ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ ಚಟುವಟಿಕೆ : ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹೆಚ್ಚು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 28 : ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದಲ್ಲಿ ಐಎಸ್‌ಐಎಸ್ ಚಟುವಟಿಕೆಗಳು ಹೆಚ್ಚಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ ಚಟುವಟಿಕೆ ಮೇಲೆ ಇಲಾಖೆ ಕಣ್ಣಿಟ್ಟಿದೆ.

ಪ್ರಪಂಚದ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಐಎಸ್‌ಐಎಸ್ ಉಗ್ರರ ಚಟುವಟಿಕೆಗಳು ಕಡಿಮೆ. ಆದರೆ, ಪ್ರಚಾರಗಳು ಹೆಚ್ಚು ಇಲ್ಲಿ ನಡೆಯುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಶಬರಿಮಲೆ ದೇವಸ್ಥಾನಕ್ಕೆ ಐಸಿಸ್ ಉಗ್ರರ ಭೀತಿಶಬರಿಮಲೆ ದೇವಸ್ಥಾನಕ್ಕೆ ಐಸಿಸ್ ಉಗ್ರರ ಭೀತಿ

ಕೇರಳ ರಾಜ್ಯದಲ್ಲಿ ಐಎಸ್‌ಐಎಸ್ ಉಗ್ರ ಚಟುವಟಿಕೆಗಳು ಹೆಚ್ಚು ನಡೆಯುತ್ತಿರುವುದು ಮಾತ್ರವಲ್ಲ, ರಾಜ್ಯದ ಹಲವು ಯುವಕರು ಸಂಘಟನೆ ಸೇರಿದ್ದಾರೆ. ಕೆಲವು ದಿನಗಳ ಹಿಂದೆ ಕೇರಳದ ಯುವಕನೊಬ್ಬ ಸಂಘಟನೆ ಸೇರಿದ್ದ ವಿಚಾರ ಬಹಿರಂಗವಾಗಿತ್ತು.

Interest in the ISIS: Kerala tops, followed by TN, AP, Karnataka

ಭಾರತದಿಂದ ಹೋಗುವ ಯುವಕರು ಆಘಾನಿಸ್ತಾನ ಮೂಲಕ ತೆರಳಿ ಸಂಘಟನೆ ಸೇರುತ್ತಾರೆ. ಸುಮಾರು 60 ಮಂದಿ ನೇರವಾಗಿ ಹೋಗಿದ್ದಾರೆ ಎಂದು ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಸಿರಿಯಾ ಮೂಲಕವೂ ಹಲವು ಮಂದಿ ತೆರಳಿ ಉಗ್ರ ಸಂಘಟನೆ ಸೇರಿದ್ದಾರೆ.

ಭಾರತಕ್ಕೂ ಕಾಲಿಟ್ಟ ಐಸಿಸ್ ಭಯೋತ್ಪಾದನೆ, ಕಾಶ್ಮೀರದಲ್ಲಿ ಮೊದಲ ದಾಳಿಭಾರತಕ್ಕೂ ಕಾಲಿಟ್ಟ ಐಸಿಸ್ ಭಯೋತ್ಪಾದನೆ, ಕಾಶ್ಮೀರದಲ್ಲಿ ಮೊದಲ ದಾಳಿ

ಗುಪ್ತಚರ ಇಲಾಖೆ ಉಗ್ರರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. 'ಆಪರೇಷನ್ ಚಕ್ರವ್ಯೂಹ' ಎಂಬ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿಯೂ ಚಟುವಟಿಕೆಗಳು ಹೆಚ್ಚಿವೆ.

ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳೇ ಐಸಿಸ್ ಗುರಿ!ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳೇ ಐಸಿಸ್ ಗುರಿ!

ಉಗ್ರರ ಚಟುವಟಿಕೆ ಇರುವ ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ 5ನೇ ಸ್ಥಾನದಲ್ಲಿದೆ. ಭಾರತದಿಂದ 100 ಯುವಕರು ಐಎಸ್‌ಐಎಸ್ ಸೇರಿದ್ದಾರೆ ಎಂದು ಇಲಾಖೆ ಹೇಳಿದೆ.

English summary
The state which surfs for Islamic State related content the highest is Kerala. This is followed by Tamil Nadu, Andhra Pradesh and then Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X