ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆದಾರ ಜುಂಜುನ್‌ವಾಲಾ ಬೆಂಬಲಿತ ಆಕಾಶ್ ಏರ್‌ ವಿಮಾನದ ಮೊದಲ ಚಿತ್ರ ಇಲ್ಲಿದೆ

|
Google Oneindia Kannada News

ನವದೆಹಲಿ, ಮೇ 23: ಭಾರತದ 'ವಾರನ್‌ ಬಫೆಟ್‌' ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ ಅವರ ಬೆಂಬಲದಲ್ಲಿ ಆಕಾಶ್‌ ಏರ್‌ ಭಾರತೀಯ ವಿಮಾನಯಾನ ಸೇವೆಗೆ ದಾಪುಗಾಲಿಡಲು ಸಿದ್ಧವಾಗುತ್ತಿದೆ. ಸೋಮವಾರ ತನ್ನ ಮೊದಲ ವಿಮಾನದ ಚಿತ್ರವನ್ನು ಟ್ಟಿಟ್ಟರ್‌ನಲ್ಲಿ ಪ್ರಕಟಿಸಿರುವ ವಿಮಾನಯಾನ ಸಂಸ್ಥೆ 'ತಾಳ್ಮೆಯಿಂದಿರಲು ಆಗುತ್ತಿಲ್ಲ' ಎಂದು ತಿಳಿಸಿದೆ.

ಜುಲೈನಲ್ಲಿ ತನ್ನ ವಾಣಿಜ್ಯ ಹಾರಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಆಕಾಶ ಏರ್, ಅದರ ಏರ್‌ಲೈನ್ ಕೋಡ್ "QP" ಎಂದು ತಿಳಿಸಿದೆ. ಪ್ರಪಂಚದ ಪ್ರತಿಯೊಂದು ವಿಮಾನಯಾನ ಸಂಸ್ಥೆಯು ತನ್ನದೇ ಆದ ಡಿಸೈನೇಟರ್ ಕೋಡ್ ಅನ್ನು ಹೊಂದಿರುತ್ತದೆ. ಉದಾಹರಣೆಗೆ, ಇಂಡಿಗೋ ಏರ್‌ಲೈನ್‌ ಕೋಡ್ "6E", ಗೋ ಫಸ್ಟ್ "G8" ಮತ್ತು ಏರ್ ಇಂಡಿಯಾದ "AI" ಆಗಿದೆ.

ಜೆಟ್ ಏರ್‌ವೇಸ್‌ಗೆ ಎಒಸಿ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯಜೆಟ್ ಏರ್‌ವೇಸ್‌ಗೆ ಎಒಸಿ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ

ಕಳೆದ ವರ್ಷವೇ ಎನ್‌ಒಸಿ ಪಡೆದಿರುವ ಸಂಸ್ಥೆ

ಕಳೆದ ವರ್ಷವೇ ಎನ್‌ಒಸಿ ಪಡೆದಿರುವ ಸಂಸ್ಥೆ

ಮುಂಬೈ ಮೂಲದ ಸಂಸ್ಥೆ ಕಳೆದ ಅಕ್ಟೋಬರ್‌ನಲ್ಲಿ, ವಿಮಾನಯಾನ ಸಂಸ್ಥೆ ಆರಂಭಿಸಲು ಅಗತ್ಯವಾಗಿರುವ ನಿರಪೇಕ್ಷಣಾ ಪತ್ರ (ಎನ್‌ಒಸಿ)ವನ್ನು ನಾಗರಿಕ ವಿಮಾನಯಾನ ಸಚಿವಾಲಯದಿಂದ ಪಡೆದುಕೊಂಡಿತ್ತು. ಆದರೆ ಮೊದಲ ವಿಮಾನ ಆಗಮಿಸುವುದು ತಡವಾದ್ದರಿಂದ ಜುಲೈನಲ್ಲಿ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸುವುದಾಗಿ ಸಂಸ್ಥೆ ತಿಳಿಸಿತ್ತು.

photo courtesy: @AkasaAir

ಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿ

ಜುಲೈನಲ್ಲಿ ಆರಂಭ

ಜುಲೈನಲ್ಲಿ ಆರಂಭ

ನಾವು ಏರ್‌ಲೈನ್ ಉಡಾವಣಾ ಮಾಡುವ ದಿನಾಂಕ ಹತ್ತಿರವಾಗುತ್ತಿದ್ದಂತೆ, ನಾವು ನಮ್ಮ ಟೈಮ್‌ಲೈನ್‌ಗಳಲ್ಲಿ ಪರಿಷ್ಕೃತ ಅಂದಾಜುಗಳನ್ನು ದೃಢೀಕರಿಸಬಹುದು. ಜುಲೈ 2022 ರಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಉದ್ದೇಶದಿಂದ, ನಾವು ನಮ್ಮ ಮೊದಲ ವಿಮಾನವನ್ನು ಜೂನ್ ಆರಂಭದಲ್ಲಿ ನಿರೀಕ್ಷಿಸುತ್ತೇವೆ ಎಂದು ಅಕಾಶ್ ವಿಮಾನ ಸಂಸ್ಥೆಯ ಸಿಇಒ ವಿನಯ್ ದುಬೆ ತಿಳಿಸಿದ್ದಾರೆ. ಅಕಾಶ ಏರ್ ಮಾರ್ಚ್ 2023 ರ ಅಂತ್ಯದ ವೇಳೆಗೆ ದೇಶೀಯ ಮಾರ್ಗಗಳಲ್ಲಿ 18 ವಿಮಾನಗಳನ್ನು ಹಾರಿಸಲು ಯೋಜಿಸಿದೆ. ಇದು ಮೆಟ್ರೋದಿಂದ ಟೈರ್ -2 ಮತ್ತು ಟೈರ್ -3 ನಗರಗಳ ಮೇಲೆ ಕೇಂದ್ರೀಕರಿಸಿದೆ.

photo courtesy: @AkasaAir

ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣ

ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣ

ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ. ಆದ್ದರಿಂದ 'ಇದು ನಿಮ್ಮ ಆಕಾಶ' ಎಂಬ ಟ್ಯಾಗ್‌ಲೈನ್ ಅನ್ನು ಇಟ್ಟುಕೊಂಡಿದೆ. ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ಭಾರತೀಯ ವಿಮಾನಯಾನ ಮಾಡುವವರಿಗೆ ಹೊಂದಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಈ ಬ್ರಾಂಡ್ ಹೊಂದಿದೆ.

ಐದು ದಿನಗಳ ದುಬೈ ಏರ್ ಶೋನಲ್ಲಿ ಬೋಯಿಂಗ್ ಜೊತೆಗಿನ ಕಂಪನಿಯ ಇತ್ತೀಚಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಆಕಾಶ್ ಏರ್ 2021 ರ ನವೆಂಬರ್ 26 ರಂದು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಜೂನ್ ವೇಳೆಗೆ ಮೊದಲ ವಿಮಾನ ವಿತರಣೆಯನ್ನು ನಿರೀಕ್ಷಿಸಲಾಗಿದೆ.

260 ಕೋಟಿ ರೂ ಹೂಡಿಕೆ

260 ಕೋಟಿ ರೂ ಹೂಡಿಕೆ

ಆಕಾಶ್‌ ಏರ್ಸ್ ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಉದ್ದೇಶಿಸಿದೆ. ಈ ಸಂಸ್ಥೆಯಲ್ಲಿ ಭಾರತದ ವಾರೆನ್ ಬಫೆಟ್ ಎಂದೂ ಕರೆಯಲ್ಪಡುವ ಜುಂಜುನ್‌ವಾಲಾ 35 ಮಿಲಿಯನ್ ಡಾಲರ್(260 ಕೋಟಿ ರೂ) ಹೂಡಿಕೆ ಮಾಡುವುದಕ್ಕೆ ಸಿದ್ಧರಿದ್ದಾರೆ. ಈ ಸಂಸ್ಥೆಯ ಶೇ. 40 ರಷ್ಟು ಷೇರುಗಳನ್ನು ಹೊಂದುವ ಗುರಿಯನ್ನು ಹೊಂದಲಿದ್ದಾರೆ. ಈ ಸಂಸ್ಥೆ ಸುಮಾರು 180 ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನಗಳನ್ನು ಹೊಂದಲಿದೆ ಎಂದು ತಿಳಿದುಬಂದಿದೆ.

English summary
Akasa Air backed by ace investor Rakesh Jhunjhunwala, on Monday tweeted a picture of its first aircraft and says planning to start its commercial flight operations in July
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X