ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಸಿ ಸೆಕ್ಷನ್ 377 ರದ್ದತಿ: ವಿಚಾರಣೆ ಜುಲೈ 17ಕ್ಕೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಜುಲೈ 12: ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ರ ರದ್ದತಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಜುಲೈ 17ಕ್ಕೆ ಮುಂದೂಡಿದೆ.

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮೂರು ದಿನಗಳಿಂದ ನಡೆದಿತ್ತು.

ಸಲಿಂಗಕಾಮ ಅಪರಾಧವೇ, ಕಾನೂನು ಬದಲಾಗಬೇಕೇ: ಏನಿದು ಸೆಕ್ಷನ್ 377?ಸಲಿಂಗಕಾಮ ಅಪರಾಧವೇ, ಕಾನೂನು ಬದಲಾಗಬೇಕೇ: ಏನಿದು ಸೆಕ್ಷನ್ 377?

ಸೆಕ್ಷನ್ 377ರ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವುದನ್ನು ಸುಪ್ರೀಂಕೋರ್ಟ್ ವಿವೇಚನೆಗೆ ಬಿಡುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿತ್ತು.

ipc section 377 lgbt homosexual supreme court resume hearing on july 17

ಅರ್ಜಿದಾರರ ಪೈಕಿ ಒಬ್ಬರ ಪರವಾಗಿ ಹಾಜರಾದ ವಕೀಲ ಅಶೋಕ್ ದೇಸಾಯಿ, ಸಂಸ್ಕೃತಿಯ ಭಾಗವಾಗಿ ಸಲಿಂಗ ಕಾಮ ಅಸ್ತಿತ್ವದಲ್ಲಿದೆ. ಅನೇಕ ದೇಶಗಳು ಸಲಿಂಗಕಾಮವನ್ನು ಒಪ್ಪಿಕೊಂಡಿವೆ ಎಂದು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ತಿಳಿಸಿದರು.

ಸೆಕ್ಷನ್ 377 ಅಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.

ಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿ

ಆದರೆ, ಈ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು.

ಮನುಷ್ಯನು ತನ್ನದೇ ಲಿಂಗದ ವ್ಯಕ್ತಿಯೊಂದಿಗೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಸಂಪರ್ಕ ಹೊಂದುವುದು ನಿಸರ್ಗದ ನಿಯಮಕ್ಕೆ ವಿರುದ್ಧವಾದುದು ಎಂದು ಸೆಕ್ಷನ್ 377 ಪ್ರತಿಪಾದಿಸಿದೆ.

ಇದರ ಅನ್ವಯ ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ಸೆರೆವಾಸ ಹಾಗೂ ದಂಡ ವಿಧಿಸಲು ಅವಕಾಶವಿದೆ.

English summary
Supreme Court resumed its hearing on the petitions filed against section 377 of ipc on july 17. section 377 criminalises homosexual activities of lgbtq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X