ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಒಸಿ ಮಂಜುನಾಥ್‌ ಹಂತಕರಿಗೆ ಜೀವಾವಧಿ ಶಿಕ್ಷೆ ಖಾಯಂ

By Mahesh
|
Google Oneindia Kannada News

ನವದೆಹಲಿ, ಮಾ.11: ತೈಲ ಕಲಬೆರಕೆ ಜಾಲ ಪತ್ತೆ ಹಚ್ಚಿ ದುಷ್ಕರ್ಮಿಗಳಿಂದ ದುರಂತ ಸಾವಿಗೀಡಾದ ಐಒಸಿ ಮ್ಯಾನೇಜರ್ ಕನ್ನಡಿಗ ಮಂಜುನಾಥ್‌ ಅವರ ಹಂತಕರಿಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.

ಮಂಜುನಾಥ್ ರನ್ನು ಕೊಲೆ ಮಾಡಿದ್ದ 6 ಮಂದಿ ಹಂತಕರಿಗೆ ಅಲಹಾಬಾದ್ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು. ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಕರ್ನಾಟಕದ ಕೋಲಾರ ಮೂಲದ ಮಂಜುನಾಥ್ ಐಒಸಿ ತೈಲ ಕಂಪೆನಿಯಲ್ಲಿ ಮ್ಯಾನೇಜರಾಗಿದ್ದರು.

ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ತೈಲ ಮಾಫಿಯಾವನ್ನು ಪತ್ತೆ ಹಚ್ಚಿದ್ದರು. ಇದರಿಂದ ರೊಚ್ಚಿಗೆದ್ದ ಮಾಫಿಯಾ ಮಂದಿ, ಮಂಜುನಾಥ್ ವಿರುದ್ಧ ತಿರುಗಿ ಬಿದ್ದರು. 2005 ನವೆಂಬರ್ 19ರಂದು ಗುಂಡಿಟ್ಟು ಹತ್ಯೆ ಮಾಡಿದ್ದರು. [ಮಂಜುನಾಥನ ಆತ್ಮಕ್ಕೆ ಸ್ವಲ್ಪ ಶಾಂತಿ]

ಆರೋಪಿಗಳಾದ ರಾಜೇಶ್ ಶರ್ಮಾ, ಶ್ರೀವೇಶ್ ಗಿರಿ, ವಿವೇಕ್ ಶರ್ಮಾ, ರಾಕೇಶ್ ಆನಂದ್, ದೇವೇಶ್ ಅಗ್ನಿಹೋತ್ರಿ ಹಾಗೂ ಮೇನು ಮಿತ್ತಲ್ ಅವರಿಗೆ ಅಲಹಾಬಾದ್ ನ್ಯಾಯಾಲಯ 2009ರಲ್ಲೇ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.ಅಲಹಾಬಾದ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹಂತಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದರೆ, ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

IOC manager Manjunath's murderers get life term

ಮಂಜುನಾಥ್ ಕರ್ನಾಟಕದ ಕೋಲಾರ ಜಿಲ್ಲೆಯ ನಿವಾಸಿಯಾಗಿದ್ದು, ಐಐಎಂ ಪದವೀಧರರಾಗಿದ್ದರು. ಉತ್ತರ ಪ್ರದೇಶದಲ್ಲಿ ಐಒಸಿ ಮ್ಯಾನೇಜರ್ ಆಗಿದ್ದಾಗ ಭ್ರಷ್ಟಾಚಾರ, ತೈಲ ಕಲಬೆರಕೆ ದಂಧೆಗಳನ್ನು ಪತ್ತೆಹಚ್ಚಿದ್ದರು.

ಪ್ರಮುಖ ಆರೋಪಿ ಪವನ್ ಕುಮಾರ್ ಅಲಿಯಾಸ್ ಮೋನು ಮಿತ್ತಲ್ ಅವರ ಪೆಟ್ರೋಲ್ ಬಂಕ್ ನಲ್ಲಿ ಸ್ಯಾಂಪಲ್ ತೆಗೆದುಕೊಳ್ಳಲು ಹೋದವರು ಮತ್ತೆ ಹಿಂತಿರುಗಿರಲಿಲ್ಲ. ಸೀತಾಪುರ ಜಿಲ್ಲೆಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆದು ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.

[About Manjunath : Manjunath Shanmugam was born on February 23rd, 1978. He was the oldest of three siblings and leaves behind his parents, a younger brother and sister. His father works in BEML in Kolar Gold Fields, a township about 100 km from Bangalore.

After finishing his engineering from SJCE Mysore, Manjunath completed his MBA from I.I.M Lucknow, and graduated in 2003.

He joined IOCL during campus placements, and was the first sales officer to manage the Lakhimpur Khiri region of UP - a known hotbed of petroleum adulteration.

Manjunath was a terrific singer, full of verve and heart, part of the campus band - '3.4′. He was popular for his sincerity, honesty and friendliness. He was murdered on 19th November, 2005]

Courtesy : Manjunath Shanmugam Trust

English summary
The Supreme Court on Wednesday(Mar.11) awarded life term to 6 convicts for the murder of Indian Oil corporation manager S Manjunath, who was murdered by oil mafia in Uttar Pradesh’s Lakhimpur Kheri district in 2005 when he sought to expose corruption and petrol adulteration in the system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X