• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

CSK ತಂಡದಲ್ಲಿ ಹಿರಿಯ ಆಟಗಾರರದ್ದೇ ಗ್ಯಾಂಗ್

|

ಐಪಿಎಲ್‌ 13ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಹಿರಿಯ ಆಟಗಾರರನ್ನು ಹೊಂದಿರುವ ತಂಡ ಅಂದ್ರೆ ಅದು ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್ ತಂಡ. ಚೆನ್ನೈ ತಂಡದಲ್ಲಿ ಏನೆಲ್ಲಾ ಅಂದ್ರೂ ಏಳು ಆಟಗಾರರಿಗೆ 35ವರ್ಷ ದಾಟಿದೆ. ಅದ್ರಲ್ಲೂ 41ವರ್ಷದ ಇಮ್ರಾನ್ ತಾಹೀರ್, 13ನೇ ಆವೃತ್ತಿಯ ಐಪಿಎಲ್​ನಲ್ಲಿ ಅತೀ ಹಿರಿಯ ಆಟಗಾರ ಎನ್ನಿಸಿಕೊಂಡಿದ್ದಾರೆ.

ತಾಹೀರ್ ಮೈದಾನದಲ್ಲಿ ಓಡೋದು ನೋಡಿದ್ರೆ ಅವರಿಗೆ 41ವರ್ಷ ಆಗಿದೆ ಎಂದು ನಂಬೋದು ಸ್ವಲ್ಪ ಕಷ್ಟ. ವಿಕೆಟ್ ಪಡೆದ್ರೆ ಚಿರಯುವಕನಂತೆ ಮೈದಾನದ ತುಂಬೆಲ್ಲಾ ಓಡಾಡೋದು ಆತನ ವಿಶೇಷ ಶೈಲಿ. ಇನ್ನೂ ನಾಯಕ ಎಂ.ಎಸ್.ಧೋನಿ ಹಾಗೂ ಆರಂಭಿಕ ಬ್ಯಾಟ್ಸ್​ಮನ್ ಶೇನ್ ವ್ಯಾಟ್ಸನ್​ಗೆ 39ವರ್ಷವಾದ್ರೂ, ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ.

IPL 2020: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದೌರ್ಬಲ್ಯ ಏನು ಗೊತ್ತೇ?

ಚೆನ್ನೈ ತಂಡದ ಹಿರಿಯ ಆಟಗಾರರು

ಚೆನ್ನೈ ತಂಡದ ಹಿರಿಯ ಆಟಗಾರರು

ಸದ್ಯ ಚೆನ್ನೈ ತಂಡದಲ್ಲಿರೋ ಹಿರಿಯ ಆಟಗಾರರು ಯಾರು ಅನ್ನೋದನ್ನ ನೋಡೋದಾದ್ರೆ, ಇಮ್ರಾನ್ ತಾಹೀರ್​ಗೆ 41ವರ್ಷವಾಗಿದ್ರೆ, ಎಂ.ಎಸ್.ಧೋನಿ ಮತ್ತು ಶೇನ್ ವ್ಯಾಟ್ಸನ್​ಗೆ 39ವರ್ಷ ವಯಸ್ಸಾಗಿದೆ. ಡ್ವೇನ್ ಬ್ರಾವೋ, ಮುರಳಿ ವಿಜಯ್, ಫಾಫ್ ಡುಪ್ಲೆಸಿಗೆ 36ವರ್ಷವಾಗಿದ್ರೆ, ಆಲ್​ರೌಂಡರ್ ಕೇದಾರ್ ಜಾಧವ್​ಗೆ 35 ವರ್ಷವಾಗಿದೆ.ಆಟಗಾರ - ವರ್ಷ

ಇಮ್ರಾನ್ ತಾಹೀರ್ 41

ಎಂ.ಎಸ್.ಧೋನಿ 39

ಶೇನ್ ವ್ಯಾಟ್ಸನ್ 39

ಡ್ವೇನ್ ಬ್ರಾವೋ 36

ಮುರಳಿ ವಿಜಯ್ 36

ಫಾಫ್ ಡುಪ್ಲೆಸಿ 36

ಕೇದಾರ್ ಜಾಧವ್ 35

ಹೈದ್ರಾಬಾದ್ ತಂಡದಲ್ಲಿ ಹಿರಿಯ ಆಟಗಾರರು

ಹೈದ್ರಾಬಾದ್ ತಂಡದಲ್ಲಿ ಹಿರಿಯ ಆಟಗಾರರು

ಹೈದ್ರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಾಗೂ ಮೊಹಮ್ಮದ್ ನಬಿ 35ವರ್ಷ ವಯಸ್ಸಾಗಿದೆ.

ಆಟಗಾರ - ವರ್ಷ

ವೃದ್ಧಿಮಾನ್ ಸಹಾ 35

ಮೊಹಮ್ಮದ್ ನಬಿ 35

ರಾಜಸ್ಥಾನ ತಂಡದಲ್ಲಿ ಸೀನಿಯರ್ ಪ್ಲೇಯರ್

ರಾಜಸ್ಥಾನ ತಂಡದಲ್ಲಿ ಸೀನಿಯರ್ ಪ್ಲೇಯರ್

ರಾಜಸ್ಥಾನ ರಾಯಲ್ಸ್​ನ ಅಭಿಷೇಕ್ ನಾಯರ್​ಗೆ 36 ವರ್ಷವಾಗಿದೆ.

ಆಟಗಾರ - ವರ್ಷ

ಅಭಿಷೇಕ್ ನಾಯರ್ 36

ಡೆಲ್ಲಿ ತಂಡದಲ್ಲಿ ಹಿರಿಯ ಆಟಗಾರ

ಡೆಲ್ಲಿ ತಂಡದಲ್ಲಿ ಹಿರಿಯ ಆಟಗಾರ

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಮಿತ್ ಮಿಶ್ರಾಗೆ 37ವರ್ಷದ ವಯಸ್ಸಾಗಿದೆ.

ಆಟಗಾರ- ವರ್ಷ

ಅಮಿತ್ ಮಿಶ್ರಾ 37

ಕೊಲ್ಕತ್ತಾ, ಪಂಜಾಬ್ ತಂಡದಲ್ಲಿ ಹಿರಿಯ ಆಟಗಾರರು

ಕೊಲ್ಕತ್ತಾ, ಪಂಜಾಬ್ ತಂಡದಲ್ಲಿ ಹಿರಿಯ ಆಟಗಾರರು

ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್​ಗೆ 35 ವರ್ಷ ವಯಸ್ಸಾಗಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾನ್​ನ ಕ್ರಿಸ್ ಗೇಲ್​ಗೆ 40ವರ್ಷ ವಯಸ್ಸಾಗಿದೆ. ಹೀಗೆ 35ವರ್ಷ ಮೇಲ್ಪಟ್ಟ ಹಿರಿಯ ಆಟಗಾರರು ಎಲ್ಲ ತಂಡಗಳಲ್ಲೂ ಇದ್ದಾರೆ. ಇವರಿಗೆಲ್ಲಾ ವಯಸ್ಸಾದ್ರೂ ನೀಡುವ ಪ್ರದರ್ಶನದಲ್ಲಿ ವಯಸ್ಸಾದವರಂತೆ ಕಾಣ್ತಿಲ್ಲ.

English summary
In this article explained which team have the most oldest players in the side of IPL 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X