ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಳಸುವ ಫೋನ್ ಯಾವುದು? ಐಫೋನ್ ಮೇಲೆ ಸಚಿವರಿಗೆ ಮೋಹ!

|
Google Oneindia Kannada News

ನವದೆಹಲಿ, ಜೂನ್ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡೆರಡು ಸ್ಮಾರ್ಟ್ ಫೋನ್ ಬಳಸುತ್ತಾರೆ, ಟ್ವಿಟ್ಟರ್ ನಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ ಎಂಬುದು ಗೊತ್ತಿರಬಹುದು. ಇತ್ತ ಮೋದಿ ಸರ್ಕಾರ್ 2.0ನಲ್ಲೂ ತಂತ್ರಜ್ಞಾನ ಅರಿತ ಸಚಿವರುಗಳಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಡೇಟ್ ಮಾಡಲು ಸುಧಾರಿತ ಐಫೋನ್ ಹಾಗೂ ಅಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಆದರೆ, ಐಫೋನ್ ಮೇಲಿನ ಮೋಹವೇ ಅಧಿಕ ಎಂದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಸಾಧನಗಳನ್ನು ಇಷ್ಟಪಡುವ, ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಸುವ ಪ್ರಧಾನಿ ಮೋದಿ ಅವರು ಐಫೋನ್ ಸೇರಿದಂತೆ ಆಪಲ್ ಕುಟುಂಬ ಅನೇಕ ಸಾಧನಗಳನ್ನು ಬಳಸುತ್ತಾರೆ. ಇನ್ನು ಮೋದಿ ಸಂಪುಟದ ಅತ್ಯಂತ ಪ್ರಭಾವಿ ನಾಯಕ, ಗೃಹ ಸಚಿವ ಅಮಿತ್ ಶಾ ಅವರು ಹೊಚ್ಚ ಹೊಸ ಆಪಲ್ ಎಕ್ಸ್ ಎಸ್ ಬಳಸುತ್ತಿದ್ದಾರೆ.

ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!

ಅಮಿತ್ ಶಾ ಅವರ ಕಚೇರಿಯಲ್ಲೂ ಫೇಸ್ಬುಕ್, ಟ್ವಿಟ್ಟರ್ ಅಪ್ಡೇಟ್ ಮಾಡಲು ಅತ್ಯಾಧುನಿಕ ಸಾಧನಗಳನ್ನು ಬಳಸಲಾಗುತ್ತಿದೆ. ಅಮಿತ್ ಶಾ ಅವರ ಹಿಂಬಾಲಕರು ಹೆಚ್ಚಾಗಿದ್ದು, ಟ್ವಿಟ್ಟರ್ ನಲ್ಲಿ 14 ಮಿಲಿಯನ್ ಮಂದಿ ಇದ್ದಾರೆ.

ಸಂಸತ್‌ನಲ್ಲಿ ಮೋದಿ ಭಾಷಣ: ಅಭಿವೃದ್ಧಿ ಮಂತ್ರದ ಜೊತೆ ಹಲವು ವಿಷಯಸಂಸತ್‌ನಲ್ಲಿ ಮೋದಿ ಭಾಷಣ: ಅಭಿವೃದ್ಧಿ ಮಂತ್ರದ ಜೊತೆ ಹಲವು ವಿಷಯ

ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎರಡು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಒಂದು ಐಫೋನ್ ಮತ್ತೊಂದು ಆಂಡ್ರಾಯ್ಡ್ ಆಧಾರಿತ ಮೊಬೈಲ್. ವಾಟ್ಸಾಪ್ ಗ್ರೂಪ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್ ನಲ್ಲಿ 1.1 ಮಿಲಿಯನ್ ಮಂದಿ ಹಿಂಬಾಲಕರನ್ನು ಹೊಂದಿದ್ದಾರೆ.

ಧರ್ಮೇಂದ್ರ ಪ್ರಧಾನ್

ಧರ್ಮೇಂದ್ರ ಪ್ರಧಾನ್

ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎರಡು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಒಂದು ಐಫೋನ್ ಮತ್ತೊಂದು ಆಂಡ್ರಾಯ್ಡ್ ಆಧಾರಿತ ಮೊಬೈಲ್. ವಾಟ್ಸಾಪ್ ಗ್ರೂಪ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್ ನಲ್ಲಿ 1.1 ಮಿಲಿಯನ್ ಮಂದಿ ಹಿಂಬಾಲಕರನ್ನು ಹೊಂದಿದ್ದಾರೆ.

ನಿತಿನ್ ಗಡ್ಕರಿ ಟ್ವಿಟ್ಟರಲ್ಲಿ ಸಕ್ರಿಯ

ನಿತಿನ್ ಗಡ್ಕರಿ ಟ್ವಿಟ್ಟರಲ್ಲಿ ಸಕ್ರಿಯ

ಕೇಂದ್ರ ರಸ್ತೆ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸದಾಕಾಲ ಸಕ್ರಿಯರಾಗಿದ್ದು, ನಿತ್ಯ ಕಚೇರಿ ಕೆಲಸದಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಳಸುತ್ತಾರೆ. ಸದ್ಯ ಟ್ವಿಟ್ಟರ್ ನಲ್ಲಿ 5.15 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ನಿರ್ಮಲಾ ಸೀತಾರಾಮನ್ : ಟ್ವಿಟ್ಟರ್ ನಲ್ಲಿ 2.23 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಸಚಿವಾಲಯದ ಕಾರ್ಯಗಳು ಹಾಗೂ ಮೋದಿ ಸಚಿವಾಲಯದ ಕಾರ್ಯಗಳನ್ನು ಹಂಚಿಕೊಳ್ಳುತ್ತಾರೆ. ಇವರ ಕಚೇರಿ ವ್ಯವಹಾರ ನಿರ್ವಹಣೆಗೆ ಆಂಡ್ರಾಯ್ಡ್ ಆಧಾರಿತ ಫೋನ್ ಬಳಸಲಾಗುತ್ತಿದೆ.

ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ

ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ

ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ವಾಟ್ಸಾಪ್ ಗ್ರೂಪ್, ಫೇಸ್ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಕುಲಸ್ತೆ ಅವರು ಐಫೋನ್ ಹಾಗೂ ಸ್ಯಾಮ್ ಸಂಗ್ ಕೀಪ್ಯಾಡ್ ಫೋನ್ ಬಳಸುತ್ತಿದ್ದಾರೆ. ಸಾರ್ವಜನಿಕರೊಡನೆ ಸಂಪರ್ಕ ಸಾಧಿಸಲು ಹಾಗೂ ಕಚೇರಿ ವ್ಯವಹಾರವನ್ನು ನಿರ್ವಹಿಸಲು ಐಫೋನ್ ಸೂಕ್ತ ಎಂದಿದ್ದಾರೆ. ವಾಟ್ಸಾಪ್, ಟ್ವಿಟ್ಟರ್, ಫೇಸ್ಬುಕ್ ಅಪ್ಡೇಟ್ ಚೆಕ್ ಮಾಡುತ್ತಿರುತ್ತಾರೆ.

2018ರಲ್ಲಿ ಮೋದಿ ಬಳಿ ಐಫೋನ್ 06

2018ರಲ್ಲಿ ಮೋದಿ ಬಳಿ ಐಫೋನ್ 06

2018ರಲ್ಲಿ ಮೋದಿ ಅವರ ಬಳಿ ಆಪಲ್ ಐಫೋನ್ 6 ಇತ್ತು. ಚೀನಾ ಹಾಗೂ ದುಬೈ ಅಧಿಕೃತ ಪ್ರವಾಸದ ವೇಳೆ ಐಫೋನ್ ಬಳಸಿದ್ದರು. ಸುರಕ್ಷತಾ ದೃಷ್ಟಿಯಿಂದ ಸುಧಾರಿತ ಐಫೋನ್ ಸಾಧನಗಳನ್ನು ಮಾತ್ರ ಬಳಸಲು ನಿರ್ಧರಿಸಿದ್ದಾರೆ. ಟ್ವಿಟ್ಟರ್ ನಲ್ಲಿ 48.2 ಮಿಲಿಯನ್ ಹಿಂಬಾಲಕರು ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ 110 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಟ್ರಂಪ್ ಅವರು ಒಟ್ಟಾರೆ 96 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

English summary
Who says only the US President Donald Trump uses two smartphones and treats Twitter as his typewriter? Several key ministers in the Narendra Modi government are quite tech-savvy and are currently using best-in-class Apple and Android-based smartphones to remain active on various social media platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X