ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಭವಿಷ್ಯ ನಿಧಿ ಬಡ್ಡಿದರದ ಮೇಲೆ ತೆರಿಗೆ ಹೊರೆ

|
Google Oneindia Kannada News

ನವದೆಹಲಿ, ಫೆಬ್ರವರಿ 02: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಮಿನಿ ಬಜೆಟ್ ಮಂಡಿಸಿ ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಹಲವು ಸೌಲಭ್ಯಗಳನ್ನು ಕಾರ್ಮಿಕರು, ರೈತರು, ಮಹಿಳೆಯರಿಗೆ ಘೋಷಿಸಿದ್ದರು. ಆದರೆ, ಭವಿಷ್ಯನಿಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಲ್ಲಿ ಕೇಂದ್ರ ಬಜೆಟ್ ಭಾಷಣದಲ್ಲಿ ನಿರ್ಮಲಾ ಅವರು ಮಂಡಿಸಿಲ್ಲ, ಬದಲಿಗೆ ಬಡ್ಡಿದರದ ಮೇಲೆ ತೆರಿಗೆ ವಿಧಿಸಿದ್ದಾರೆ.

ನೌಕರರ ಭವಿಷ್ಯ ನಿಧಿ(ಇಪಿಎಫ್)ಯ ಮೊತ್ತದ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗಿದೆ. ವಾರ್ಷಿಕ 2.5 ಲಕ್ಷ ರು ಅಥವಾ ಅದಕ್ಕಿಂತ ಅಧಿಕ ಮೊತ್ತದ ಪಿಎಫ್ ದೇಣಿಗೆ ಮೊತ್ತಕ್ಕೆ ಬರುವ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಏಪ್ರಿಲ್ 1, 2021ರಿಂದ ಈ ನಿಯಮ ಜಾರಿಯಾಗುತ್ತಿದೆ ಎಂದು ಬಜೆಟ್ 2021ರ ಭಾಷಣದಲ್ಲಿ ನಿರ್ಮಲಾ ಅವರು ಪ್ರಸ್ತಾಪಿಸಿದರು.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

ವಾರ್ಷಿಕವಾಗಿ 2 ಲಕ್ಷಕ್ಕಿಂತ ಕಡಿಮೆ ಮೊತ್ತದ ಆದಾಯ ಹೊಂದಿರುವ ನೌಕರರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ವಾರ್ಷಿಕ 2.5 ಲಕ್ಷ ರುಗು ಅಧಿಕ ಮೊತ್ತದ ದೇಣಿಗೆ ನೀಡುವ ಉದ್ಯೋಗಿಯ ದೇಣಿಗೆ ಬಡ್ಡಿ ಮೇಲೆ ಮಾತ್ರ ತೆರಿಗೆ ಬೀಳಲಿದ್ದು, ಉದ್ಯೋಗದಾತರ ಕೊಡುಗೆಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Interest On Your PF Will Be Taxed If You Contribute More Than Rs 2.5 Lakh Annually

ಸ್ವಯಂ ಪ್ರೇರಿತ ಪಿಎಫ್(ವಿಪಿಎಫ್) ಮಾರ್ಗ ಬಳಸಿ ಹೆಚ್ಚು ವರಮಾನವುಳ್ಳ ಉದ್ಯೋಗಿಗಳು ತೆರಿಗೆ ಉಳಿಸುತ್ತಿದ್ದರು. ಇನ್ಮುಂದೆ ತೆರಿಗೆ ಪಾವತಿ ಅನಿವಾರ್ಯವಾಗಲಿದೆ.

ಆದರೆ, ಇಪಿಎಫ್ ಗೆ ಒಟ್ಟಾರೆ ಕೊಡುಗೆ ನೀಡುವವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ 2.5 ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆ ನೀಡುವವರ ಸಂಖ್ಯೆ ಶೇ 1ಕ್ಕಿಂತ ಕಡಿಮೆಯಿದೆ ಎಂದು ಆಯವ್ಯಯ ಕಾರ್ಯದರ್ಶಿ ಟಿವಿ ಸೋಮನಾಥನ್ ಹೇಳಿದ್ದಾರೆ.

Recommended Video

Team India ಆಟಗಾರರೆಲ್ಲರೂ ನಿರ್ಭೀತರಾಗಿ ಅಭ್ಯಾಸ ಪ್ರಾರಂಭಿಸಿದರು | Oneindia Kannada

ಬಜೆಟ್ ನಂತರ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ, ಹೆಚ್ಚು ವರಮಾನವುಳ್ಳ ಉದ್ಯೋಗಿಗಳು ಖಾತೆಗೆ 1 ಕೋಟಿ ರು ಹಾಕಿ ಶೇ 8ರಷ್ಟು ಬಡ್ಡಿ ಗಳಿಸುತ್ತಿದ್ದರೆ, ಕಡಿಮೆ ವರಮಾನದವರ ಕತೆಯೇನು, ಸಮತೋಲನ ಕಾಯ್ದುಕೊಳ್ಳಲು ಹೆಚ್ಚು ವರಮಾನವುಳ್ಳರ ದೇಣಿಗೆಯ ಬಡ್ಡಿ ಮೇಲೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದರು.

English summary
Interest on employee contributions to provident fund over Rs 2.5 lakh per annum would be taxed from April 1, 2021, a move aimed at taxing high-value depositors in the EPF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X