ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ರೈಲ್ವೆ ಟಿಕೆಟ್ ಬುಕ್ಕಿಂಗ್, ಈ ಸೂಚನೆ ತಪ್ಪದೇ ಓದಿ

|
Google Oneindia Kannada News

ನವದೆಹಲಿ, ಮೇ 29: ಲಾಕ್ಡೌನ್ ನಡುವೆ ಹಂತ ಹಂತವಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ ಒಂದಷ್ಟು ರೈಲುಗಳು ಸಂಚಾರ ಆರಂಭಿಸಿವೆ. ಜೂನ್ 1 ರಿಂದ 100 ಜೋಡಿಯ ಪ್ಯಾಸೆಂಜರ್ ರೈಲುಗಳು ಸಂಚರಿಸಲಿವೆ. ಈ ನಡುವೆ IRCTC ಮೂಲಕ ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ.

Recommended Video

ಜನಗಳಿಗೆ ಮೋಸ ಮಾಡುತ್ತಿರೊ ನಾಯಕರಿಗೆ ಶಿಕ್ಷೆ ಆಗಬೇಕು | Oneindia Kannada

advance reservation period ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು ಹಾಲಿ 30 ದಿನಗಳಿಂದ
120 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹೊಸ ನಿಯಮವು ಮೇ 12ರಿಂದ ಕಾರ್ಯ ನಿರ್ವಹಿಸುತ್ತಿರುವ ರೈಲುಗಳು ಹಾಗೂ ಜೂನ್ 1ರಿಂದ ಸಂಚರಿಸಲಿರುವ 200 ಕ್ಕೂ ಅಧಿಕ ರೈಲುಗಳಿಗೆ ಅನ್ವಯಿಸಲಿದೆ.

ರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿ

ಇದಲ್ಲದೆ, ಈ ಎಲ್ಲಾ 230ಕ್ಕೂ ಅಧಿಕ ರೈಲುಗಳಲ್ಲಿ ಪಾರ್ಸಲ್ ಹಾಗೂ ಲಗೇಜ್ ಬುಕಿಂಗ್ ಮಾಡಲು ಕೂಡಾ ಅವಕಾಶ ಇರಲಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮಿಕ್ಕಂತೆ ತತ್ಕಾಲ್ ಬುಕ್ಕಿಂಗ್, ಕರೆಂಟ್ ಬುಕ್ಕಿಂಗ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಎಲ್ಲಾ ನಿಯಮಗಳು ಮೇ 31ರ ಬೆಳಗ್ಗೆ 8 ಗಂಟೆಯಿಂದ ಜಾರಿಗೆ ಬರಲಿದೆ.

IRCTC ವೆಬ್ ಸೈಟ್ ನಲ್ಲಿ ಮಾತ್ರ

IRCTC ವೆಬ್ ಸೈಟ್ ನಲ್ಲಿ ಮಾತ್ರ

* ಮೇ 31ರ ಬೆಳಗ್ಗೆ 8 ಗಂಟೆಯಿಂದ ಈ ಸೌಲಭ್ಯ ಜಾರಿಗೆ ಬರಲಿದೆ.
* IRCTC ವೆಬ್ ಸೈಟ್ ನಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ.
* ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ಕೌಂಟರ್ ಬಂದ್ ಆಗಿರಲಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಕೂಡಾ ನೀಡಲಾಗುವುದಿಲ್ಲ.

* ಏಜೆಂಟ್( IRCTC ಹಾಗೂ ರೈಲ್ವೆ) ಬಳಸಿ ಟಿಕೆಟ್ ಬುಕ್ಕಿಂಗ್ ಸಾಧ್ಯವಿಲ್ಲ

* ಟಿಕೆಟ್ ಗಳಲ್ಲಿರುವ ಏನು ಮಾಡಬೇಕು ಏನು ಮಾಡಬಾರದು(Do and Don'ts) ನಿಬಂಧನೆಗಳನ್ನು ಪಾಲಿಸಬೇಕು, ಉದಾಹರಣೆಗೆ ರೈಲು ಹೊರಡುವುದಕ್ಕೂ ಒಂದು ಗಂಟೆ ಮುಂಚಿತವಾಗಿ ನಿಲ್ದಾಣದಲ್ಲಿರಬೇಕು.

ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯ

ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯ

ಸ್ಮಾರ್ಟ್ ಫೋನ್ ಹೊಂದಿರುವ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಹೊಂದಿರಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ರೋಗ ಲಕ್ಷಣ (asymptomatic) ಕಾಣಿಸದ ಪ್ರಯಾಣಿಕರಿಗೆ ಮಾತ್ರ ರೈಲು ಪ್ರವೇಶಿಸಲು ಅವಕಾಶವಿರುತ್ತದೆ. ಸ್ಕ್ರೀನಿಂಗ್ ವೇಳೆ ಅನುಮಾನ ಬಂದರೆ ತಕ್ಷಣವೆ ಹೆಚ್ಚಿನ ತಪಾಸಣೆಗೆ ಕಳಿಸಲಾಗುತ್ತದೆ. ಆಯಾ ರಾಜ್ಯಗಳ ಲಾಕ್ಡೌನ್ ನಿಯಮಗಳಿಗೂ ಪ್ರಯಾಣಿಕರು ಬದ್ಧರಾಗಿರಬೇಕು.

ಪ್ರೀಮಿಯಂ ಟಿಕೆಟ್ ನಿಯಮ ಹೇಗೆ?

ಪ್ರೀಮಿಯಂ ಟಿಕೆಟ್ ನಿಯಮ ಹೇಗೆ?

ಯಾವುದೇ ಮಾರ್ಗದ ರೈಲುಗಳಿಗೆ ತತ್ಕಾಲ್ ಹಾಗು ಪ್ರೀಮಿಯಂ ಟಿಕೆಟ್ ನಿಯಮದಲ್ಲಿ ಬದಲಾವಣೆ ಇಲ್ಲ. ಕೆಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ಹೊದಿಕೆಯನ್ನು ನೀಡಲಾಗುವುದಿಲ್ಲ. ಎಸಿ ಕೋಚ್ ಗಳಾದರೂ ಉಳಿದ ದಿನಗಳಿಗೆ ಹೋಲಿಸಿದರೆ ಈಗ ತಾಪಮಾನ ಹೆಚ್ಚಾಗಿ ಇಡಲಾಗುತ್ತದೆ. ಎಸಿ ತಾಪಮಾನ ಕುರಿತಂತೆ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಲಾಗುತ್ತದೆ.

ಟಿಕೆಟ್ ಬುಕ್ಕಿಂಗ್ ವಿಧಾನ

ಟಿಕೆಟ್ ಬುಕ್ಕಿಂಗ್ ವಿಧಾನ

* ಐಆರ್‌ಸಿಟಿಸಿ ವೆಬ್‌ಸೈಟ್ ಗೆ ಭೇಟಿ ನಿಮ್ಮ ಖಾತೆ ಇದ್ದರೆ ಲಾಗಿನ್ ಆಗಿ
* ಹೊಸ ಖಾತೆ ರಚಿಸಬೇಕಾದರೆ ಸೈನ್ ಅಪ್ ಕ್ಲಿಕ್ ಮಾಡಿ ಹೊಸ ಖಾತೆ ರಚಿಸಿ.
* ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ.
* ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ.
* ನಿಮ್ಮ ಪ್ರಯಾಣದ ವಿವರ ದಾಖಲಿಸಿ ಎಲ್ಲಿಂದ ಎಲ್ಲಿಗೆ ಎಂದು ಹಾಕಿ, ಟ್ರೈನ್ ಪತ್ತೆ ಹಚ್ಚಿ, ಟಿಕೆಟ್ ಬುಕ್ ಮಾಡಿ
* ನಿಮ್ಮ ಇಮೇಲ್, ಮೊಬೈಲ್ ಫೋನ್ ಲಿಂಕ್ ಆಗಿದ್ದರೆ ಒಟಿಪಿ ಮೂಲಕ ನಿಮ್ಮ ಟಿಕೆಟ್ ಸುರಕ್ಷಿತವಾಗಲಿದೆ.
* ಗಮನಿಸಿ, ತತ್ಕಾಲ್, ಏಜೆಂಟ್ ಟಿಕೆಟ್ ಬುಕ್ಕಿಂಗ್ ಈ ರೈಲು ಮಾರ್ಗಕ್ಕೆ ಅನ್ವಯವಾಗುವುದಿಲ್ಲ.

English summary
IRCTC Ticket booking: Ministry of Railways has decided to increase the advance reservation period (ARP) of all Specials notified from 30 days to 120 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X