ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL 2020: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದೌರ್ಬಲ್ಯ ಏನು ಗೊತ್ತೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಐಪಿಎಲ್ ಅಂಗಳದಲ್ಲಿ ಅತ್ಯಂತ ರೋಚಕ ಹಣಾಹಣಿ ನೀಡುವ ಬದ್ಧ ವೈರಿಗಳ ತಂಡ ಎಂದೇ ಪರಿಗಣಿಸಲಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 2020ರ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡುತ್ತಿವೆ. ಈ ಪಂದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೇ ಗುರುತಿಸಲಾಗುತ್ತಿರುವ ರೋಹಿತ್ ಶರ್ಮಾ ಅವರ ನಡುವಿನ ಪೈಪೋಟಿ ಎಂದೇ ಹೇಳಲಾಗುತ್ತಿದೆ.

ಆರಂಭದಲ್ಲಿಯೇ ರೋಹಿತ್ ಶರ್ಮಾ ಅವರನ್ನು ನಿಯಂತ್ರಿಸಿದರೆ ಮುಂಬೈ ಇಂಡಿಯನ್ಸ್ ತಂಡದ ಮೇಲೆ ದೊಡ್ಡ ಮಟ್ಟದ ಒತ್ತಡ ಹೇರಬಹುದು ಎನ್ನುವುದು ಚೆನ್ನೈ ಸೂಪರ್ ಕಿಂಗ್ಸ್ ಲೆಕ್ಕಾಚಾರ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂತಾದ ಘಟಾನುಘಟಿ ದಾಂಡಿಗರಿದ್ದಾರೆ. ಆದರೆ ಹೆಚ್ಚಿನ ಕಾರ್ಯತಂತ್ರಗಳು ರೋಹಿತ್ ಶರ್ಮಾ ಅವರ ವಿಕೆಟ್ ತೆಗೆಯುವುದರ ಮೇಲೆ ರೂಪುಗೊಳ್ಳುತ್ತಿವೆ. ಮುಂದೆ ಓದಿ.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ? ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ರೋಹಿತ್ ಶರ್ಮಾ ದೌರ್ಬಲ್ಯ

ರೋಹಿತ್ ಶರ್ಮಾ ದೌರ್ಬಲ್ಯ

ರೋಹಿತ್ ಶರ್ಮಾ ವೇಗದ ಹಾಗೂ ಸ್ಪಿನ್ ಎರಡೂ ರೀತಿಯ ಬೌಲಿಂಗ್‌ಅನ್ನು ಲೀಲಾಜಾಲವಾಗಿ ಎದುರಿಸಬಲ್ಲರು. ಅದರಲ್ಲಿಯೂ ಅವರು ಸ್ಕ್ರೀಜ್‌ನಲ್ಲಿ ತಳವೂರಿದರೆ ಅವರ ವಿಕೆಟ್ ಕೀಳಲು ಹರಸಾಹಪಡಬೇಕು. ಆದರೆ ಅವರಲ್ಲಿಯೂ ದೌರ್ಬಲ್ಯಗಳಿವೆ ಎನ್ನುವುದು ಇದುವರೆಗಿನ ಐಪಿಎಲ್ ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಈ ದೌರ್ಬಲ್ಯದ ಮೇಲೆಯೇ ಎಂ.ಎಸ್. ಧೋನಿ ಗಮನ ಹರಿಸಿ ರೋಹಿತ್ ಅವರನ್ನು ಆರಂಭದಲ್ಲಿಯೇ ಪೆವಿಲಿಯನ್‌ಗೆ ಅಟ್ಟುವ ಪ್ರಯತ್ನ ಮಾಡಿದರೆ ಅಚ್ಚರಿಪಡಬೇಕಿಲ್ಲ.

ಆರಂಭಿಕರಾಗಿ ಆಡಲಿರುವ ಶರ್ಮಾ

ಆರಂಭಿಕರಾಗಿ ಆಡಲಿರುವ ಶರ್ಮಾ

ಆರಂಭಿಕರಾಗಿ ಕಣಕ್ಕಿಳಿಯುವುದಾಗಿ ತಿಳಿಸಿರುವ ರೋಹಿತ್ ಶರ್ಮಾ, ಪವರ್ ಪ್ಲೇನಲ್ಲಿ ಭರ್ಜರಿ ಆರಂಭ ಪಡೆಯುವುದರತ್ತ ಗಮನ ಹರಿಸಲು ಮುಂದಾಗಿದ್ದಾರೆ. ಇದನ್ನು ತಡೆಯಲು ಎದುರಾಳಿಗಳಿಗೆ ಇರುವುದು ಸ್ಪಿನ್ ಅಸ್ತ್ರ. ನಿಜ. ಸ್ಪಿನ್ ಬೌಲರ್‌ಗಳನ್ನು ರೋಹಿತ್ ಸುಲಭವಾಗಿ ಎದುರಿಸಬಲ್ಲರಾದರೂ, ಕಳೆದ ಮೂರು ವರ್ಷದ ಐಪಿಎಲ್ ಆವೃತ್ತಿಗಳ ಪಂದ್ಯಗಳನ್ನು ಅವಲೋಕಿಸಿದರೆ ಇನಿಂಗ್ಸ್‌ನ ಆರಂಭದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದೇ ರೋಹಿತ್ ಶರ್ಮಾ ದೌರ್ಬಲ್ಯ ಎನ್ನುವುದು ತಿಳಿಯುತ್ತದೆ. ಚೆಂಡಿನ ವೇಗವನ್ನು ಬಳಸಿ ಶಾಟ್‌ಗಳನ್ನು ಹೊಡೆಯುವುದನ್ನು ರೋಹಿತ್ ಇಷ್ಟಪಡುತ್ತಾರೆ. ವೈವಿಧ್ಯಮಯ ರೀತಿಗಳಲ್ಲಿ ಬೌಲಿಂಗ್ ಮಾಡಬಲ್ಲ ಸ್ಪಿನ್ನರ್ ಅವರ ಲಯವನ್ನು ತಪ್ಪಿಸಬಲ್ಲರು.

IPL 2020: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಯಾವ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಬೇಕು?IPL 2020: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಯಾವ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಬೇಕು?

ಸ್ಪಿನ್ನರ್‌ಗಳ ಎದುರು ಕೇವಲ 82 ಸ್ಟ್ರೈಕ್ ರೇಟ್

ಸ್ಪಿನ್ನರ್‌ಗಳ ಎದುರು ಕೇವಲ 82 ಸ್ಟ್ರೈಕ್ ರೇಟ್

ಕಳೆದ ಮೂರು ಆವೃತ್ತಿಗಳಲ್ಲಿ ರೋಹಿತ್ ಶರ್ಮಾ 15 ಬಾರಿ ಪವರ್ ಪ್ಲೇನಲ್ಲಿ ಔಟಾಗಿದ್ದಾರೆ. ಇದರಲ್ಲಿ ಆರು ಬಾರಿ ಸ್ಪಿನ್ನರ್‌ಗಳ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಈ ಬಾರಿ ಇನ್ನಿಂಗ್ಸ್ ಆರಂಭಿಸಲಿರುವ ರೋಹಿತ್, ಪವರ್‌ ಪ್ಲೇನಲ್ಲಿ ವೇಗದ ಬೌಲರ್‌ಗಳ ವಿರುದ್ಧ 126 ಸ್ಟ್ರೈಕ್ ರೇಟ್ ಹೊಂದಿದ್ದರೆ, ಸ್ಪಿನ್ನರ್‌ಗಳ ಎದುರು ಕೇವಲ 82 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಪವರ್ ಪ್ಲೇನಲ್ಲಿ ಅವರು ಸ್ಪಿನ್ನರ್‌ಗಳನ್ನು ಎದುರಿಸಲು ತಡಬಡಾಯಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ.

ಪವರ್ ಪ್ಲೇನಲ್ಲಿ ರೋಹಿತ್

ಪವರ್ ಪ್ಲೇನಲ್ಲಿ ರೋಹಿತ್

ಹಿಂದಿನ ಮೂರು ಐಪಿಎಲ್ ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಪವರ್ ಪ್ಲೇನಲ್ಲಿ ಸ್ಪಿನ್ನರ್‌ಗಳಿಂದ 61 ಎಸೆತಗಳನ್ನು ಎದುರಿಸಿದ್ದಾರೆ. ಆದರೆ ಗಳಿಸಿರುವುದು 81.97ರ ಸ್ಟ್ರೈಕ್‌ ರೇಟ್‌ನಲ್ಲಿ 50 ರನ್‌ಗಳನ್ನು ಮಾತ್ರ. ಅಂದರೆ ಹತ್ತು ಓವರ್‌ಗಳಷ್ಟು ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ ಆರು ಬಾರಿ ಔಟ್ ಆಗಿದ್ದಾರೆ. ಹಾಗೆಯೇ ವೇಗದ ಬೌಲರ್‌ಗಳ 250 ಎಸೆತಗಳನ್ನು ಎದುರಿಸಿದ್ದಾರೆ. 126.00 ಸ್ಟ್ರೈಕ್ ರೇಟ್‌ನಲ್ಲಿ 315 ರನ್ ಗಳಿಸಿದ್ದಾರೆ. 9 ಬಾರಿ ವೇಗದ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. 3 ಆವೃತ್ತಿಗಳಲ್ಲಿ ಪವರ್ ಪ್ಲೇನಲ್ಲಿ ಒಟ್ಟು 311 ಎಸೆತಗಳಲ್ಲಿ 117.36 ಸ್ಟ್ರೈಕ್ ರೇಟ್‌ನಲ್ಲಿ 365 ರನ್ ಗಳಿಸಿದ್ದಾರೆ.

ಚೆನ್ನೈ ವಿರುದ್ಧ ಉತ್ತಮ ಬ್ಯಾಟಿಂಗ್

ಚೆನ್ನೈ ವಿರುದ್ಧ ಉತ್ತಮ ಬ್ಯಾಟಿಂಗ್

ರೋಹಿತ್ ಶರ್ಮಾ ಅವರನ್ನು ಈ ಮೂರು ಆವೃತ್ತಿಗಳಲ್ಲಿ ಔಟ್ ಮಾಡಿದ ಸ್ಪಿನ್ನರ್‌ಗಳು ಚೆಂಡಿಗೆ ಅಷ್ಟೇನೂ ತಿರುವು ನೀಡುವವರಲ್ಲ. ಆದರೆ ವೈವಿಧ್ಯಮಯವಾಗಿ ಚೆಂಡು ಎಸೆಯುವ ಸಾಮರ್ಥ್ಯವುಳ್ಳವರು. ಹೀಗಾಗಿ ಸಿಎಸ್‌ಕೆ ತಂಡ ರವೀಂದ್ರ ಜಡೇಜಾ ಮತ್ತು ಇಮ್ರಾನ್ ತಾಹಿರ್ ಅವರನ್ನು ಬಳಸಿಕೊಂಡರೆ ರೋಹಿತ್ ಅವರನ್ನು ಆರಂಭದಲ್ಲಿಯೇ ಕಟ್ಟಿಹಾಕುವ ಅವಕಾಶವಿದೆ. ಚೆನ್ನೈ ತಂಡದ ವಿರುದ್ಧ ಇದುವರೆಗೂ ರೋಹಿತ್ ಶರ್ಮಾ 700ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ರೋಹಿತ್ ಅವರನ್ನು ತಳವೂರದಂತೆ ತಡೆಯಲು ಅವರ ದೌರ್ಬಲ್ಯವನ್ನು ಅರಿತು ಎಂ.ಎಸ್. ಧೋನಿ ಯೋಜನೆ ರೂಪಿಸಿದರೆ ಅಚ್ಚರಿಯಿಲ್ಲ.

English summary
IPL 2020: Mumbai Indians Vs Chennai Super Kings; Rohit Sharma's weakness in powerplay is spin bowling and that was proved in last three ipl seasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X