ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ

|
Google Oneindia Kannada News

ಬೆಂಗಳೂರು, ಜೂನ್ 27: ಕಳೆದ 30 ವರ್ಷಗಳಲ್ಲಿ ನೀರಿಲ್ಲದೆ ಚೆನ್ನೈ ಶೂನ್ಯ ನಗರವಾಗುವತ್ತ ದಾಪುಗಾಲು ಹಾಕುತ್ತಿದೆ. ಮುಂದಿನ ಸರದಿ ಬೆಂಗಳೂರಿನದ್ದಾಗಬಹುದೇ ಎಂಬ ಆತಂಕವೂ ಎದುರಾಗಿದೆ.

ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆಯುತ್ತಿದ್ದರೂ ಒಂದೆರೆಡು ಮಳೆ ಆಗಿದ್ದು ಬಿಟ್ಟರೆ ಮಳೆಯೇ ಬಂದಿಲ್ಲ. ಬೆಂಗಳೂರು ಕೂಡ ಅಂತಹ ಬಿಕ್ಕಟ್ಟಿನಿಂದ ಬಹುದೂರವಿಲ್ಲ.

ಕೆರೆಗಳ ನಗರಿ ಎಂಬ ಪ್ರಖ್ಯಾತಿಯಿಂದ ಕಾಂಕ್ರೀಟ್ ಕಾಡು ಎಂಬ ಕುಖ್ಯಾತಿಯ ಕಿರೀಟ ಹೊತ್ತುಕೊಂಡಿರುವ ಬೆಂಗಳೂರಿನಲ್ಲಿ ಎಲ್ಲ ನೀರೂ ಮಾಯವಾಗಿದೆ.

ತ್ವರಿತವಾಗಿ ಆಗಿರುವ ನಗರೀಕರಣ, ಉಬ್ಬುತ್ತಲೇ ಸಾಗುತ್ತಿರುವ ಜನಸಂಖ್ಯೆ ಹಾಗೂ ಅತ್ಯಂತ ಅಸಮರ್ಪಕ ನೀರಿನ ನಿರ್ವಹಣೆಯಿಂದಾಗಿ ನೀರಿನ ಕೊಳವೆಗಳೇ ಬರಿದಾಗುತ್ತಿವೆ,ಅಂತರ್ಜಲ ಮಟ್ಟ ಪಾತಾಳದತ್ತ ಕುಸಿಯುತ್ತಿದೆ,ನೊರೆ ಕಕ್ಕುತ್ತಿರುವ ಕೆರೆಗಳು ಬೆಂಕಿಯುಂಡೆಗಳಾಗಿ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಯಾಗುತ್ತಿವೆ.

ನೀರಿನ ಅಗತ್ಯತೆಯ ಶೇ. 50ರಷ್ಟು ಅಭಾವ

ನೀರಿನ ಅಗತ್ಯತೆಯ ಶೇ. 50ರಷ್ಟು ಅಭಾವ

ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕಿನ 2010ರ ಅಧ್ಯಯನದಂತೆ 2030ರ ವೇಳೆಗೆ ಭಾರತವು ಶುದ್ಧ ನೀರಿನ ತನ್ನ ಅಗತ್ಯತೆಯ ಶೇ.50ರಷ್ಟು ಭಾಗ ಕೊರತೆ ಎದುರಿಸಲಿದೆ.
ಅಂತರ್ಜಲ ರಹಿತ ನಗರಗಳು 2020ರ ವೇಳೆ ನಗರಗಳು ಅಂತರ್ಜಲ ರಹಿತ ಅಂತರ್ಜಲ ಮಟ್ಟದ ಕುರಿತು ನೀತಿ ಆಯೋಗವು 2018ರಲ್ಲಿ ಹೇಳುವಂತೆ ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ 2020ರ ವೇಳೆಗೆ ಸಂಪೂರ್ಣ ಅಂತರ್ಜಲ ರಹಿತವಾಗಲಿದೆ. 100 ದಶಲಕ್ಷ ಜನರು ಬಾಧಿತರಾಗಲಿದ್ದಾರೆ. 2030ರ ವೇಳೆಗೆ ಭಾರತದ ಶೇ.40ರಷ್ಟು ಜನರಿಗೆ ಕುಡಿಯುವ ನೀರೇ ದಕ್ಕದಂತಹ ಘೋರ ಪರಿಸ್ಥಿತಿ ತಲೆದೋರಲಿದೆ.

ಕುಡಿಯುವ ನೀರೇ ಇಲ್ಲದ 11 ನಗರಗಳಲ್ಲಿ ಬೆಂಗಳೂರು ಒಂದು

ಕುಡಿಯುವ ನೀರೇ ಇಲ್ಲದ 11 ನಗರಗಳಲ್ಲಿ ಬೆಂಗಳೂರು ಒಂದು

ಆಧುನಿಕ ಯುಗದಲ್ಲಿ ಕುಡಿಯುವ ನೀರೇ ಇಲ್ಲದ 11 ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಲಿದೆ ಎಂದು ಬಿಬಿಸಿ ತನ್ನ ವರದಿಯಲ್ಲಿ ತಿಳಿಸಿದೆ. ತಂತ್ರಜ್ಞಾನದ ಜಾಲವಾಗಿ ಬೆಳೆದಿರುವ ಬೆಂಗಳೂರು ತನ್ನ ನಗರದ ನೀರಿನ ಮತ್ತು ತ್ಯಾಜ್ಯದ ನಿರ್ವಹಣೆಯ ಗಂಭೀರ ಬಿಕ್ಕಟ್ಟಿನಿಂದ ನಲುಗುತ್ತಿದೆ.

ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಕಾರಣಗಳು

ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಕಾರಣಗಳು

ನಗರದ ಗಾತ್ರವು ಕೇವಲ ದಶಕವೊಂದರ ಅವಧಿಯಲ್ಲಿ ಮೂರು ಪಟ್ಟು ಅಧಿಕವಾಗಿದ್ದು 800 ಚದರ ಕಿಲೋಮೀಟರ್‍ಗಳಿಗೆ (198,000 ಎಕರೆ) ವಿಸ್ತರಿಸಿದೆ. ಹತ್ತಾರು ಜನವಸತಿ ಹಾಗೂ ಗ್ರಾಮಗಳನ್ನು ಬಾಚಿಕೊಂಡು ಬೆಳೆದಿರುವ ಬೆಂಗಳೂರು ಲಂಡನ್ ನಗರಿಯ ಅರ್ಧದಷ್ಟಕ್ಕೂ ಹೆಚ್ಚು ಭಾಗದಷ್ಟು ವಿಸ್ತರಿಸಿಕೊಂಡಿದೆ.

- ಬೆಂಗಳೂರು ನಗರದ ಜನಸಂಖ್ಯೆ 1970ರಲ್ಲಿ 1.62 ದಶಲಕ್ಷ ಇದ್ದುದು 2019ರ ವೇಳೆಗೆ 12.9 ದಶಲಕ್ಷಕ್ಕೆ ಹೆಚ್ಚಿದ್ದು 4.23% ವಾರ್ಷಿಕ ಬೆಳವಣಿಗೆಯೊಂದಿಗೆ 2031ರ ವೇಳೆಗೆ
-ಬೆಂಗಳೂರು ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ(ಬಿಡಬ್ಲ್ಯೂಎಸ್‍ಎಸ್‍ಬಿ) ಯು ಬೆಂಗಳೂರು ನಗರದ ಕುಡಿಯುವ ನೀರು ನಿರ್ವಹಣೆಯ ಪ್ರಮುಖ ಏಜೆನ್ಸಿಯಾಗಿದೆ-ಆದರೆ ನಗರದ ಕೇವಲ 45-50%ದಷ್ಟು ಅಗತ್ಯತೆಯನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ.
-ಅಸಮರ್ಪಕ ಪ್ಲಂಬಿಂಗ್‍ನಿಂದಾಗಿ ಬೃಹತ್ ಪ್ರಮಾಣದ ಕುಡಿಯುವ ನೀರಿನ ವ್ಯರ್ಥ:
ನಗರದೆಲ್ಲೆಡೆ ಅಂತರ್ಜಲ ಕುಸಿತ

ನಗರದೆಲ್ಲೆಡೆ ಅಂತರ್ಜಲ ಕುಸಿತ

ಅಂತರ್ಜಲ ಕುಸಿತ: ಚೆನ್ನೈ ಬೆಂಗಳೂರು ಸೇರಿದಂತೆ ನಮ್ಮಷ್ಟೇ ಬಾಯಾರಿರುವ ದೇಶದ ಇತರೇ ನಗರಗಳಿಂದ ಕಾವೇರಿ ನೀರಿಗಾಗಿ ಭಾರಿ ಪೈಪೋಟಿ ಏರ್ಪಟ್ಟಿದ್ದು ನೀರಿನ ಇತರ ಮೂಲಗಳನ್ನು ಎದುರುನೋಡುತ್ತಿದೆ. ಕೊಳವೆ ಬಾವಿಗಳು ಬತ್ತುತ್ತಿದ್ದು ನಳಗಳ ಮುಖಾಂತರ ನೀರು ಸರಬರಾಜು ಇಲ್ಲದ ನಗರದ ಪ್ರದೇಶಗಳು ತೀವ್ರ ಕೊರತೆ ಎದುರಿಸುತ್ತಿವೆ. ಖಾಸಗಿ ನೀರಿಗಾಗಿ ಬೇಡಿಕೆ ಬಹುಪಾಲು ಹೆಚ್ಚಿದೆ. ನಗರದ ತಂತ್ರಜ್ಞಾನ ಬೆಳವಣಿಗೆ ಭರಾಟೆಯ ವೇಗಕ್ಕೆ ತಾವು ಸೂಕ್ತವಾಗಿ ಸಿದ್ಧಗೊಂಡಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದು ಬೆಂಗಳೂರಿನ ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ತಕ್ಕಂತೆ ಸೂಕ್ತ ಅಂದಾಜು ಯೋಜನೆ ರೂಪಿಸಿಲ್ಲ.

ಕೆರೆಗಳು ಜಲಾಶಯಗಳಂತೆ ಕೆಲಸ

ಕೆರೆಗಳು ಜಲಾಶಯಗಳಂತೆ ಕೆಲಸ

ಬೆಂಗಳೂರು ನಗರವನ್ನು ಸರಣಿ ಕೆರೆಗಳೊಂದಿಗೆ ಕಟ್ಟಲಾಗಿದ್ದು ಮಳೆ ನೀರಿನ ಜಲಾಶಯಗಳಂತೆ ಕೆಲಸ ಮಾಡುತ್ತಿದ್ದವು ಅಂತರ್ಜಲವನ್ನು ಮರುಪೂರಣಗೊಳಿಸುವ ಮೂಲಗಳಾಗಿ ಕೆಲಸ ಮಾಡುತ್ತಿದ್ದವು. ನಗರೀಕರಣದಿಂದಾಗಿ ಕೆರೆಗಳು ನಿರಂತರ ಆಕ್ರಮಣಕ್ಕೊಳಗಾಗಿದ್ದು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಅತಿಕ್ರಮಣಗೊಂಡಿದ್ದು ವಿಷಕಾರಿ ತ್ಯಾಜ್ಯಗಳ ನೊರೆ ಉಗುಳುತ್ತಿವೆ. ಕೈಗಾರಿಕೆಗಳ ಮತ್ತು ಮನೆಗಳ ತ್ಯಾಜ್ಯಗಳಿಂದ ತುಂಬಿ ಹೋಗಿವೆ.

ಕೆರೆಗಳ ಉಳಿಸಲು ಸಮಿತಿ?

ಕೆರೆಗಳ ಉಳಿಸಲು ಸಮಿತಿ?

ಬತ್ತುತ್ತಿರುವ ನೀರಿನ ಸೆಲೆಗಳು (ಮೂಲಗಳು) ಮತ್ತು ಅವುಗಳ ಜೀವ ಪರಿಸರದಿಂದಾಗಿ ಕರ್ನಾಟಕ ಸರ್ಕಾರ ಕಳೆದ ಕೆಲ ವರ್ಷಗಳಿಂದೀಚೆಗೆ ವಿವಿಧ ತಜ್ಞರ ಸಮಿತಿಗಳನ್ನು ನೇಮಕ ಮಾಡಿದೆ.

- ಎನ್.ಲಕ್ಷ್ಮಣ್ ರಾವ್ ನೇತೃತ್ವದ ತಜ್ಞರ ಸಮಿತಿ, ಸಮಸ್ಯೆಗಳ ಅಧ್ಯಯನ ನಡೆಸಿ ಈಗ ಇರುವ ಕೆರೆಗಳನ್ನು ಉಳಿಸಿ ಪುನರುಜ್ಜೀವನಗೊಳಿಸಲು ಮಾರ್ಗೋಪಾಯಗಳನ್ನು ಕುರಿತು ಸಲಹೆಗಳನ್ನು ನೀಡಿತು. ಈ ಸಮಿತಿ ಮಾಡಿದ ಶಿಫಾರಸ್ಸುಗಳನ್ನು ಹೊರತಾಗಿಯೂ ಕೆರೆಗಳ ಅತಿಕ್ರಮಣ ಮುಂದುವರೆದು ನೀರಿನ ಗುಣಮಟ್ಟ ಹಾಳುಗೆಡವಲು, ಹೂಳು ತುಂಬಿಕೊಳ್ಳಲು ಹಾಗೂ ಕೆರೆ ಪ್ರದೇಶ ಕುಂಠಿತಗೊಳ್ಳುವುದು ಮುಂದುವರೆಯಿತು.

-ಬೆಂಗಳೂರು ನಗರ ಜಿಲ್ಲೆಯಲ್ಲಿ ಭೂ ಅತಿಕ್ರಮಣದ ಕುರಿತು ಜಂಟಿ ಸದನ ಸಮಿತಿ ವರದಿ (2006)-ಜೂನ್ 2006ರಲ್ಲಿ 14 ಶಾಸಕರು ಹಾಗೂ 6 ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಸಮಿತಿಯನ್ನು ಎ.ಟಿ.ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ನಗರ ಮತ್ತು ಪಟ್ಟಣ ಪುರಸಭೆಗಳು ಸರ್ಕಾರಿ ಮತ್ತ ಸಾರ್ವಜನಿಕರ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಗಂಭೀರವಾದ ವೈಫಲ್ಯ ಕಂಡಿವೆ. ಅಸಹಾಯಕತೆ ಪ್ರದರ್ಶಿಸಿವೆ, ಸಹ್ಯ ಸಾಕ್ಷಿಗಳಾಗಿ ಪರಿಣಮಿಸಿವೆ ಹಾಗೂ ಹಲವಾರು ಪ್ರಕರಣಗಳಲ್ಲಿ ತಾವೇ ಸಕ್ರಿಯವಾಗಿ ಪಾಲ್ಗೊಂಡಿವೆ, ಈ ಅಪರಾಧಗಳಲ್ಲಿ ಅಪರಾಧಿಗಳು ಮತ್ತು ಪೋಷಕರಾಗಿ ಭೂ ಮಾಫಿಯಾದೊಂದಿಗೆ ಶಾಮೀಲಾಗಿವೆ ಎಂಬ ತೀರ್ಮಾನಕ್ಕೆ ಬಂದಿತ್ತು.

ಬೆಂಗಳೂರಿನಲ್ಲಿ ಒತ್ತುವರಿಯಾದ ಕೆರೆ ಪ್ರದೇಶಗಳೆಷ್ಟು?

ಬೆಂಗಳೂರಿನಲ್ಲಿ ಒತ್ತುವರಿಯಾದ ಕೆರೆ ಪ್ರದೇಶಗಳೆಷ್ಟು?

ಕೆರೆಗಳ ಒತ್ತುವರಿ ಕುರಿತು ಕೋಳಿವಾಡ ಸಮಿತಿ ವರದಿ (2015) ರ ಪ್ರಕಾರ ಸುಮಾರು 1.5ಲಕ್ಷ ಕೋಟಿ ಮೌಲ್ಯದ 10,787.28 ಎಕರೆ ಕೆರೆ ಭೂಮಿ ಬೆಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಒತ್ತುವರಿಯಾಗಿದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 16,500 ಕೋಟಿ ರೂ ಮೊತ್ತದ ಕೆರೆ ಪ್ರದೇಶ ಹಾಗೂ 501.11 ಎಕರೆ ರಾಜಕಾಲುವೆ ಪ್ರದೇಶ ಒತ್ತುವರಿಯಾಗಿದೆ. ಇವೆಲ್ಲವೂ ಸೇರಿದಲ್ಲಿ ಒತ್ತುವರಿ ಆಗಿರುವ ಒಟ್ಟು ಪ್ರದೇಶದ ಮೌಲ್ಯ ರೂ.1,77,500 ಕೋಟಿ ಆಗಲಿದೆ.

ಉಚ್ಛನ್ಯಾಯಾಲಯವು ರಾಜಕಾಲುವೆ(ಎಸ್‍ಡಬ್ಲ್ಯುಡಿ) ಗಳ ಸಮೀಕ್ಷೆ ನಡೆಸಿ ಅವುಗಳ ಮೇಲೆ ಮತ್ತು ಅವುಗಳ ಸುತ್ತ ಇರುವ ಒತ್ತುವರಿ ತೆರವುಗೊಳಿಸುವುದು ಮತ್ತು ಅವುಗಳಿಗೆ ಬೇಲಿ ಹಾಕುವಂತೆ ಆದೇಶ ಮಾಡಿತ್ತು.

ರಾಜಕಾಲುವೆಗಳಿಗೆ ಯಾವುದೇ ಸಂಸ್ಕರಿಸದ ಅಥವಾ ಮಲಿನಗೊಂಡ ನೀರು ಹರಿಯದಂತೆ ಕ್ರಮಕೈಗೊಳ್ಳುವ ಕುರಿತು ನ್ಯಾಯಾಲಯವು ಸ್ಪಷ್ಟ ಸೂಚನೆ ನೀಡಿತ್ತು. ಕೆರೆಗಳಿಗೆ ರಾಜಕಾಲುವೆಗಳು ನೀರು ಹರಿಸುವ ಕಾಲುವೆಗಳಾಗಿದ್ದು ಅತ್ಯಂತ ಮಹತ್ವದ್ದಾಗಿದ್ದರಿಂದ ನ್ಯಾಯಾಲಯದ ಮಧ್ಯಪ್ರವೇಶ ಅತ್ಯಂತ ಅವಶ್ಯಕವಾಗಿತ್ತು. ಸರಳವಾಗಿ ಹೇಳುವುದಾದಲ್ಲಿ ಒತ್ತುವರಿಗೊಂಡಿರುವ ಈ ಕಾಲುವೆಗಳನ್ನು ತೆರವುಗೊಳಿಸುವವರೆಗೂ ನಗರದ ಕೆರೆಗಳ ಪುನರುಜ್ಜೀವನ ಅಸಾಧ್ಯದ ಮಾತು.

ಎತ್ತಿನಹೊಳೆ ಯೋಜನೆ: ಶಾಶ್ವತ ಪರಿಹಾರ ತಂದುಕೊಡುವುದೇ?

ಎತ್ತಿನಹೊಳೆ ಯೋಜನೆ: ಶಾಶ್ವತ ಪರಿಹಾರ ತಂದುಕೊಡುವುದೇ?

ಮೂರು ಕಡೆಗಳಲ್ಲಿ ನೀರನ್ನು ಮೇಲೆತ್ತಲು ವರ್ಷಕ್ಕೆ 250ರಿಂದ 300 ಮೆಗಾವ್ಯಾಟ್ ವಿದ್ಯುತ್ ಅವಶ್ಯವಿದೆ.ರಾಜ್ಯವು ಈಗಾಗಲೇ ವಿದ್ಯುತ್ ಕೊರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ 24 ಟಿಎಂಸಿ ನೀರೆತ್ತಲು ರೂ.8,329 ಕೋಟಿ ವೆಚ್ಛದಲ್ಲಿ ವಿದ್ಯುತ್ ಪೂರೈಕೆ ಮಾಡುವುದು ಸಮಸ್ಯೆಯಾಗಲಿದೆ.

ಎತ್ತಿನಹೊಳೆ ಯೋಜನೆಯಡಿಯಲ್ಲಿ ನೀರನ್ನು ಕೊಳವೆಗಳ ಮೂಲಕ ಹರಿಸಲಾಗುತ್ತಿದ್ದು ನೀರಿನ ಕಾಲುವೆಗಳ ಜಾಲದ ಮೂಲಕ ಹರಿಸದ ಹಿನ್ನೆಲೆಯಲ್ಲಿ ಅಂತರ್ಜಲ ಮರುಪೂರಣವಾಗಲು ಸಹಾಯಕವಾಗುವುದಿಲ್ಲ. ತಜ್ಞರ ಪ್ರಕಾರ ಎತ್ತಿನಹೊಳೆ ಯೋಜನೆಯು ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಮತ್ತು ಸರ್ಕಾರವು ಜನರ ಹಣವನ್ನು ಹಾಳುಮಾಡುತ್ತಿದೆ.
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಶರಾವತಿ ನೀರು?

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಶರಾವತಿ ನೀರು?

ಶರಾವತಿ ಕಣಿವೆ ಸುತ್ತ ವಾಸಿಸುತ್ತಿರುವ ಜನರು ಈಗಾಗಲೇ ಅನೇಕ ಅಭಿವೃದ್ಧಿ ಯೋಜನೆಗಳಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಯೋಜನೆಗಳಿಂದಾಗಿ ಈ ಪ್ರದೇಶದಲ್ಲಿ ವಾರ್ಷಿಕ ಮಳೆ ಪ್ರಮಾಣವು 70--80 ಇಂಚುಗಳಷ್ಟು ಕಡಿಮೆ ಆಗಿದೆ. ಈ ಸಮಸ್ಯೆಗಳ ನಡುವೆಯೂ ಶರಾವತಿಯಿಂದ ನೀರು ತರುವ ನಿಟ್ಟಿನಲ್ಲಿ ವಿವರವಾದ ಯೋಜನಾ ವರದಿ (ಡಿಪಿಆರ್) ಮಾಡುವಂತೆ ಸರ್ಕಾರವು ಚಿಂತನೆ ನಡೆಸಿದೆ.

Array

Array

ಮೂರು ಮಂತ್ರಗಳು-ಕಡಿಮೆ ಬಳಕೆ, ನೀರಿನ ಪುನರ್‍ಬಳಕೆ ಮತ್ತು ಸಂಸ್ಕರಣೆ
ಸಮುದ್ರಮಟ್ಟದಿಂದ 3500 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ಯಾವುದೇ ನೀರಿನ ಮೂಲಗಳಿಲ್ಲ. ದಕ್ಷಿಣ ಪಿನಾಕಿನಿ ಮತ್ತು ವೃಷಭಾವತಿಗಳ ಅಮೂಲ್ಯ ನೀರಿನ ಮೂಲಗಳನ್ನು ಈಗಾಗಲೇ ಹತ್ಯೆ ಮಾಡಿದ್ದು ಮಳೆ ನೀರಿನ ಕೊಯ್ಲು ಒಂದೇ ಉತ್ತರ-ಪರಿಹಾರ. ಅಂತರ್ಜಲ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸುವುದು ಮತ್ತು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸುವುದರ ಮೂಲಕ ಅಂತರ್ಜಲ ಹೆಚ್ಚಳ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಬಹುದು.
-ಮೇಲ್ವಿಚಾರಣಾ ಜಾಲವನ್ನು ಸುಧಾರಣೆಗೊಳಿಸುವುದು ಮತ್ತು ಅಂತರ್ಜಲ ಮಟ್ಟ ಮತ್ತು ಗುಣಮಟ್ಟದ ನಿರಂತರ ಮೇಲ್ವಿಚಾರಣೆ, ಮಳೆ ನೀರಿನ ಕೊಯ್ಲಿನ ಕಡ್ಡಾಯ ಅಳವಡಿಕೆ, ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆ ಮೂಲಕ ಅಂತರ್ಜಲ ಮಟ್ಟವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದು.

-ಮನೆಗಳ ಶೌಚಾಲಯ,ವಾಷ್ ಬೇಸಿನ್, ಶವರ್ಸ್, ತೋಟಗಾರಿಕೆ, ಕಾರ್ ತೊಳೆಯುವುದು ಮೊದಲಾದ ಕಡೆಗಳಲ್ಲಿ ಸಮರ್ಪಕವಾದ ಉಪಕರಣಗಳು,ಪ್ಲಂಬಿಂಗ್ ಜೊತೆಗೆ ಉಪಕರಣಗಳನ್ನು ಸೂಕ್ತವಾಗಿ ಪರಿಶೀಲನೆಗೊಳಪಡಿಸಿ ಎಲ್ಲ ಸೋರುವಿಕೆಯನ್ನೂ ಸರಿಪಡಿಸಿಕೊಳ್ಳುವ ಮೂಲಕ ಬೆಂಗಳೂರಿಗರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಗತ್ಯತೆ ಇದೆ. ಈ ಮೂಲಕ ಮನೆಯೊಂದರಲ್ಲಿ ಇದೀಗ ಬಳಕೆ ಮಾಡುತ್ತಿರುವ ನೀರಿನ ಪ್ರಮಾಣವನ್ನು ಶೇ.25ರಿಂದ 30 ರಷ್ಟು ಕಡಿಮೆ ಮಾಡಬಹುದು.

ನೀರಿನ ಸೋರಿಕೆ ತಡೆಗಟ್ಟಬೇಕು

ನೀರಿನ ಸೋರಿಕೆ ತಡೆಗಟ್ಟಬೇಕು

ಆದರೆ ಜಲಮಂಡಳಿ ಮೂಲಕ ಅಗಾಧ ಪ್ರಮಾಣದ ಸೋರಿಕೆ ತಡೆಗಟ್ಟಬೇಕಿದೆ. ಎನ್‍ಆರ್‍ಡಬ್ಲ್ಯುನ ಪ್ರಮಾಣ ತಗ್ಗಿಸಲು ಇನ್ನೂ ಶೇ. 40ದಷ್ಟು ಪ್ರದೇಶವನ್ನು ತಲುಪದೇ ಇರುವುದನ್ನು ಪರಿಗಣಿಸಿ ಸಮರೋಪಾದಿಯಲಿ ಕ್ರಮ ಕೈಗೊಳ್ಳಬೇಕಿದೆ.

English summary
What Bengaluru Must learn from Chennai Situation. Experts under the aegis of Doreswamy discussed city’s looming water crisis here si some present situation and information about water crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X