ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಿಂದ ಸಂಚಾರ ಆರಂಭಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು(ಐಆರ್‌ಸಿಟಿಸಿ) ಅಕ್ಟೋಬರ್ 08ರಿಂದ 'ಭಾರತ್ ದರ್ಶನ್' ವಿಶೇಷ ಪ್ರವಾಸಿ ರೈಲು ಸಂಚಾರವನ್ನು ಆರಂಭಿಸಲಿದೆ.

ಇದು ಮಧ್ಯಪ್ರದೇಶದ ರೇವಾ ರೈಲು ನಿಲ್ದಾಣದಿಂದ ಆಗ್ರಾ, ಮಥುರಾ, ಹರಿದ್ವಾರ, ರಿಷಿಕೇಶ, ಅಮೃತಸರ ಹಾಗೂ ವೈಷ್ಣೋ ದೇವಿ ಮಂದಿರಕ್ಕೆ ತೆರಳಲಿದೆ. ನೀವು ಟೆಕೆಟ್ ಪಡೆದಿದ್ದರೀರಾ ಇಲ್ಲವಾದಲ್ಲಿ rrcecr.gov.inನಲ್ಲಿ ಟಿಕೆಟ್ ಪಡೆಯಿರಿ.

 ರೈಲ್ವೆ ಪ್ಲಾಟ್‌ಫಾರ್ಮ್, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಕಡ್ಡಾಯ ನಿಯಮ ವಿಸ್ತರಣೆ ರೈಲ್ವೆ ಪ್ಲಾಟ್‌ಫಾರ್ಮ್, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಕಡ್ಡಾಯ ನಿಯಮ ವಿಸ್ತರಣೆ

ಒಟ್ಟು ಪ್ರವಾಸದ ಪ್ಯಾಕೇಜ್‌ನ ಬೆಲೆ ಸ್ಲೀಪರ್ ಕ್ಲಾಸ್‌ಗೆ 8,505 ರೂಪಾಯಿಗಳು. 3ACಗೆ 10,395ರೂ. ವೆಚ್ಚವಾಗಲಿದೆ. ಉತ್ತರ ಭಾರತದ ಸುಂದರ ಐತಿಹಾಸಿಕ ಸ್ಥಳಗಳನ್ನು ತೋರಿಸುವ ಗುರಿಯನ್ನು ಹೊಂದಿದೆ.

IRCTC to Run Bharat Darshan Tourist Train From October 08

ಐಆರ್‌ಸಿಟಿಸಿ ಪ್ರವಾಸೋದ್ಯಮದ ಪ್ರಕಾರ, ಇದು ದೇಶದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಅತ್ಯಂತ ಉತ್ತಮ, ಎಲ್ಲವನ್ನೂ ಒಳಗೊಂಡ ಪ್ರವಾಸ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ. ಭಾರತ ದರ್ಶನ ವಿಶೇಷ ಪ್ರವಾಸಿ ರೈಲಿನ ಬುಕ್ಕಿಂಗ್ ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಐಆರ್‌ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು.

ಲೀಪರ್ ಕ್ಲಾಸ್ ರೈಲು ಪ್ರಯಾಣ.
ಧರ್ಮಶಾಲೆಗಳಲ್ಲಿ/ಮಲ್ಟಿ ಶೇರಿಂಗ್ ಆಧಾರದ ಮೇಲೆ ರಾತ್ರಿಯ ವಾಸ್ತವ್ಯ/ಫ್ರೆಶ್ ಅಪ್.
ಬೆಳಿಗ್ಗೆ ಟೀ/ಕಾಫಿ, ಬೆಳಗಿನ ಉಪಾಹಾರ, ಮಧ್ಯಾಹ್ನದೂಟ, ರಾತ್ರಿ ಊಟ ಮತ್ತು ದಿನಕ್ಕೆ 1 ಲೀಟರ್ ಕುಡಿಯುವ ನೀರು.
ಎಸ್ಐಸಿ ಆಧಾರದ ಮೇಲೆ ನಾನ್ ಎಸಿ ರಸ್ತೆ ಸಂಚಾರ
ಟೂರ್ ಎಸ್ಕಾರ್ಟ್ ಮತ್ತು ರೈಲಿನಲ್ಲಿ ಭದ್ರತೆ.
ಪ್ರವಾಸ ವಿಮೆ
ಸ್ಯಾನಿಟೈಜೇಷನ್ ಕಿಟ್

ವೈಯಕ್ತಿಕ ಅವಶ್ಯಕತೆ ಬಟ್ಟೆ ಒಗೆಯುವುದು, ಔಷಧಗಳು
ಸ್ಮಾರಕಗಳಿಗೆ ಪ್ರವೇಶ ಶುಲ್ಕ, ಬೋಟಿಂಗ್ ಶುಲ್ಕಗಳು
ಪ್ರವಾಸ ಮಾರ್ಗದರ್ಶಿ ಸೇವೆ
ಸತ್ನಾ, ಕತ್ನಿ, ಜಬಲ್‌ಪುರ್, ನರಸಿಂಗಪುರ್, ಇಟರ್ಸಿ, ಹೊಶಂಗಾಬಾದ್, ಹಬೀಬ್‌ಗಂಜ್, ವಿದಿಶಾ, ಗಂಜ್ ಬಸೋಡಾ, ಬಿನಾ, ಝಾನ್ಸಿ ನಿಲ್ದಾಣಗಳಲ್ಲಿ ಬೋರ್ಡಿಂಗ್ ಸೌಲಭಯಗಳಿವೆ. 8 ರಾತ್ರಿ ಹಾಗೂ 9 ದಿನಗಳ ಪ್ರವಾಸ ಇದಾಗಿದೆ.
ಈ ಭಾರತ ದರ್ಶನ ಪ್ರವಾಸದಲ್ಲಿ ಪಾಲ್ಗೊಳ್ಳುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು ಹಾಗೂ ಪ್ರಯಾಣಿಕರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರಬೇಕು.

ರೈಲ್ವೆ ಪ್ಲಾಟ್‌ಫಾರ್ಮ್ ಅಥವಾ ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂಬ ನಿಯಮವನ್ನು 6 ತಿಂಂಗಳವರೆಗೆ ರೈಲ್ವೆ ಇಲಾಖೆ ವಿಸ್ತರಣೆ ಮಾಡಿದೆ.

ಒಂದೊಮ್ಮೆ ನಿಯಮಗಳನ್ನು ಉಲ್ಲಂಘಸಿದರೆ 500 ರೂ. ದಂಡ ತೆರಬೇಕಾಗುತ್ತದೆ ಎಂದು ಹೇಳಿದೆ. ರೈಲ್ವೆ ಪ್ಲಾಟ್​ ಫಾರ್ಮ್​​​ ಹಾಗೂ ರೈಲುಗಳಲ್ಲಿ ಸಂಚಾರ ಮಾಡುವಾಗ ಮಾಸ್ಕ್​ ಹಾಕದಿದ್ದರೆ 500 ರೂ. ದಂಡ ವಿಧಿಸುವ ನಿಯಮ ಈಗಾಗಲೇ ರೈಲ್ವೆ ಇಲಾಖೆಯಿಂದ ನಿಯಮ ಜಾರಿಯಲ್ಲಿದ್ದು, ಮುಂದಿನ ಆರು ತಿಂಗಳ ಕಾಲ ಈ ಮಾನದಂಡ ಮುಂದುವರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದ್ದು, ಕಳೆದ 24 ಗಂಟೆಯಲ್ಲಿ 22,431 ಹೊಸ ಸೋಂಕಿತ ಪ್ರಕರಣ ದಾಖಲಾಗಿದ್ದು, 318 ಜನರು ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿನ (ಕೋವಿಡ್ -19) ವಿರುದ್ಧ ಕೇಂದ್ರ ಕೈಗೊಂಡ ತಡೆಗಟ್ಟುವ ಕ್ರಮಗಳಿಗೆ ಅನುಗುಣವಾಗಿ, ರೈಲುಗಳು ಮತ್ತು ನಿಲ್ದಾಣಗಳ ಆವರಣದಲ್ಲಿ ಫೇಸ್ ಮಾಸ್ಕ್ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿತ್ತು. ಹೀಗಾಗಿ, ಮಾಸ್ಕ್​​ ಧರಿಸದೇ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಓಡಾಡುವ ಜನರಿಗೆ 500 ರೂ. ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಕಳೆದ ಏಪ್ರಿಲ್​ ತಿಂಗಳಲ್ಲಿ ಕೇಂದ್ರ ರೈಲ್ವೆ ಇಲಾಖೆಯಿಂದ ಕೋವಿಡ್​ ನಿಯಮ ಜಾರಿಯಾಗಿದ್ದ ಸಂದರ್ಭದಲ್ಲಿ ರೈಲ್ವೆ ಪ್ಲಾಟ್​ ಫಾರ್ಮ್​, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್​ ಕಡ್ಡಾಯಗೊಳಿಸಿತ್ತು.

ಒಂದು ವೇಳೆ ಈ ನಿಯಮ ಪಾಲನೆ ಮಾಡುವಲ್ಲಿ ವಿಫಲಗೊಂಡರೆ ಅಂತವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಈ ನಿಯಮ ರೈಲ್ವೆ ಇಲಾಖೆಯಿಂದ ಮುಂದುವರಿಕೆಯಾಗಲಿದ್ದು, 2022ರ ಏಪ್ರಿಲ್​​​​​ 17ರವರೆಗೆ ಜಾರಿಯಲ್ಲಿರಲಿದೆ. ಇದರ ಜೊತೆಗೆ ರೈಲ್ವೆ ಸ್ಟೇಷನ್​​ಗಳಲ್ಲಿ ಉಗುಳುವವರಿಗೆ 500 ರೂ ದಂಡ ವಿಧಿಸುವ ನಿಯಮ ಕೂಡ ಮುಂದುವರೆಯಲಿದೆ.

English summary
Travellers in India can rejoice now as the Indian Railway Catering and Tourism Corporation (IRCTC) is starting a special Bharat Darshan Tourist train from today i.e., October 8. Interestingly, this is being done to promote religious tourism in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X