ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಒಂದೇ ದಿನ 54,000 ರೈಲ್ವೆ ಟಿಕೆಟ್ ರಿಸರ್ವ್!

|
Google Oneindia Kannada News

ನವದೆಹಲಿ, ಮೇ.11: ಭಾರತ ಲಾಕ್ ಡೌನ್ ನಡುವೆ ಪ್ಯಾಸೆಂಜರ್ ರೈಲುಗಳಲ್ಲಿ ರಿಸರ್ವೇಶನ್ ಮಾಡುವುದಕ್ಕೆ ಭಾರತೀಯ ರೈಲ್ವೆ ಅನುಮತಿ ನೀಡಿದ್ದೇ ತಡ ಸೋಮವಾರ ಒಂದೇ ದಿನ 54,000 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ.

ಮೇ.11ರ ಸೋಮವಾರ ಪ್ಯಾಸೆಂಜರ್ ರೈಲುಗಳಿಗೆ ಆನ್ ಲೈನ್ ರಿಸರ್ವೇಶನ್ ಸೇವೆ ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಭಾನುವಾರವಷ್ಟೇ ಅಧಿಕೃತವಾಗಿ ಘೋಷಿಸಿತ್ತು. ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಐಆರ್ ಸಿಟಿಸಿಯಲ್ಲಿ ಸಂಜೆ 4 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಶುರುವಾಯಿತು.

ಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿ

ಸಂಜೆ 4 ಗಂಟೆಗೆ ಆರಂಭವಾದ ಬುಕ್ಕಿಂಗ್ ರಾತ್ರಿ 9.15ರ ವೇಳೆಗೆ ದೇಶಾದ್ಯಂತ 54,000 ಮಂದಿ ಪ್ರಯಾಣಿಕರು ಆನ್ ಲೈನ್ ನಲ್ಲಿ ಟಿಕೆಟ್ ರಿಸರ್ವ್ ಮಾಡಿದ್ದಾರೆ. ಇದರ ಜೊತೆಗೆ 30,000 ಪ್ರಯಾಣಿಕರು ಪಿಎನ್ಆರ್ ಜನರೇಟ್ ಮಾಡಿಕೊಂಡಿದ್ದಾರೆ.

IRCTC Reservations Were Issued To More Than 54,000 Passengers

10 ನಿಮಿಷದಲ್ಲೇ ಎರಡು ಬೋಗಿಗಳ ಟಿಕೆಟ್ ಬುಕ್:

ಹೌರಾ ಮತ್ತು ನವದೆಹಲಿ ನಡುವಿನ ರೈಲ್ವೆ ಬುಕ್ಕಿಂಗ್ ಸೇವೆ ಆರಂಭವಾಗಿ ಹತ್ತೇ ನಿಮಿಷದಲ್ಲಿ ಎಸಿ-1 ಹಾಗೂ ಎಸಿ-3 ಕೋಚ್ ನ ಎಲ್ಲ ಟಿಕೆಟ್ ಗಳನ್ನ್ನು ಪ್ರಯಾಣಿಕರು ರಿಸರ್ವ್ ಮಾಡಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆಯು ತಿಳಿಸಿದೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಮೇ.12ರ ಮಂಗಳವಾರದಿಂದ ನವದೆಹಲಿಯಿಂದ ದೇಶದ 15 ಪ್ರಮುಖ ನಗರಗಳಿಗೆ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಸಲ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಕೇಂದ್ರ ಮುಂಬೈ, ಅಹ್ಮದಾಬಾದ್ ಹಾಗೂ ಜಮ್ಮುವಿನಲ್ಲಿ ರೈಲ್ವೆ ಸೇವೆ ಆರಂಭವಾಗಲಿದೆ.

English summary
IRCTC Reservations Were Issued To More Than 54,000 Passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X