ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕಾಫಿ ದಿನ... ಕಾಫಿ ಎಂಬ ಅಮೃತ ನಿಮಗೆಷ್ಟು ಇಷ್ಟ?!

|
Google Oneindia Kannada News

'ಯಾಕೋ ವಿಪರೀತ ತಲೆ ನೋವಮ್ಮಾ... ಸ್ವಲ್ಪ ಕಾಫಿ ಮಾಡ್ಕೊಡ್ತೀಯಾ...' ಅಂತ ಸುಳ್ಳು ಸುಳ್ಳೇ ತಲೆ ನೋವು ಭರಿಸಿಕೊಂಡು ಕಾಫಿ ಕುಡಿಯುತ್ತಿದ್ದ ಕಾಲವೊಂದಿತ್ತು. ಕಾಫಿ ಕುಡಿದರೆ ದೇಹದ ಉಷ್ಣತೆ ಹೆಚ್ಚುತ್ತೆ ಎಂಬ ಅಮ್ಮನ ವರಾತದಿಂದಾಗಿ ಕಾಫಿಯಿಂದ ವಂಚಿತರಾಗಿದ್ದ ನಮಗೆ, ಅದು ಸಿಗುತ್ತಿದ್ದುದೇ ಈ ತಲೆನೋವು ಬಂದ ದಿನಗಳಲ್ಲಿ!

ಕೊನೆ ಕೊನೆಗೆ 'ಕಾಫಿ ಕುಡಿಯುವ ಸಲುವಾಗಿ ಬಂದ ಸುಳ್ಳು ತಲೆ ನೋವೇ ಇದು' ಎಂಬುದನ್ನು ಅದ್ಹೇಗೋ ತನಿಖೆ ಮಾಡಿದ್ದ ಅಮ್ಮ, ತಲೆನೋವು ಬಂದರೆ ಅದ್ಯಾವುದೋ ಮನೆಮದ್ದಿನ ಹೊಸ ಕಷಾಯ ಹುಡುಕಿಕೊಂಡುಬಿಟ್ಟಳು! ಅಲ್ಲಿಗೆ ಕಾಫಿ ಕತೆ ಗೋವಿಂದ!

ಸುರಿವ ಮಳೆ, ಬೆಚ್ಚನೆಯ ಕಾಫಿ ಮಲೆನಾಡಿಗರ ಜೀವಾಳಸುರಿವ ಮಳೆ, ಬೆಚ್ಚನೆಯ ಕಾಫಿ ಮಲೆನಾಡಿಗರ ಜೀವಾಳ

ಅಷ್ಟಕ್ಕೂ ಈ ಕಾಫಿ ಕತೆ ಈಗ ನೆನಪಾಗಿದ್ದೇಕೆ ಅಂದ್ರೆ, ಇಂದು ಅಂತಾರಾಷ್ಟ್ರೀಯ ಕಾಫಿ ದಿನವಂತೆ!

ಕಾಫಿಯ ಕುರಿತು ಪ್ರಚಾರ ಮಾಡುವ ಸಲುವಾಗಿ ಮತ್ತು ಕಾಫಿ ಎಂಬ ಪಾನಿಯದ ಮಹತ್ವವನ್ನು ಸಾರಿ ಹೇಳುವ ಸಲುವಾಗಿ ಅಕ್ಟೋಬರ್ 1 ಅನ್ನು ಪ್ರತಿವರ್ಷ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಅಮೋಘ ರುಚಿಯ ಕಾಫಿಯ ಉಪಯೋಗವೇನು?

ಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿ

ಟ್ವಿಟ್ಟರ್ ನಲ್ಲೂ #internationalcoffeeday ಟಾಪ್ ಟ್ರೆಂಡಿಂಗ್ ಆಗಿದ್ದು, ಲಕ್ಷಾಂತರ ಜನ ಈ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಕಾಫಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿದಿನವೂ ಕಾಫಿ ದಿನ!

"ಓಹ್, ಇಂದು ಅಂತಾರಾಷ್ಟ್ರೀಯ ಕಾಫಿ ದಿನವೇ? ನಾನು ನಿನ್ನೆ ಅಂತರಾಷ್ಟ್ರೀಯ ಕಾಫಿ ದಿನ ಎಂದುಕೊಂಡೆ, ಅಲ್ಲ, ಮೊನ್ನೆ ಎಂದುಕೊಂಡೆ, ಆಚೆಮೊನ್ನೆ ಎಂದುಕೊಂಡೆ... ನಾಳೆ ಎಂದುಕೊಂಡೆ, ನಾಡಿದ್ದು ಎಂದುಕೊಂಡೆ...' ಎಂದು ಪ್ರತಿದಿನವೂ ಕಾಫಿದಿನವೇ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ ಜೆ ಹೋಲ್ಡರ್.

Array

ರಿಲ್ಯಾಕ್ಸ್ ಮತ್ತು ಎಂಜಾಯ್!

'ಅಂತಾರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು. ಕಾಫಿ ನಮ್ಮ ಆರೋಗ್ಯವನ್ನು ಕಾಪಾಡುತ್ತಿದೆ. ಆರಾಮವಾಗಿ ಕುಳಿತುಕೊಂಡು ದಿನ ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯಿರಿ' ಎಂದಿದ್ದಾರೆ ಜೆನ್ನಿ ಬ್ರಾಕಿಸ್.

ಸ್ಟಾರ್ ಬಕ್ಸ್ ಜತೆ ಡೀಲ್ ಕುದುರಿಸಿದ ಸ್ವಿಸ್ ದೈತ್ಯ 'ನೆಸ್ಲೆ'ಸ್ಟಾರ್ ಬಕ್ಸ್ ಜತೆ ಡೀಲ್ ಕುದುರಿಸಿದ ಸ್ವಿಸ್ ದೈತ್ಯ 'ನೆಸ್ಲೆ'

ಕಾಫಿಯ ಮಹತ್ವ

ಕಾಫಿಯನ್ನು ಕುಡಿಯುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಾಫಿಯ ಕುರಿತು ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ ಎಂದು ಕಾಫಿಯ ಕುರಿತ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಅನ್ಮೋಲ್.

Array

ಕಾಫಿ ಅಂದ್ರೆ ಅಮೃತ

ನನಗಂತೂ ಕಾಫಿ ಅಂದ್ರೆ ಅಮೃತವಿದ್ದಂತೆ. ನಾನು ದುಃಖದಲ್ಲಿದ್ದಾಗ ಅದು ನನಗೆ ಖುಷಿ ಕೊಡುತ್ತದೆ, ನಾನು ಸೋಮಾರಿತನದಿಂದ ಮಲಗಿದ್ದಾಗ, ಅದು ಉಲ್ಲಾಸ ತುಂಬಿ ಎಬ್ಬಿಸುತ್ತದೆ, ನಾನು ಬೇಸರದಲ್ಲಿದ್ದಾಗ ನಿದ್ರಿಸುವಂತೆ ಮಾಡುತ್ತದೆ. ಕಾಫಿಗೆ ಮಾಂತ್ರಿಕ ಶಕ್ತಿಯಿದೆ. ಐ ಲವ್ ಕಾಫಿ ಎಂದಿದ್ದಾರೆ ಮೀನಾಕ್ಷಿ.

ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರುಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು

English summary
International coffee day is an occasion that used to promote and celebrate coffee as a drink. People of the world celebrate Oct 1st as international coffee day every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X