• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವಿಟ್ಟರ್‌ನಲ್ಲಿ ಮೋದಿ ಗುಣಗಾನ: #ThankYouNamo ಟ್ರೆಂಡಿಂಗ್

|
   Union Budget 2019:#ThankYouNamo ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ | ಎಲ್ಲೆಲ್ಲೂ ಮೋದಿ ಗುಣಗಾನ|Oneindia Kannada

   ನವದೆಹಲಿ, ಫೆಬ್ರವರಿ 2: ಶುಕ್ರವಾರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗುತ್ತಲೇ ಅದರ ಪರ-ವಿರೋಧದ ಚರ್ಚೆಗಳು ತೀವ್ರವಾಗಿ ನಡೆದಿವೆ.

   ಮೋದಿ ಸರ್ಕಾರದ ಜನಪರ ಬಜೆಟ್ ಇದು ಎಂದು ಅವರ ಅಭಿಮಾನಿಗಳು ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ. ಆದರೆ, ಈ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂಥದ್ದು ಏನೂ ಇಲ್ಲ. ರೈತರಿಗೆ ದಿನಕ್ಕೆ ಕೇವಲ 17 ರೂಪಾಯಿ ಕೊಡುವ ಯೋಜನೆ ಪ್ರಕಟಿಸಿದೆ ಎಂದು ವಿರೋಧಪಕ್ಷಗಳು ಟೀಕಿಸಿವೆ.

   ಮಧ್ಯಮವರ್ಗ, ಕೃಷಿ ಹಾಗೂ ಕಾರ್ಮಿಕರಿಗೆ ಮಧ್ಯಂತರ ಹಣಕಾಸು ಸಚಿವ ಪಿಯೂಷ್ ಗೋಯಲ್ ಮಂಡಿಸಿದ ಬಜೆಟ್ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಎನ್ನುವುದು ಬಿಜೆಪಿ ಸರ್ಕಾರದ ಅನುಯಾಯಿಗಳ ವಾದ.

   2030ರ ವೇಳೆಗೆ ಭಾರತ ಹೇಗಿರಬೇಕು? ಮೋದಿ ಸರ್ಕಾರದ ಟಾಪ್ 10 ವಿಷನ್‍ಗಳೇನು ಗೊತ್ತೆ?

   ಅದರಲ್ಲಿಯೂ ಅದಾಯ ತೆರಿಗೆ ವಿನಾಯಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ವಿನಾಯಿತಿಯನ್ನು ದುಪ್ಪಟ್ಟು ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಈ ಅನೇಕ ಕಾರಣಗಳಿಂದ ಬಜೆಟ್ ಜನಸಾಮಾನ್ಯರ ಪರ ಎಂಬ ಅಭಿಪ್ರಾಯ ಮಂಡಿಸಲಾಗುತ್ತಿದೆ.

   ಉತ್ತಮ ಬಜೆಟ್ ನೀಡಿದ ಮೋದಿ ಅವರಿಗೆ ಟ್ವಿಟ್ಟರ್‌ನಲ್ಲಿ ಧನ್ಯವಾದ ಸಲ್ಲಿಸಲಾಗುತ್ತಿದ್ದು, #ThankYouNamo ಹ್ಯಾಷ್ ಟ್ಯಾಗ್ ಶನಿವಾರದ ಟಾಪ್ ಟ್ರೆಂಡಿಂಗ್‌ನಲ್ಲಿದೆ.

   ಎರಡೂ ವರ್ಗಕ್ಕೆ ಅನುಕೂಲ

   ಬಜೆಟ್‌ನಿಂದ ಮಧ್ಯಮವರ್ಗ ಮತ್ತು ಬಡವರ್ಗ ಎರಡಕ್ಕೂ ಪ್ರಯೋಜನವಾಗಿದೆ. ಈಕ್ವಿಟಿಗಳು ದೊಡ್ಡ ಜಿಗಿತ ಕಂಡಿದ್ದರೂ ತೆರಿಗೆ ಪಾವತಿದಾರರ ಸಂಖ್ಯೆಯೂ ಹೆಚ್ಚಳವಾಗಲಿದೆ ಎಂದು ಅನುರಾಗ್ ಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಬಜೆಟ್ ಮಂಡನೆ ಬಳಿಕ ಪಿಯೂಷ್ ನೀಡಿದ ವಿವರಣೆಗಳೇನು?

   ಆಯುಷ್ಮಾನ್ ಭಾರತ್ ಮೈಲುಗಲ್ಲು

   ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಮಹತ್ವದ ಮೈಲುಗಲ್ಲು ಸಾಧಿಸಿದೆ. ಕೇವಲ 4 ತಿಂಗಳಿನಲ್ಲಿ 10 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ದೃಷ್ಟಿಕೋನದ ನಾಯಕತ್ವ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದಗಳು ಎಂದು ದರ್ಶನ್ ರಾವೋಜಿ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಮತ್ತೆ ನೋಟು ರದ್ದು ಮಾಡ್ತೀರಾ ಮೋದಿ?: ಚಿದಂಬರಂ ಅಣಕ

   ಸ್ಫೂರ್ತಿದಾಯಕ ನಾಯಕತ್ವ

   ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ಸರ್ಕಾರ ನೈಜ ಒಳಗೊಳ್ಳುವ ಮತ್ತು ಜನಸ್ನೇಹಿ ಬಜೆಟ್‌ಅನ್ನು ಪ್ರಕಟಿಸಿದೆ. ಇದರಿಂದ ನಮ್ಮ ಸಮಾಜದ ಎಲ್ಲ ವರ್ಗದ, ಮುಖ್ಯವಾಗಿ ನಮ್ಮ ದೇಶದ ಬೆನ್ನುಮೂಳೆಯಾಗಿರುವ ರೈತರು, ಮಧ್ಯಮ ವರ್ಗ ಮತ್ತು ಅಸಂಘಟಿತ ವಲಯದ ಕೆಲಸಗಾರರಿಗೆ ಲಾಭದಾಯಕವಾಗಿದೆ ಎಂದು ಬಜೆಟ್ ಮಂಡನೆ ಮಾಡಿದ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

   ಕಾಂಗ್ರೆಸ್ಸಿಗರಿಗೆ ಪ್ರಶ್ನೆ

   ರಾವುಲ್ ನಲ್ಲಿ ದೇಶದ ಭವಿಷ್ಯ ಕಾಣುವ ಖಾಂಗ್ರೆಸ್ಸಿಗರೇ ನಿಮಗೊಂದು ಪ್ರಶ್ನೆ, ಒಂದು ಬಾಳೆ ಹಣ್ಣಿಗೆ ಎರಡು ರೂಪಾಯಿ ಆದರೆ, ಎರಡು ರೂಪಾಯಿಗೆ ಎಷ್ಟು ಬಾಳೆ ಹಣ್ಣು ಬರುತ್ತದೆ.? ಎಂದು ದರ್ಶನ್ ಎಸ್‌ಪಿ ಎಂಬುವವರು ಲೇವಡಿಯ ಟ್ವೀಟ್ ಮಾಡಿದ್ದಾರೆ.

   ಜೋಶ್ ಹೇಗಿದೆ

   ಬಜೆಟ್ ಜೋಶ್ ಹೇಗಿದೆ? ಎಂದು ಹೆಮೀಶಾ ಥಕ್ಕರ್ ಎಂಬುವವರು 'ಉರಿ' ಸಿನಿಮಾದ ಸಂಭಾಷಣೆ ರೀತಿಯಲ್ಲಿ ಸೈನಿಕರು, ರೈತರು, ಮಧ್ಯಮವರ್ಗ ಮತ್ತು ಕಾರ್ಮಿಕರನ್ನು ಮೋದಿ ಪ್ರಶ್ನಿಸುವಂತೆ, ಅವರು 'ಹೈ ಸರ್' ಎಂದು ಪ್ರತಿಕ್ರಿಯಿಸುವಂತೆ ಬಜೆಟ್‌ಅನ್ನು ಕೊಂಡಾಡಿದ್ದಾರೆ.

   ಮನರಂಜನಾ ಉದ್ಯಮಕ್ಕೆ ಕಾಣಿಕೆ

   ಮನರಂಜನಾ ಉದ್ಯಮ ನಾವು ಬದಕುವ ಸಮಾಜದ ಪ್ರತಿಫಲನ ಮಾತ್ರವಲ್ಲ, ಅದು ಆರ್ಥಿಕತೆಗೆ ಪ್ರಮುಖ ಕಾಣಿಕೆದಾರವೂ ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿರುವ ಯೋಜನೆ ಉದ್ಯಮವನ್ನು ದೀರ್ಘಕಾಲ ಬಲಗೊಳಿಸುವುದರಲ್ಲಿ ನೆರವಾಗಲಿದೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

   ಮಹಿಳಾ ಅಭಿವೃದ್ಧಿ

   ಮಹಿಳೆಯರ ಅಭಿವೃದ್ಧಿಯಿಂದ ಮಹಿಳಾ ನಾಯಕತ್ವದ ಅಭಿವೃದ್ಧಿವರೆಗೆ ನವ ಭಾರತವು ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಿಗಬೇಕಾಗಿದ್ದನ್ನು ಒದಗಿಸಲಿದೆ. ಇಂದು ಭಾರತಮಾತೆ ನಗುತ್ತಿರಬಹುದು. ನಿಸ್ಸಂಶಯವಾಗಿ ಈ ಬಜೆಟ್ ಇತಿಹಾಸದಲ್ಲಿ 'ಭಾರತಕ್ಕಾಗಿ ಬಜೆಟ್' ಎಂದು ನಮೂದಾಗಲಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Twitterians praised Narendra Modi government Interim Budget 2019 as it will benefitting farmers, laboures, middle class and others. #ThankYouModi hash tag is trending in Twitter.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more