ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 1ರಿಂದ ಅಂತಾರಾಷ್ಟ್ರೀಯ ಯೋಗ ಸಪ್ತಾಹ ಆರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: 'ಅಂತಾರಾಷ್ಟ್ರೀಯ ಯೋಗ ಸಪ್ತಾಹ'ವು ಮಾರ್ಚ್ 1ರಿಂದ ಆರಂಭವಾಗಲಿದ್ದು ಮಾರ್ಚ್ 7ರವರೆಗೆ ನಡೆಯಲಿದೆ.

ವಿಶ್ವದಾದ್ಯಂತ ಯೋಗಿಗಳು ಈ ಯೋಗ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಾರೆ.ಯೋಗ ಹುಟ್ಟಿದ ಸ್ಥಳವಾದ ರಿಷಿಕೇಶದಲ್ಲಿ ಪ್ರಮುಖವಾಗಿ ಅಂತಾರಾಷ್ಟ್ರೀಯ ಸಪ್ತಾಹವು ನಡೆಯಲಿದೆ.

ಯೋಗ ಸಪ್ತಾಹವು ಪ್ರತಿ ವರ್ಷ ನಡೆಯಲಿದ್ದು, ವರ್ಷದಿಂದ ವರ್ಷಕ್ಕೆ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯೋಗ ದಿನಕ್ಕೆ ಚಾಲನೆ ಕೊಟ್ಟ ಬಳಿಕ ಹಾಗೂ ಯೋಗದ ಮಹತ್ವವನ್ನು ಅರಿತ ಜನರು ಹೆಚ್ಚಾಗಿದ್ದಾರೆ.

ಕಳೆದ ವರ್ಷ ರಿಷಿಕೇಶದಲ್ಲಿ ಸುಮಾರು 100 ದೇಶಗಳಿಂದ 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಹಥ ಯೋಗ, ಯೋಗ ಪ್ರಾಣಾಯಾಮ, ಯೋಗ ನಿದ್ರಾ ಬಗ್ಗೆ ತರಗತಿಗಳು ನಡೆಯಲಿದೆ.

International Yoga Week 2020 Will Be Held From March 1 To 7

ಪರಮಾರ್ಥ ನಿಕೇತನ ಆಶ್ರಮದಲ್ಲಿ ಯೋಗ ಸಪ್ತಾಹ ನಡೆಯಲಿದೆ. ಧ್ಯಾನದ ವಿಧಗಳಾದ ಅಗ್ನಿಹೋತ್ರ, ಅಂತರ್ ಮೌನ, ಚಕ್ರ ಸುಧಿ ಕುರಿತು ಮಾಹಿತಿ ಲಭ್ಯವಾಗಲಿದೆ.
ಯೋಗ, ಯೋಗದ ಬಗ್ಗೆ ಸಾಕಷ್ಟು ಚರ್ಚೆಯಾಗಲಿದೆ. ಯೋಗವು ದೇಹ, ಮನಸ್ಸು ಹಾಗೂ ಆತ್ಮವನ್ನು ಒಂದು ಗೂಡಿಸುತ್ತದೆ.

ಒಂದೇ ಮನಸ್ಥಿತಿ ಹೊಂದಿರುವಂತಹ ಯೋಗಿಗಳು ಅಲ್ಲಿ ಪಾಲ್ಗೊಳ್ಳಲಿದ್ದು, ಯೋಗದ ಮಹತ್ವದ ಕುರಿತು ವಿವರಣೆ ನೀಡಲಿದ್ದಾರೆ.

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ 'ಯೋಗವಿದ್ಯೆಯು' ಋಷಿ ಮುನಿಗಳಾದಿ ಸಾಧಕರಿಂದ ಇನ್ನೂ ಚಾಲ್ತಿಯಲ್ಲಿದೆ.

ಯೋಗ ಪದ್ಧತಿಯ ಬಳಕೆ ಶುರುವಾದಾಗ ಯೋಗದ ನಾಲ್ಕು ಮಾರ್ಗಗಳು ಅಸ್ತಿತ್ವದಲ್ಲಿದ್ದವು. ಆದರೆ ನಂತರದ ದಿನಗಳಲ್ಲಿ, ಅವುಗಳಲ್ಲಿ ಯಾವುದಾದರೂ ಒಂದು ಮಾರ್ಗವನ್ನು ಮಾತ್ರ ಆಯಾ ಸಂದರ್ಭಕ್ಕನುಗುಣವಾಗಿ ಬಳಸಲಾಗುತ್ತಿದೆ.

English summary
Internationa Yoga Week 2020 Will Be Held From March 1 To 7 All over the World. Especially Rishikesh Which is Considered the Birth Place of Yoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X