• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತರಹೇವಾರಿ ಭಂಗಿಯಲ್ಲಿ ನಮ್ಮ ನಾಯಕರ ಯೋಗಾವತಾರ!

|

ಲಕ್ನೋ, ಜೂನ್ 21: ಉತ್ತರ ಪ್ರದೇಶದಲ್ಲಿ ಒಂದರ ಮೇಲೊಂದರಂತೆ ಬಂದೆರಗುತ್ತಿರುವ ಸಮಸ್ಯೆಗಳು, ಉಪಚುನಾವಣೆಗಳ ಸೋಲು ಇವೆಲ್ಲ ಸೇರಿ ಯೋಗಿ ಆದಿತ್ಯನಾಥರನ್ನು ಮಕಾಡೆ ಮಲಗಿಸಿವೆಯಾ...? ಛೆ ಛೆ ಇಲ್ಲ, ಇದು ಅದಕ್ಕಲ್ಲ! ಅಂತಾರಾಷ್ಟ್ರೀಯ ಯೋಗದಿನಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಪೋಸು ಇದು ಅಷ್ಟೆ!

ವಯಸ್ಸು, ಹುದ್ದೆ, ಆಯಾಸ ಎಲ್ಲವನ್ನೂ ಮರೆತು ಇಂದು ಬೆಳ್ಳಂಬೆಳಗ್ಗೆ ಹಲವು ರಾಜಕಾರಣಿಗಳು ಯೋಗ ದಿನಕ್ಕೆ ಶುಭಕೋರಿದ್ದು, ತಾವೂ ಯೋಗಾಸನಗಳನ್ನು ಮಾಡುವ ಮೂಲಕ!

ಯೋಗ-ಯಾಗ: ಮೋದಿ ಸೇರಿದಂತೆ ಗಣ್ಯರ ಯೋಗಾಚರಣೆ ವಿಡಿಯೋ

ಇಂದು ವಿಶ್ವದಾದ್ಯಂತ ಯೋಗ ದಿನವನ್ನೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಯೋಗಾಭ್ಯಾಸದಲ್ಲಿ ಅಪರೂಪದ ಚಿತ್ರಗಳು ಇಲ್ಲಿವೆ.

ಮಕಾಡೆ ಮಲಗಿದ ಯೋಗಿ ಆದಿತ್ಯನಾಥ್!

ಮಕಾಡೆ ಮಲಗಿದ ಯೋಗಿ ಆದಿತ್ಯನಾಥ್!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದ ರಾಜಭವನದಲ್ಲಿ ನಡೆದ ನಾಲ್ಕನೇ ಯೋಗ ದಿನಾಚರಣೆಯಲ್ಲಿ ಯೋಗಾಸನ ಮಾಡಿ, ಪೋಸ್ ಕೊಟ್ಟಿದ್ದು ಹೀಗೆ!

ಪಾಕ್ ಸವಾಲಿಗೆ ಸೆಡ್ಡು ಹೊಡೆಯೋಕೆ ರೆಡಿ!

ಪಾಕ್ ಸವಾಲಿಗೆ ಸೆಡ್ಡು ಹೊಡೆಯೋಕೆ ರೆಡಿ!

ಗಡಿಯಲ್ಲಿ ಒಂದಿಲ್ಲೊಂದು ಸೈನಿಕರನ್ನು ಅಪಹರಿಸಿ, ಕೊಲ್ಲುತ್ತಿರವ ಭಯೋತ್ಪಾದಕರಿಗೆ, ಕದನ ವಿರಾಮ ಉಲ್ಲಂಘಿಸಿ ದಿನೇ ದಿನೇ ಶಾಂತಿ ಕದಡುತ್ತಿರುವ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯೋಕೆ ಸಿದ್ದ ಎನ್ನುತ್ತಿದ್ದಾರಾ ಗೃಹ ಸಚಿವ ರಾಜನಾಥ್ ಸಿಂಗ್! ಲಕ್ನೋದಲ್ಲಿ ಯೋಗ ದಿನಾಚರಣೆ ಆಚರಿಸಿದ ರಾಜನಾಥ್ ಸಿಂಗ್ ರ ಅಪರೂಪದ ಭಂಗಿ ಇದು!

ಮೋದಿ ಚಿತ್ತ ಅನಂತದತ್ತ..!

ಮೋದಿ ಚಿತ್ತ ಅನಂತದತ್ತ..!

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಿತ್ತವನ್ನು ಅನಂತದತ್ತ ನೆಟ್ಟು ನಿಂತಿದ್ದೇಕೆ? ಯಾಕೂ ಇಲ್ಲ, ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಡೆಹ್ರಾಡೂನ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ ಇಲ್ಲಿ ನೆರೆದಿದ್ದ 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಯೋಗಾಸನ ಮಾಡಿದರು.

ಜಲಾಂತರ್ಗಾಮಿ ಮೇಲೆ ಯೋಗಾವತಾರ!

ಜಲಾಂತರ್ಗಾಮಿ ಮೇಲೆ ಯೋಗಾವತಾರ!

ಮುಂಬೈಯ ನೌಕಾನೆಲೆಯ ಜಲಾಂತರ್ಗಾಮಿ ಐಎನ್ ಎಸ್ ಸಿಂಧುರತ್ನದ ಮೇಲೆ ನೌಸೇನೆಯ ಸಿಬ್ಬಂದಿ ಯೋಗ ದಿನಾಚರಣೆ ಆಚರಿಸಿದರು. ಈ ಅಮೋಘ ಕಾರ್ಯಕ್ರಮವನ್ನು ಸಾವಿರಾರು ಜನ ಕಣ್ತುಂಬಿಕೊಂಡರು.

ರೈಲ್ವೇ ಸಚಿವರ ಯೋಗಾಯೋಗ!

ರೈಲ್ವೇ ಸಚಿವರ ಯೋಗಾಯೋಗ!

ಇಉತ್ತರ ಪ್ರದೇಶದ ನೋಯ್ಡಾದಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಯೋಗ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ನೂರಾರು ಜನ ಪಾಲ್ಗೊಂಡು ಯೋಗಾಸನ ಮಾಡಿದ್ದು ವಿಶೇಷವಾಗಿತ್ತು.

English summary
The fourth edition of International Yoga Day is celebrating across the globe today(June 21). To celebrate the day, various Yoga training programmes, camps, seminars, workshops have been organised across the world at big levels. Here are pictures of Politicians and celebrities of India, celebrating Yoga Day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X