ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!

|
Google Oneindia Kannada News

ನವದೆಹಲಿ, ಮೇ 30: ಭಾರತೀಯ ರೈಲ್ವೆಯ ಅನೇಕ ಕುಂದುಕೊರತೆಗಳನ್ನು ಸರಿಪಡಿಸಲು ಟ್ವಿಟ್ಟರ್ ಸುಲಭ ಮತ್ತು ಸರಳ ಸಂಹವನ ಮಾರ್ಗವಾಗಿ ದೊರಕಿದೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ನೆರವಾಗುವ, ಟಿಕೆಟ್ ಬುಕಿಂಗ್ ವೇಳೆ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಇಂಡಿಯನ್ ರೈಲ್ವೇ ಸೇವಾ ಟ್ವಿಟ್ಟರ್ ಖಾತೆ ಸ್ಪಂದಿಸುತ್ತಿದೆ.

ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಭಾರತೀಯ ರೈಲ್ವೆ ಯಡವಟ್ಟು ಮಾಡಿಕೊಳ್ಳುವ ತಮ್ಮ ಬಳಕೆದಾರರ ಕಾಲೆಳೆಯುವುದರಲ್ಲಿಯೂ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ.

ಐಆರ್‌ಸಿಟಿಸಿ ಅಪ್‌ಗ್ರೇಡ್: ರೈಲು ಸೈರನ್ ಕೇಳೋವರೆಗೂ ಟಿಕೆಟ್ ಸಿಗುತ್ತೆ! ಐಆರ್‌ಸಿಟಿಸಿ ಅಪ್‌ಗ್ರೇಡ್: ರೈಲು ಸೈರನ್ ಕೇಳೋವರೆಗೂ ಟಿಕೆಟ್ ಸಿಗುತ್ತೆ!

ಐಆರ್‌ಸಿಟಿಸಿ (ಭಾರತೀಯ ರೈಲ್ವೆ) ಆಪ್ ಬಳಕೆದಾರ ಆನಂದ್ ಕುಮಾರ್ ಎಂಬುವವರು ರೈಲ್ವೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದರು. ತಮ್ಮ ದೂರಿನಲ್ಲಿ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಟ್ವೀಟ್ ಮಾಡಿದ್ದರು.

IRCTC epic reply to user complained of obscene ads

ಐಆರ್‌ಸಿಟಿಸಿ ಆಪ್ ತೆರೆದರೆ ಅಶ್ಲೀಲ ಜಾಹೀರಾತುಗಳೇ ಕಾಣಿಸುತ್ತಿವೆ ಎಂದು ಅವರು ಆರೋಪಿಸಿದ್ದರು. ಮೊಬೈಲ್‌ನಲ್ಲಿ ಕಾಣಿಸಿಕೊಂಡ ಜಾಹೀರಾತುಗಳ ಸ್ಕ್ರೀನ್ ಶಾಟ್ ಕೂಡ ತೆಗೆದು ಕಳುಹಿಸಿದ್ದರು.

'ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಆಪ್‌ನಲ್ಲಿ ಪದೇ ಪದೇ ಅಶ್ಲೀಲ ಮತ್ತು ಅಸಹ್ಯಕರ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಇದು ತುಂಬಾ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುತ್ತಿದೆ. ರೈಲ್ವೆ ಸಚಿವಾಲಯ, ಐಆರ್‌ಸಿಟಿಸಿ ಅಧಿಕಾರಿಗಳು ಮತ್ತು ಪಿಯೂಷ್ ಗೋಯಲ್ ದಯವಿಟ್ಟು ಇದರತ್ತ ಗಮನ ಹರಿಸಿ' ಎಂದು ಆನಂದ್ ಕುಮಾರ್ ಟ್ವೀಟ್ ಮಾಡಿದ್ದರು.

ಒಂದೂ ಟ್ರಿಪ್ ತಪ್ಪಿಸದೆ 1 ಲಕ್ಷ ಕಿಮೀ ಪ್ರಯಾಣ ಪೂರೈಸಿದ ವಂದೇ ಭಾರತ್ ಒಂದೂ ಟ್ರಿಪ್ ತಪ್ಪಿಸದೆ 1 ಲಕ್ಷ ಕಿಮೀ ಪ್ರಯಾಣ ಪೂರೈಸಿದ ವಂದೇ ಭಾರತ್

ಇದಕ್ಕೆ ಐಆರ್‌ಸಿಟಿಸಿಯ ಗ್ರಾಹಕ ಕೇಂದ್ರದ ಖಾತೆಯಲ್ಲಿ ತಮಾಷೆಯಾಗಿ ಕಾಳೆಯುವ ಪ್ರತಿಕ್ರಿಯೆ ನೀಡಲಾಗಿದೆ. ಮೊದಲು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಿಕೊಳ್ಳಿ ಎಂದು ಅದು ಸಲಹೆ ನೀಡಿದೆ.

'ಜಾಹೀರಾತುಗಳನ್ನು ಪೂರೈಸಲು ಐಆರ್‌ಸಿಟಿಸಿ ಗೂಗಲ್‌ನ ಜಾಹೀರಾತು ಸೇವಾ ಸಾಧನ ಎಡಿಎಕ್ಸ್‌ಅನ್ನು ಬಳಸುತ್ತಿದೆ. ಈ ಜಾಹೀರಾತುಗಳು ಬಳಕೆದಾರರನ್ನು ಗುರಿಯಾಗಿಸಲು ಕುಕಿಗಳನ್ನು ಬಳಸುತ್ತದೆ. ಬಳಕೆದಾರನ ಬ್ರೌಸಿಂಗ್ ಇತಿಹಾಸ ಮತ್ತು ಬ್ರೌಸಿಂಗ್ ನಡತೆಗಳಿಗೆ ಅನುಗುಣವಾಗಿ ಜಾಹೀರಾತುಗಳು ಬರುತ್ತವೆ. ಇಂತಹ ಜಾಹೀರಾತುಗಳನ್ನು ತಡೆಯಲು ಎಲ್ಲ ಬ್ರೌಸರ್ ಕುಕಿಗಳನ್ನು ಹಾಗೂ ಹಿಸ್ಟರಿಯನ್ನು ಸ್ವಚ್ಛಗೊಳಿಸಿ ಮತ್ತು ಅಳಿಸಿ ಹಾಕಿ' ಎಂದು ಐಆರ್‌ಸಿಟಿಸಿ ಅಧಿಕೃತ ಖಾತೆ ಪ್ರತಿಕ್ರಿಯೆ ನೀಡಿದೆ.

ಐಆರ್‌ಸಿಟಿಸಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ತಮಾಷೆಯ ಮೀಮ್ಸ್‌ಗಳ ಮಹಾಪೂರವೇ ಹರಿದುಬರುತ್ತಿದೆ.

English summary
'Clean your browising history'- IRCTC reply to a user who complained obscene and vuglar ads in IRCTC app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X