• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

IPL 2020: ಸನ್‌ ರೈಸರ್ಸ್ ನಾಯಕ ವಾರ್ನರ್‌ಗೆ ಮತ್ತೊಂದು ಕಿರೀಟ

|

ನವದೆಹಲಿ, ಸೆಪ್ಟೆಂಬರ್ 21: ಐಪಿಎಲ್ 2020ರ ಮೂರನೇ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಪರ್ಧಿಸುತ್ತಿದೆ. ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ತಂಡಗಳ ನಡುವೆ ಗೆಲ್ಲುವವರಾರು ಎನ್ನುವುದು ಕುತೂಹಲ ಮೂಡಿಸಿದೆ. ಎರಡೂ ಪಡೆಗಳ ನಡುವೆ ರೋಚಕ ಹಣಾಹಣಿ ನಡೆಯುವುದು ಬಹುತೇಕ ಖಾತರಿಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಮೊದಲ ಪಂದ್ಯ ಬಹುತೇಕ ಏಕಪಕ್ಷೀಯವಾಗಿ ಮುಗಿದುಹೋಯಿತು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಎರಡನೆಯ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಹುಚ್ಚನ್ನು ದುಪ್ಪಟ್ಟುಗೊಳಿಸುವಂತೆ ಮಾಡಿದೆ.

IPL 2020: ಆರ್‌ಸಿಬಿ ಆಂಥೆಮ್‌ಗಿಂತಲೂ ಪಂಜಾಬ್‌ ತಂಡದಲ್ಲೇ ಕನ್ನಡ ಹೆಚ್ಚು!

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯ ಸಾಕಷ್ಟು ಪ್ರಬಲ ಟಿ20 ಪರಿಣತರನ್ನು ಒಳಗೊಂಡ ತಂಡಗಳ ಪೈಪೋಟಿಯಾಗಿರಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಚಾಂಪಿಯನ್ ಆಗಿತ್ತು. 2017 ಮತ್ತು 2019ರಲ್ಲಿ ಪ್ಲೇಆಫ್ ಹಂತಗಳಲ್ಲಿ ನಿರ್ಗಮಿಸಿದ್ದರೆ 2018ರಲ್ಲಿ ರನ್ನರ್ ಅಪ್ ಆಗಿತ್ತು. ಡೇವಿಡ್ ವಾರ್ನರ್ ನೇತೃತ್ವದ ತಂಡ ಬ್ಯಾಟಿಂಗ್‌ಗಿಂತಲೂ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಶಕ್ತಿಶಾಲಿಯಾಗಿ ಗುರುತಿಸಿಕೊಂಡಿದೆ. ಮುಂದೆ ಓದಿ.

CSK ತಂಡದಲ್ಲಿ ಹಿರಿಯ ಆಟಗಾರರದ್ದೇ ಗ್ಯಾಂಗ್

ಮುಖಾಮುಖಿ ಫಲಿತಾಂಶಗಳು

ಮುಖಾಮುಖಿ ಫಲಿತಾಂಶಗಳು

14 ಮುಖಾಮುಖಿ ಪಂದ್ಯಗಳಲ್ಲಿ ಸನ್ ರೈಸರ್ಸ್ ತಂಡ ಎಂಟರಲ್ಲಿ ಗೆದ್ದಿದ್ದರೆ, ಆರ್‌ಸಿಬಿ ಆರು ಪಂದ್ಯಗಳಲ್ಲಿ ಜಯಗಳಿಸಿದೆ. ಐಪಿಎಲ್ 12ನೇ ಆವೃತ್ತಿಯಲ್ಲಿ ಎರಡು ಬಾರಿ ಈ ತಂಡಗಳು ಮುಖಾಮುಖಿಯಾಗಿದ್ದವು. ತಲಾ ಒಂದೊಂದು ಪಂದ್ಯಗಳನ್ನು ಗೆಲ್ಲುವ ಮೂಲಕ ಗೌರವ ಹಂಚಿಕೊಂಡಿದ್ದವು. 2016ರಲ್ಲಿ ವಾರ್ನರ್ ನೇತೃತ್ವದ ಎಸ್‌ಆರ್ಎಚ್ ಟ್ರೋಫಿ ಗೆದ್ದಾಗ ಫೈನಲ್‌ನಲ್ಲಿ ಸೋಲಿಸಿದ್ದು ಆರ್‌ಸಿಬಿ ತಂಡವನ್ನು.

48ನೇ ಪಂದ್ಯದಲ್ಲಿ ನಾಯಕ

48ನೇ ಪಂದ್ಯದಲ್ಲಿ ನಾಯಕ

ವಿರಾಟ್ ಕೊಹ್ಲಿ ಆರ್‌ಸಿಬಿಯ ನಾಯಕರಾಗಿ ಮುಂದುವರಿದಿದ್ದರೆ, ಡೇವಿಡ್ ವಾರ್ನರ್ ಎಸ್‌ಆರ್‌ಎಚ್‌ನ ನಾಯಕತ್ವದ ಹೊಣೆಗಾರಿಕೆಯನ್ನು ಮರಳಿ ಪಡೆದಿದ್ದಾರೆ. ಈ ಮೂಲಕ ಅವರು ಹೊಸ ಮೈಲುಗಲ್ಲು ಸ್ಥಾಪಿಸುತ್ತಿದ್ದಾರೆ. ನಾಯಕರಾಗಿ ಅವರು ಐಪಿಎಲ್‌ನಲ್ಲಿ 48ನೇ ಪಂದ್ಯವನ್ನು ಮುನ್ನೆಡೆಸಲಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರ 47 ಪಂದ್ಯಗಳ ಗಡಿಯನ್ನು ದಾಟಲಿದ್ದಾರೆ.

ಮೂರನೇ ಸ್ಥಾನಕ್ಕೆ 'ನಾಯಕ' ವಾರ್ನರ್

ಮೂರನೇ ಸ್ಥಾನಕ್ಕೆ 'ನಾಯಕ' ವಾರ್ನರ್

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ನಾಯಕರಾದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸೋಮವಾರದ ಆರ್‌ಸಿಬಿ ವಿರುದ್ಧದ ಪಂದ್ಯದೊಂದಿಗೆ ಡೇವಿಡ್ ವಾರ್ನರ್ ಮೂರನೇ ಸ್ಥಾನಕ್ಕೆ ಏರಲಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಡಮ್ ಗಿಲ್‌ಕ್ರಿಸ್ಟ್ 71 ಪಂದ್ಯಗಳಲ್ಲಿ ನಾಯಕರಾಗಿದ್ದರೆ, ಮತ್ತೊಬ್ಬ ದಿಗ್ಗಜ ಶೇನ್ ವಾರ್ನ್ 55 ಪಂದ್ಯಗಳಲ್ಲಿ ತಂಡವನ್ನು ಮುನ್ನೆಡೆಸಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳಲ್ಲಿ ನಾಯಕರಾದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ.

ವಿಲಿಯಮ್ಸನ್, ಬೈರ್‌ಸ್ಟೋವ್ ಶಕ್ತಿ

ವಿಲಿಯಮ್ಸನ್, ಬೈರ್‌ಸ್ಟೋವ್ ಶಕ್ತಿ

'ನಮ್ಮಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಯುವ ಪ್ರತಿಭೆಗಳಿವೆ. ಕೇನ್ ವಿಲಿಯಮ್ಸನ್ ಮತ್ತು ಜಾನಿ ಬೈರ್‌ಸ್ಟೋವ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಜತೆಗೆ ಮೂವರು ಅತ್ಯುತ್ತಮ ಸ್ಪಿನ್ನಿಂಗ್ ಆಲ್‌ರೌಂಡರ್‌ಗಳಿದ್ದಾರೆ' ಎಂದು ವಾರ್ನರ್ ತಮ್ಮ ತಂಡದ ಶಕ್ತಿಯನ್ನು ತಿಳಿಸಿದ್ದಾರೆ.

English summary
IPL 2020: SunRisers Hyderabad team captian David Warner will become the 3rd overseas player to lead most matches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X