ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತೀಶ್-ಲಾಲೂ ಮೈತ್ರಿಗೆ ಭಂಗ ತಂದ ತೇಜಸ್ವಿ ಬಗ್ಗೆ ಓದಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 26: ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ 178 ಸ್ಥಾನಗಳನ್ನು ಗಳಿಸಿ, ಜೆಡಿಯು-ಆರ್ ಜೆಡಿ- ಕಾಂಗ್ರೆಸ್ ಮಹಾಮೈತ್ರಿಕೂಟ ಭರ್ಜರಿ ವಿಜಯೋತ್ಸವ ಆಚರಿಸಿ ಎರಡು ವರ್ಷಗಳು ಕಳೆದಿವೆ. ಐದನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಅವರು ಲಾಲೂ ಪಡೆ ಕಿರಿಕಿರಿಯನ್ನು ಸಹಿಸಿಕೊಂಡು ರಾಜ್ಯಭಾರ ಮಾಡಿ ಸಾಕಾಗಿ ಹೊರ ಬಂದಿದ್ದಾರೆ. ಲಾಲೂ ಪುತ್ರ ತೇಜಸ್ವಿ ಯಾದವ್ ಇಲ್ಲಿ ನೆಪ ಮಾತ್ರ.

ಸತ್ಯ, ಧರ್ಮ, ನಿಷ್ಠೆಯಿಂದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಅವರು ಅನಿವಾರ್ಯವಾಗಿ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಮಕ್ಕಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಯಿತು. 80 ಸ್ಥಾನ ಗೆದ್ದಿದ್ದ ಆರ್ ಜೆ ಡಿಯಿಂದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಸಂಪುಟ ಸೇರಿದರು.

26ವರ್ಷ ವಯಸ್ಸಿಗೆ ಬಿಹಾರದ ಉಪ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು, ನನ್ನ ಮಗ ರಾಜೀನಾಮೆ ನೀಡುವುದಿಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದರು. ಇದಾದ ಬಳಿಕ, ನಿತೀಶ್ ಕುಮಾರ್ ಅವರ ರಾಜೀನಾಮೆ ಪ್ರಸಂಘ ನಡೆದಿದೆ. ಇಷ್ಟೆಲ್ಲಕ್ಕೂ ಕಾರಣರಾದ ತೇಜಸ್ವಿ ಬಗ್ಗೆ ಕುತೂಹಲಕಾರಿ ಅಂಶಗಳು ಮುಂದಿವೆ..

ಕ್ರಿಕೆಟರ್ ಕೂಡಾ ಹೌದು

ಕ್ರಿಕೆಟರ್ ಕೂಡಾ ಹೌದು

ಕೇವಲ 9ನೇ ತರಗತಿ ತನಕ ಓದಿರುವ ತೇಜಸ್ವಿ ಅವರು ಈಗ ಬಿಹಾರದ ಹಾಲಿ ಉಪ ಮುಖ್ಯಮಂತ್ರಿ, ಹೊಸ ಮುಖ್ಯಮಂತ್ರಿ/ ಸರ್ಕಾರ ನೇಮಕವಾಗುವ ತನಕ ತೇಜಸ್ವಿಯೇ ಬಿಹಾರಕ್ಕೆ ದಿಕ್ಕು.

ತೇಜಸ್ವಿ ಮಾಜಿ ಕ್ರಿಕೆಟರ್ ಕೂಡಾ ಹೌದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ನಾಲ್ಕು ವರ್ಷಗಳ ಇದ್ದರು. ಮೈದಾನದಲ್ಲಿ ನೀರು ಹೊತ್ತುಕೊಂಡು ಹೋಗಿ ಬರುವುದಷ್ಟೇ ನನ್ನ ಮಗನ ಕೆಲ್ಸ ಎಂದು ಲಾಲೂ ಕೂಡಾ ಮೂದಲಿಸಿದ್ದರು. ತೇಜಸ್ವಿಗೆ ಬ್ಯಾಟ್ ಬೀಸುವ ಅವಕಾಶವೇ ಸಿಗಲಿಲ್ಲ.
ತೇಜಸ್ವಿ ಮೇಲೆ ಕೇಸಿದೆ

ತೇಜಸ್ವಿ ಮೇಲೆ ಕೇಸಿದೆ

ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ಡಿ ದೇವಿ, ಇವರಿಬ್ಬರ ಪುತ್ರ ತೇಜಸ್ವಿಯಾದವ್, ಸರಳ ಗುಪ್ತಾ ಅವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 420ಕೇಸು ದಾಖಲಿಸಿಕೊಂಡು ಸಿಬಿಐ ತನಿಖೆ ನಡೆಸುತ್ತಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಮೇಲೂ ಸಂಪುಟದಲ್ಲಿ ತೇಜಸ್ವಿ ಮುಂದುವರೆದಿದ್ದಾರೆ.

ಯುವ ಡಿಸಿಎಂ ತೇಜಸ್ವಿ

ಯುವ ಡಿಸಿಎಂ ತೇಜಸ್ವಿ

2015ರಲ್ಲಿ ರಘೋಪುರ್ ಕ್ಷೇತ್ರದಿಂದ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ತೇಜಸ್ವಿ ಅವರು ಬಿಹಾರದ ಅಸೆಂಬ್ಲಿ ಪ್ರವೇಶಿದರು. 80 ಸ್ಥಾನ ಹೊಂದಿರುವ ಆರ್ ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಅವರು ಅನಿವಾರ್ಯವಾಗಿ ತೇಜಸ್ವಿ ಅವರನ್ನು ಸಂಪುಟ ಸಚಿವರಾಗಿ ಸೇರಿಸಿಕೊಂಡು ಉಪಮುಖ್ಯಮಂತ್ರಿ ಸ್ಥಾನ ನೀಡಿದರು. 26 ವರ್ಷಕ್ಕೆ ತೇಜಸ್ವಿ ಡಿಸಿಎಂ ಹುದ್ ಒಲಿದು ಬಂದಿತು.

ಶಾಸಕರಾಗಿ ನಂತರ ಡಿಸಿಎಂ

ಶಾಸಕರಾಗಿ ನಂತರ ಡಿಸಿಎಂ

ವೈಶಾಲಿ ಜಿಲ್ಲೆಯ ರಘೋಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ತೇಜಸ್ವಿ, ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿ, ಡಿಸಿಎಂ ಪಟ್ಟಕ್ಕೇರಿ ದಾಖಲೆ ಬರೆದರು. ಬಿಹಾರ ಅಸೆಂಬ್ಲಿಯ ಅತ್ಯಂತ ಕಿರಿಯ ಶಾಸಕರೂ ಹೌದು.
ಒಮ್ಮೆ ಮೂಲ ಸೌಕರ್ಯಗಳ ಬಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ವಾಟ್ಸಪ್ ನಂಬರ್ ಪ್ರಕಟಿಸಿದ್ದರು. ಸಾರ್ವಜನಿಕರು ಕುಂದು ಕೊರತೆಗಳನ್ನು ಚಿತ್ರ ಸಮೇತ ತಿಳಿಸಬಹುದಾಗಿತ್ತು. ಆದರೆ, ಆ ನಂಬರ್ ಗೆ 44 ಸಾವಿರ ಮದುವೆ ಪ್ರೊಪೊಸಲ್ ಬಂದಿದ್ದು ಸುಳ್ಳಲ್ಲ

English summary
Interesting Facts Lalu Prasad Yadav & Rabri Devi's son Tejashwi Yadav who was a former cricketer, Youngest MLA in current Bihar Assembly, Got elected as Deputy Chief Minister at the age of 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X