ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ವಿಕಲಚೇತನ ದಿನ: ವಿಕಲತೆ ಕೊರತೆಯಲ್ಲ ಸ್ಪೂರ್ತಿ!

|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್.03: ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ನೋವು, ಸಂಕಟ, ಹತಾಶೆ ಅನುಭವಿಸುತ್ತಿದ್ದ ಸಮೂಹವದು. ಎಲ್ಲರಂತೆ ಬದುಕು ಸಾಗಿಸಲು ಆಗುತ್ತಿಲ್ಲವಲ್ಲ ಎಂಬ ನೋವಿನಲ್ಲಿ ದಿನ ಕಳೆಯುವ ಆ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ನಿತ್ಯ ಕೊರಗುವ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.

ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ ಇವರ ಜೀವನವನ್ನು ಕಟ್ಟಿಕೊಡಬೇಕಿದೆ. ಸಾಮಾನ್ಯ ಜನರಿಗಿಂತ ಇವರೇನೂ ಭಿನ್ನರಲ್ಲ. ಸಾಧನೆಯ ಹಾದಿಯಲ್ಲಿ ಇವರಿಗೆ ತಮ್ಮ ವೈಕಲ್ಯ ಎಂದಿಗೂ ಅಡ್ಡಿ ಆಗುವುದಿಲ್ಲ. ಆದರೆ, ಇವರಲ್ಲಿ ಮನೋಬಲವನ್ನು ಹೆಚ್ಚಿಸಬೇಕಿದೆ.

ವಿಕಲಚೇತನ ಮಹಿಳೆಯ ಸ್ವಾವಲಂಬಿ ಬದುಕಿಗೆ ಕುಮಾರಸ್ವಾಮಿ ಸಹಾಯವಿಕಲಚೇತನ ಮಹಿಳೆಯ ಸ್ವಾವಲಂಬಿ ಬದುಕಿಗೆ ಕುಮಾರಸ್ವಾಮಿ ಸಹಾಯ

ವಿಕಲಚೇತನರಲ್ಲಿ ಜೀವನೋತ್ಸಾಹವನ್ನು ಬೆಳಸಲು ಎಲ್ಲರೂ ಕೈ ಜೋಡಿಸಬೇಕಿದೆ. ಇದು ಕೇವಲ ಭಾರತವಷ್ಟೇ ಅಲ್ಲ. ಇಡೀ ವಿಶ್ವವೇ ವಿಕಲಚೇತರನ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ, ಕಾನೂನುಗಳನ್ನು ಜಾರಿಗೊಳಿಸಿದೆ. ಈ ಕುರಿತು ತಿಳಿದುಕೊಳ್ಳುವ ಸಮಯ ಬಂದಿದೆ. ಇಂದು ಅಂತಾರಾಷ್ಟ್ರೀಯ ವಿಕಲಚೇತರನ ದಿನವನ್ನು ಆಚರಿಸುತ್ತಿರುವ ಉದ್ದೇಶ ಎಲ್ಲರಿಗೂ ತಲುಪಬೇಕಿದೆ.

ಇದೊಂದು ವರ್ಷ ವಿಕಲಚೇತನರಿಗೆ ಮೀಸಲು

ಇದೊಂದು ವರ್ಷ ವಿಕಲಚೇತನರಿಗೆ ಮೀಸಲು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1981ರ ವರ್ಷವನ್ನು ವಿಕಲಚೇತನರ ವರ್ಷ ಎಂದು ಘೋಷಣೆಯನ್ನು ಹೊರಡಿಸಲಾಯಿತು. ಈ ಸಾಲಿನಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು, ಸಾರ್ವಜನಿಕ ಜೀವನದಲ್ಲಿ ಸಮಾನ ಅವಕಾಶ ಕಲ್ಪಿಸುವ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚನೆ ನೀಡಲಾಯಿತು.

 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊರಬಿತ್ತು ಘೋಷಣೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊರಬಿತ್ತು ಘೋಷಣೆ

1992ರಂದು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಡಿಸೆಂಬರ್.03ರನ್ನು ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ವಿಕಲಚೇತನರನ್ನು ಸಾಮಾನ್ಯರಂತೆ ಒಪ್ಪಿಕೊಳ್ಳುವುದು, ಸಹಾನುಭೂತಿ ತೋರುವುದು, ಬೆಂಬಲಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಬಗ್ಗೆ ಈ ದಿನ ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ವಿಕಲಚೇತನರ ಅಹವಾಲು: ಸ್ಥಳದಲ್ಲೇ ಪರಿಹಾರ ನೀಡಿದ ಕುಮಾರಸ್ವಾಮಿವಿಕಲಚೇತನರ ಅಹವಾಲು: ಸ್ಥಳದಲ್ಲೇ ಪರಿಹಾರ ನೀಡಿದ ಕುಮಾರಸ್ವಾಮಿ

ವಿಕಲಚೇತನರ ಅಭಿವೃದ್ಧಿಗೆ ಕಾರ್ಯಯೋಜನೆ

ವಿಕಲಚೇತನರ ಅಭಿವೃದ್ಧಿಗೆ ಕಾರ್ಯಯೋಜನೆ

ಹೌದು, 1992 ರಿಂದ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಆರಂಭಿಸಲಾಗಿತ್ತು. ಆದರೆ, ಇದಕ್ಕೂ ಮೊದಲೇ ಅಂದರೆ 1983 ರಿಂದ 1992ರ ಅವಧಿಯನ್ನು ವಿಶ್ವಸಂಸ್ಥೆಯು ವಿಕಲಚೇತನರ ದಶಕ ಎಂದು ಘೋಷಣೆ ಮಾಡಿತು. ಈ ಅವಧಿಯಲ್ಲಿ ವಿಕಲಚೇತನರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು, ಕಾರ್ಯಯೋಜನೆಗಳನ್ನು ರೂಪಿಸುವ ಬಗ್ಗೆ ವಿಶ್ವದ ಎಲ್ಲ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೂಚಿಸಲಾಗಿತ್ತು.

ವಿಕಲಚೇತನರಿಗೆ ಸರ್ಕಾರಿ ಉದ್ಯೋಗ ಕಡ್ಡಾಯ

ವಿಕಲಚೇತನರಿಗೆ ಸರ್ಕಾರಿ ಉದ್ಯೋಗ ಕಡ್ಡಾಯ

ವಿಶ್ವಸಂಸ್ಥೆಯ ಸೂಚನೆ ನಂತರ ರಾಷ್ಟ್ರದ ಬಹುತೇಕ ಸರ್ಕಾರಗಳು ವಿಕಲಚೇತನರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದವು. ಅದರಲ್ಲೂ ಇಂಗ್ಲೆಂಡ್ ನಲ್ಲಿ ಕಳೆದ 2012 ರಿಂದ ದೇಶದ ಎಲ್ಲ ವಿಕಲಚೇತನರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತು. ಆ ಮೂಲಕ ಅವರ ಜೀವನಸ್ತರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿತು. ವಿಶ್ವಸಂಸ್ಥೆಯ 27/2 ಕಲಂನ ಪ್ರಕಾರ ಕಡ್ಡಾಯ ಸರ್ಕಾರಿ ಉದ್ಯೋಗವು ವಿಕಲಚೇತನರ ಮೂಲಭೂತ ಹಕ್ಕು ಎಂದು ಹೇಳುತ್ತದೆ.

ಅಸಹಾಯಕರಲ್ಲಿ ನವಚೈತನ್ಯ ತುಂಬುವ ಕಾರ್ಯ

ಅಸಹಾಯಕರಲ್ಲಿ ನವಚೈತನ್ಯ ತುಂಬುವ ಕಾರ್ಯ

2019ರಲ್ಲಿ ಅಂದರೆ ಈ ಸಾಲಿನಲ್ಲಿ ಆಚರಿಸುತ್ತಿರುವ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆಗೆ ಒಂದು ಮುಖ್ಯಧ್ಯೇಯವಿದೆ. 2030ರ ವೇಳೆಗೆ ವಿಕಲಚೇತನರು ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕ ಅವಕಾಶ ಕಲ್ಪಿಸುವುದು. 11 ವರ್ಷಗಳಲ್ಲಿ ವಿಕಲಚೇತನರ ಸಬಲೀಕರಣದ ಉದ್ದೇಶವನ್ನು ಹೊಂದಲಾಗಿದೆ. ಸುಸ್ಥಿರ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ಸಮಾನತೆ ಹಾಗೂ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಉದ್ದೇಶವನ್ನು ಈ ವರ್ಷದಲ್ಲಿ ಹಾಕಿಕೊಳ್ಳಲಾಗಿದೆ.

English summary
Aim, History, And Theme of International Day of Persons with Disabilities 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X