ, ಅನಾಚಾರಗಳಿಗೆ ಜನರು ಸೂಕ್ತ ಉತ್ತರ ನೀಡಿದಂತಿದೆ. ಇಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷ 43 ಕ್ಷೇತ್ರಗಳಲ್ಲಿ ಜಯಗಳಿಸಿ, ಬಹುಮತ ಪಡೆದು, ಯಾವ ತಕರಾರಿಲ್ಲದೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.

ತ್ರಿಪುರ ಚುನಾವಣಾ ಫಲಿತಾಂಶ: ಬಿಜೆಪಿ-43, ಕಾಂಗ್ರೆಸ್-0, ಸಿಪಿಎಂ- 16

ಈಶಾನ್ಯ ಮಿಶನ್ ಯಶಸ್ವಿ!

ಈಶಾನ್ಯ ಮಿಶನ್ ಯಶಸ್ವಿ!

ಈ ಮೂಲಕ ಬಿಜೆಪಿಯ ಈಶಾನ್ಯ ಮಿಶನ್ ಯಶಸ್ವಿಯಾಗಿದೆ! ಈಗಾಗಲೇ ಭಾರತದ ಭೂಪಟ ಕೇಸರಿ ಮಯವಾಗಿದ್ದು, ಈಶಾನ್ಯ ರಾಜ್ಯಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಾಬಲ್ಯ ಹೆಚ್ಚಿದ್ದರಿಂದ ಬಿಜೆಪಿ ಅಲ್ಲಿ ತನ್ನ ಗಟ್ಟಿ ಅಸ್ತಿತ್ವ ಕಂಡುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಆಡಳಿತ ಪಕ್ಷದ ವೈಫಲ್ಯವೋ, ಮೋದಿಯವರಂಥ ಪ್ರಭಾವಿ ನಾಯಕರ ಸೂಕ್ತ ಪ್ರಚಾರವೋ, ಮೋದಿ ಸರ್ಕಾರ ಅಭಿವೃದ್ಧಿ ಕಾರ್ಯಗಳೋ... ಒಟ್ಟಿನಲ್ಲಿ ಈಶಾನ್ಯ ರಾಜ್ಯಗಳು ಕಮಲಕ್ಕೆ ಜೈ ಎನ್ನುವಂತೆ ಮಾಡಿವೆ.

English summary
Is BJP forming coalition governments in all three North east states? Some sources said, BJP will be forming governments in Tripura, Nagaland as well as Meghalaya also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X