ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಾಷ್ಟ್ರೀಯ ಯೋಗದಿನ: ಸಂಭಾವ್ಯ ಐದು ನಗರಗಳಲ್ಲಿ ಮೋದಿ ಭಾಗಿಯಾಗುವುದು ಎಲ್ಲಿ?

|
Google Oneindia Kannada News

ನವದೆಹಲಿ, ಜೂನ್ 2: ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಜೂನ್ 21ರಂದು ಆರಂಭವಾದ 'ಅಂತರಾಷ್ಟ್ರೀಯ ಯೋಗ ದಿನ', ವರ್ಷದಿಂದ ವರ್ಷಕ್ಕೆ ದೊಡ್ದಮಟ್ಟದಲ್ಲಿ ಬೆಳೆಯುತ್ತಲೇ ಇದೆ.

ಪ್ರಧಾನಿ ಮೋದಿ ಭಾಗವಹಿಸುವ ಮುಖ್ಯ ಕಾರ್ಯಕ್ರಮ ಆಯೋಜಿಸಲು, ಐದು ನಗರಗಳ ಪಟ್ಟಿಯನ್ನು ಪ್ರಧಾನಮಂತ್ರಿ ಕಾರ್ಯಾಲಯ ಅಂತಿಮಗೊಳಿಸಿದೆ. ಐದರಲ್ಲಿ ಒಂದನ್ನು ಪಿಎಂ ಕಾರ್ಯಾಲಯವೇ ಅಂತಿಮಗೊಳಿಸಲಿದೆ.

ಯೋಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಮೋದಿ: ಕಾಂಗ್ರೆಸ್ಯೋಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಮೋದಿ: ಕಾಂಗ್ರೆಸ್

2015ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಮೊದಲ ಯೋಗದಿನದಂದು 84 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷ. 2018ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಯೋಗಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

International Yoga Day, PMO selected five cities, where Modi participating

2015ರಲ್ಲಿ ನವದೆಹಲಿ, 2016ರಲ್ಲಿ ಚಂಡೀಗಢ, 2017ರಲ್ಲಿ ಲಕ್ನೋ ಮತ್ತು 2018ರಲ್ಲಿ ಡೆಹ್ರಾಡೂನ್ ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾರೆ ಮೈಸೂರಿನ 1.5 ಲಕ್ಷ ಯೋಗಪಟುಗಳು ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾರೆ ಮೈಸೂರಿನ 1.5 ಲಕ್ಷ ಯೋಗಪಟುಗಳು

ಈ ಬಾರಿಯ ಅಂತರಾಷ್ಟ್ರೀಯ ಯೋಗದಿನದ ಪ್ರಧಾನ ಕಾರ್ಯಕ್ರಮ ಆಯೋಜಿಸಲು, ಪ್ರಧಾನಿ ಕಾರ್ಯಾಲಯ ಈ ಐದು ನಗರವನ್ನು ಆಯ್ಕೆಮಾಡಿದೆ. ಅವು ಇಂತಿವೆ:

1. ರಾಜಧಾನಿ ನವದೆಹಲಿ
2. ಮೈಸೂರು, ಕರ್ನಾಟಕ
3. ಶಿಮ್ಲಾ, ಹಿಮಾಚಲ ಪ್ರದೇಶ
4. ಅಹಮದಾಬಾದ್, ಗುಜರಾತ್
5. ರಾಂಚಿ, ಜಾರ್ಖಂಡ

English summary
International Yoga Day on June 21. Prime Minister Office selected five cities including Mysuru, where Narendra Modi participating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X