ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೆಳೆಯ' ಅಮೀರ್ ಖಾನ್ ಬಗ್ಗೆ ಶಾರುಖ್ ಹೇಳಿದ್ದೇನು?

|
Google Oneindia Kannada News

ಮುಂಬೈ, ಡಿಸೆಂಬರ್. 01: ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ವ್ಯಾಪಕ ಚರ್ಚೆ, ಗೊಂದಲ, ವಿವಾದಗಳು ನಡೆದಿವೆ ಮತ್ತು ನಡೆಯುತ್ತಿವೆ. ದೇಶ ಬಿಡುವ ಹೇಳಿಕೆ ನೀಡಿ ವಿವಾದದ ಕಿಚ್ಚು ಹೊತ್ತಿಸಿದ್ದ ಅಮೀರ್ ಖಾನ್ ಗೆ ಅಂತಿಮವಾಗಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಬೆಂಬಲದ ಹೇಳಿಕೆ ನೀಡಿದ್ದಾರೆ.

ಇಷ್ಟು ದಿನ ಮೌನವಾಗಿದ್ದ ಕಿಂಗ್ ಖಾನ್ ಇದೀಗ ಮಾತನಾಡಿದ್ದಾರೆ. 'ನೀವು ನಿಮ್ಮ ದೇಶ ಪ್ರೇಮವನ್ನು ಸಾಬೀತು ಮಾಡುವ ಅಗತ್ಯವಿಲ್ಲ. ದೇಶದ ಬಗ್ಗೆ, ದೇಶದ ಒಳಿತಿಗೆ ಚಿಂತಿಸಿದರೆ ಸಾಕು, ಎಲ್ಲವೂ ಒಳಿತಾಗುತ್ತದೆ' ಎಂಬ ಹೇಳಿಕೆ ನೀಡಿದ್ದಾರೆ.['ನನ್ನ ದೇಶಭಕ್ತಿಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ']

ದೇಶದ ಲಾಭಕ್ಕೋಸ್ಕರ ಕೆಲಸ ಮಾಡಬೇಕು. ಒಂದು ವೇಳೆ ದೇಶದ ವಿರುದ್ಧ ಕೆಲಸ ಮಾಡಿದರೆ ಅದು ನಿನಗೂ ಮತ್ತು ರಾಷ್ಟ್ರಕ್ಕೂ ಹಾನಿ ಮಾಡುತ್ತದೆ ಎಂದು ಕಿಂಗ್ ಖಾನ್ ಮುಂದುವರಿದು ಹೇಳಿದ್ದಾರೆ.

ಗೊತ್ತಿರುವ ಸಂಗತಿ ಮಾತ್ರ ಮಾತನಾಡಿ

ಗೊತ್ತಿರುವ ಸಂಗತಿ ಮಾತ್ರ ಮಾತನಾಡಿ

ಅಮೀರ್ ಖಾನ್ ಗೆ ಸಂಬಂಧಿಸಿದ ಅಸಹಿಷ್ಣುತೆ ಗೊಂದಲಗಳಿಂದ ನಾನು ಪಾಠ ಕಲಿತಿದ್ದೇನೆ. ನನಗೆ ಏನು ಗೊತ್ತಿದೆಯೋ ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಪ್ರತಿಯೊಂದು ವಿಷಯ ಮತ್ತು ಸಂಗತಿಗಳ ಬಗ್ಗೆ ಮಾತನಾಡುವ ಅಗತ್ಯ ಮತ್ತು ಅನಿವಾರ್ಯತೆ ಯಾರಿಯೂ ಇರುವುದಿಲ್ಲ ಎಂದು ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಹುಟ್ಟುಹಬ್ಬದಂದು ಮಾತಾಡಿದ್ದ ಶಾರುಖ್

ಹುಟ್ಟುಹಬ್ಬದಂದು ಮಾತಾಡಿದ್ದ ಶಾರುಖ್

ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಸಹಿಷ್ಣುತೆ, ಜಾತ್ಯತೀತತೆ ಬಗ್ಗೆ ಮಾತನಾಡಿದ್ದರು. ದೇಶಭಕ್ತ ಮಾಡಬಹುದಾದ ದೊಡ್ಡ ತಪ್ಪೆಂದರೆ ದೇಶದ ಜಾತ್ಯತೀತತೆಯ ವಿರುದ್ಧ ಹೋಗುವುದು. ಇದು ಎಲ್ಲ ಕಾಲದಲ್ಲೂ ಒಂದೆಲ್ಲಾ ಒಂದು ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಬದಲಾದ ಸಮಾಜದಲ್ಲಿ ಇದರ ಅಗತ್ಯವಾದರೂ ಏನು? ಎಂದು ಪ್ರಶ್ನೆ ಮಾಡಿದ್ದರು.

ಅಮೀರ್ ಖಾನ್ ಕೊಟ್ಟ ಹೇಳಿಕೆಯೇನು?

ಅಮೀರ್ ಖಾನ್ ಕೊಟ್ಟ ಹೇಳಿಕೆಯೇನು?

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದು ನಮ್ಮ ಕುಟುಂಬದ ಅನುಭವಕ್ಕೂ ಬಂದಿದೆ. ಮಕ್ಕಳ ಭವಿಷ್ಯಕ್ಕಾಗಿ ಈ ದೇಶವನ್ನು ತೊರೆಯೋಣ ಎಂದು ಹೆಂಡತಿ ಕಿರಣ್ ತರಾವ್ ನನ್ನಲ್ಲಿ ಹೇಳಿದ್ದರು ಎಂದು ಅಮೀರ್ ಖಾನ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ವಿವಾದದ ಲಕಿಡಿ ಹಬ್ಬಿಸಿತ್ತು.

ಜಾಲತಾಣಗಳಲ್ಲಿ ಆಕ್ರೋಶ

ಜಾಲತಾಣಗಳಲ್ಲಿ ಆಕ್ರೋಶ

ಅಮೀರ್ ಖಾನ್ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಪ್ರತಿಧ್ವನಿಸಿತು. ನಾಗರಿಕರು ತಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಿದರು. ಅಮೀರ್ ಖಾನ್ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು. ಆತನ ರಾಯಭಾರತ್ವದ ಕಂಪನಿಗಳು ನಷ್ಟ ಮಾಡಿಕೊಂಡವು

English summary
After a long debate and controversy, Aamir Khan finally received support from the King Khan of Bollywood -- Shahrukh Khan (SRK). The superstar of Hindi cinema finally broke his silence on the controversy related to Aamir Khan and his statement on growing intolerance in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X