• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಐಆರ್‌ಸಿಟಿಸಿ

|

ಬೆಂಗಳೂರು, ಡಿಸೆಂಬರ್ 24 : ರೈಲ್ವೆ ನಿಲ್ದಾಣಗಳಲ್ಲಿನ ಕ್ಯಾಂಟೀನ್‌ನಲ್ಲಿನ ಆಹಾರದ ದರವನ್ನು ಹೆಚ್ಚಳ ಮಾಡಲಾಗಿದೆ. ಐಆರ್‌ಸಿಟಿಸಿ ಸಲ್ಲಿಸಿದ ಮನವಿಯ ಅನ್ವಯ ರೈಲ್ವೆ ಸಚಿವಾಲಯ ದರ ಹೆಚ್ಚಳ ಮಾಡಲು ಅನುಮತಿ ನೀಡಿದೆ.

ರೈಲ್ವೆ ನಿಲ್ದಾಣದಲ್ಲಿರುವ ದಣಿವು ನಿವಾರಿಸಿಕೊಳ್ಳುವ ಕೊಠಡಿ ಮತ್ತು ಜನ್ ಆಹಾರ್ಸ್ ಸೇರಿದಂತೆ ವಿವಿಧ ಸ್ಥಿರ ಘಟಕಗಳಲ್ಲಿನ ಊಟ, ಉಪಹಾರದ ದರವನ್ನು ಹೆಚ್ಚಳ ಮಾಡಲಾಗಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಎಂಡ್ ಟೂರಿಸಂ ಕಾರ್ಪೊರೇಷನ್ ಈ ಕುರಿತು ಆದೇಶ ಹೊರಡಿಸಿದೆ.

ಕೋಲಾರ - ವೈಟ್ ಫೀಲ್ಡ್ ಡೆಮು ವಿಶೇಷ ರೈಲು ಆರಂಭ

ರಾಜಧಾನಿ, ಶತಾಬ್ದಿ ಮತ್ತು ಡುರೇಂಟೋ ರೈಲುಗಳಲ್ಲಿನ ಆಹಾರಗಳ ದರಗಳು ಹೆಚ್ಚಾಗಿವೆ. ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲು ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಐಆರ್‌ಸಿಟಿಸಿ ಹೇಳಿದೆ.

ಯಶವಂತಪುರ ರೈಲು ನಿಲ್ದಾಣ, ನಮ್ಮ ಮೆಟ್ರೋ ಸಂಪರ್ಕಿಸಲು ಫ್ಲೈ ಓವರ್

ಎಕ್ಸ್‌ಪ್ರೆಸ್/ಮೇಲ್ ಟ್ರೈನ್‌ಗಳಲ್ಲಿ ಜಿಎಸ್‌ಟಿ ಸೇರಿ ದರ ಎಷ್ಟಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಆದಮ್ಯ ಚೇತನ ಟೆಂಡರ್

* ವೆಜ್ ಬ್ರೇಕ್ ಫಾಸ್ಟ್‌ 35 ರೂ.

* ನಾನ್ ವೆಜ್ ಬ್ರೇಕ್‌ ಫಾಸ್ಟ್ 45 ರೂ.

* ಗುಣಮಟ್ಟದ ಸಸ್ಯಹಾರಿ ಊಟ 70 ರೂ.

* ಗುಣಮಟ್ಟದ ಊಟ (ಎಗ್ ಕರಿ) 80 ರೂ.

* ಗುಣಮಟ್ಟದ ಊಟ (ಚಿಕನ್ ಕರಿ) 120 ರೂ.

* ವೆಜ್ ಬಿರಿಯಾನಿ (350 ಗ್ರಾಂ) 70 ರೂ.

* ಎಗ್ ಬಿರಿಯಾನಿ (350 ಗ್ರಾಂ) 80 ರೂ.

* ಚಿಕನ್ ಬಿರಿಯಾನಿ (350 ಗ್ರಾಂ) 100 ರೂ.

* ಸ್ನ್ಯಾಕ್ ಮೀಲ್ ( 350 ಗ್ರಾಂ) 150 ರೂ.

ರಾಜಧಾನಿ, ಶತಾಬ್ದಿ ಮತ್ತು ಡುರೋಂಟೋ ರೈಲುಗಳಲ್ಲಿ ಬ್ರೇಕ್‌ಫಾಸ್ಟ್ ದರ 140 ರೂ. ಮತ್ತು ಈ ಮೂರು ರೈಲುಗಳ ಎಸಿ ಫಸ್ಟ್, ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್‌ಗಳಲ್ಲಿ 105 ರೂ. ಆಗುತ್ತದೆ. ರಾತ್ರಿ ಊಟಕ್ಕೆ ಎಸಿ ಫಸ್ಟ್‌ಕ್ಲಾಸ್‌ನಲ್ಲಿ 245 ರೂ. ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್‌ನಲ್ಲಿ 185 ರೂ. ಆಗುತ್ತದೆ.

ಡುರೋಂಟೋ ಟ್ರೈನ್ ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಗೆ ಬ್ರೇಕ್ ಫಾಸ್ಟ್ 65 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟ 120 ರೂ. ಆಗಲಿದೆ. ಸಂಜೆಯ ಟೀ 50 ರೂ. ಆಗಿದೆ.

English summary
Indian Railways approved for the request of IRCTC and revised tariff of standard meals, items for static units on Indian Railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X