• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಅಂತರ್ಜಾಲ, ಉಪಗ್ರಹ ಸೌಲಭ್ಯ ಮಹಾಭಾರತ ಕಾಲದಲ್ಲೇ ಅಸ್ತಿತ್ವದಲ್ಲಿತ್ತು!"

|

ಅಗರ್ತಲ, ಏಪ್ರಿಲ್ 18: "ಅಂತರ್ಜಾಲ ಮತ್ತು ಉಪಗ್ರಹಗಳು ಮಹಾಭಾರತ ಕಾಲದಲ್ಲೇ ಅಸ್ತಿತ್ವದಲ್ಲಿದ್ದವು" ಎಂದು ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್(ಬಿಪ್ಲಬ್ ಕುಮಾರ್ ದೇಬ್) ಹೇಳಿದ್ದಾರೆ.

ಸಕಲ ಮಾನಸಿಕ ಸಮಸ್ಯೆಗಳಿಗೆ ಮಹಾಭಾರತದಲ್ಲಿ ಉತ್ತರ: ಐಎಂಎ ಮುಖ್ಯಸ್ಥ

ಇತ್ತೀಚೆಗೆ ಅಗರ್ತಲದಲ್ಲಿ ಗಣಕೀಕರಣ ಮತ್ತು ಪ್ರಗತಿ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

'ಅಂತರ್ಜಾಲ ಮತ್ತು ಉಪಗ್ರಹ ಸಂವಹನಗಳು ಮಹಾಭಾರತ ಕಾಲದಲ್ಲೇ ಅಸ್ತಿತ್ವದಲ್ಲಿದ್ದವು. ಇಲ್ಲವೆಂದಾದರೆ ಕುರುಕ್ಷೇತ್ರ ಯುದ್ಧದ ಸುದ್ದಿಯನ್ನು ಸಂಜಯ ಕುಳಿತಲ್ಲೇ ಕುರುಡ ರಾಜ ಧೃತರಾಷ್ಟ್ರನಿಗೆ ಹೇಳುವುದಕ್ಕೆ ಹೇಗೆ ಸಾಧ್ಯವಿತ್ತು? ಅಂದರೆ ಆಗಿನ ಕಾಲದಲ್ಲೇ ಇಂದಿನ ಆಧುನಿಕ ತಂತ್ರಜ್ಞಾನಗಳು ಪರಿಚಿತವಾಗಿದ್ದವು' ಎಂದು ಅವರು ಕಾರ್ಯಾಗಾರದಲ್ಲಿ ಮಾತನಾಡುವ ಸಮಯದಲ್ಲಿ ಹೇಳಿದ್ದಾರೆ.

"ಭಾರತ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಅಂತರ್ಜಾಲ ಮತ್ತು ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಈಗಲೂ ಭಾರತ ಮುಂದಿದೆ. ಮೈಕ್ರೋಸಾಫ್ಟ್ ಅಮೆರಿಕ ಕಂಪನೆಯಾಗಿರಬಹುದು. ಆದರೆ ಅಲ್ಲಿರುವ ಬಹುಪಾಲು ಇಂಜಿನಿಯರ್ ಗಳು ಭಾರತೀಯರು" ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

English summary
Tripura Chief Minister Biplab Kumar Deb claimed that internet and satellite are not something new but existed since the Mahabharata era.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X