ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ನಡುವೆ ಎಚ್ಚರಿಕೆಗೂ ಮೀರಿದ ಗುಂಡಿನ ಸದ್ದು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ಸಚಿವ ವಾಂಗ್ ಯಿ ರಷ್ಯಾದ ಮಾಸ್ಕೋದಲ್ಲಿ ಒಪ್ಪಂದಕ್ಕೆ ಬರುವ ಎರಡು ದಿನಗಳ ಮುನ್ನವಷ್ಟೇ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ತೀವ್ರವಾಗಿತ್ತು. ಪ್ಯಾಂಗಾಂಗ್ ತ್ಸೊದ ಉತ್ತರ ತೀರದಲ್ಲಿ ಎರಡೂ ಪಡೆಗಳು ಗುಂಡು ಹಾರಿಸಿದ್ದವು ಎಂಬ ಸಂಗತಿ ಬಹಿರಂಗವಾಗಿದೆ.

ಭಾರತೀಯ ಪಡೆಗಳು ಫಿಂಗರ್ 3ಯ ಪಶ್ಚಿಮ ಭಾಗದತ್ತ ಚಲಿಸಿದಾಗ ಚೀನಾ ಪಡೆಗಳು ಫಿಂಗರ್ 3 ಮತ್ತು 4 ನಡುವಿನ ಪ್ರದೇಶವನ್ನು ಆಕ್ರಮಿಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಎರಡೂ ದೇಶಗಳು ಪರಸ್ಪರ ಸುಮಾರು 300 ಮೀಟರ್‌ನಷ್ಟು ಹತ್ತಿರ ಬಂದಿದ್ದವು. ಆಗ ಗಾಳಿಯಲ್ಲಿ 100-200ರಷ್ಟು ಗುಂಡುಗಳನ್ನು ಹಾರಿಸಿದ್ದವು.

ಲಡಾಖ್ ಆಯ್ತು ಅರುಣಾಚಲ ಪ್ರದೇಶ ಗಡಿಯಲ್ಲೂ ಚೀನಾ ಸೇನೆ ಲಡಾಖ್ ಆಯ್ತು ಅರುಣಾಚಲ ಪ್ರದೇಶ ಗಡಿಯಲ್ಲೂ ಚೀನಾ ಸೇನೆ

'ಫಿಂಗರ್ 3 ಮತ್ತು ಫಿಂಗರ್ 4 ಕೂಡಿಕೊಳ್ಳುವ ಪ್ರದೇಶದಲ್ಲಿ ಎರಡೂ ಪಡೆಗಳು 100-200ರಷ್ಟು ಗುಂಡುಗಳನ್ನು ಹಾರಿಸಿದ್ದವು' ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಮುಂದೆ ಓದಿ.

ಹಲವು ಬಾರಿ ಗುಂಡು

ಹಲವು ಬಾರಿ ಗುಂಡು

ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ಯಾಂಗಾಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ತೀವ್ರ ಮಟ್ಟದಲ್ಲಿ ಚಲನವಲನಗಳು ನಡೆದಿದ್ದವು. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಅನೇಕ ಘಟನೆಗಳು ನಡೆದಿದ್ದವು ಎಂದು ಅವರು ತಿಳಿಸಿದ್ದಾರೆ.

ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್

ವಿಕೋಪಕ್ಕೆ ಹೋಗಿದ್ದ ಘಟನೆ

ವಿಕೋಪಕ್ಕೆ ಹೋಗಿದ್ದ ಘಟನೆ

ಎಲ್‌ಎಸಿಯಲ್ಲಿ ಎರಡು ಬಾರಿ ಗುಂಡಿನ ಚಕಮಕಿ ನಡೆದಿತ್ತು. ಸೆ. 7ರಂದು ಚುಷುಲ್ ಉಪ ವಲಯದಲ್ಲಿ ಮೊದಲ ಸುತ್ತಿನ ಗುಂಡಿನ ವಿನಿಮಯ ನಡೆದಿತ್ತು. ಇವುಗಳನ್ನು ಎಚ್ಚರಿಕೆ ನೀಡುವ ಸಲುವಾಗಿ ಹಾರಿಸಲಾಗಿತ್ತು. ಎರಡನೆಯ ಸುತ್ತಿನ ಗುಂಡುಗಳನ್ನು ಸೆ. 8ರಂದು ಉತ್ತರ ಭಾಗದಲ್ಲಿ ಹಾರಿಸಲಾಗಿತ್ತು. ಇದು ಬಹಳ ಗಂಭೀರವಾಗಿತ್ತು. ಕನಿಷ್ಠ 100 ಸುತ್ತುಗಳನ್ನು ಹಾರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಣ್ಣಗಾದ ಸನ್ನಿವೇಶ

ತಣ್ಣಗಾದ ಸನ್ನಿವೇಶ

ಆದರೆ ಇದುವರೆಗೂ ಎರಡೂ ದೇಶಗಳು ಉತ್ತರ ತೀರದಲ್ಲಿ ನಡೆದ ಗುಂಡಿನ ಚಕಮಕಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಉಭಯ ದೇಶಗಳ ಸಚಿವರು ಮಾತುಕತೆ ನಡೆಸಿದ ಬಳಿಕ ಸನ್ನಿವೇಶ ತಣ್ಣಗಾಗಿದೆ. ಈಗ ಗಮನ ಮಾತುಕತೆಯತ್ತ ಹೊರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜನಾಥ್ ಸಿಂಗ್ ಹೇಳಿಕೆ ಬಾಲಿಶ, ಹಾಸ್ಯಾಸ್ಪದ: ಓವೈಸಿರಾಜನಾಥ್ ಸಿಂಗ್ ಹೇಳಿಕೆ ಬಾಲಿಶ, ಹಾಸ್ಯಾಸ್ಪದ: ಓವೈಸಿ

ಮೇಲುಗೈ ಸಾಧಿಸಿದ್ದ ಚೀನಾ

ಮೇಲುಗೈ ಸಾಧಿಸಿದ್ದ ಚೀನಾ

ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಅದಕ್ಕೆ ಇನ್ನೂ ದಿನಾಂಕ ನಿಗದಿಮಾಡಿಲ್ಲ. ಭಾರತವು ಚುಷುಲ್ ಉಪ ವಲಯದಲ್ಲಿನ ಎತ್ತರದ ಪ್ರದೇಶಗಳನ್ನು ವಶಕ್ಕೆ ಪಡೆದುಕೊಳ್ಳುವ ಮುನ್ನ ಚೀನಾವು ಅನುಕೂಲಕರ ಸ್ಥಿತಿಯಲ್ಲಿತ್ತು. ಆಗ ಚೀನಾ ಯಾವ ಮಾತುಕತೆಗೂ ಸಿದ್ಧವಿರಲಿಲ್ಲ. ಅದಕ್ಕೆ ಕಾರಣಗಳೂ ಇರಲಿಲ್ಲ. ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಚರ್ಚೆಗಳಿಗೆ ಮುಂದಾಗಿರಲಿಲ್ಲ ಎಂದು ತಿಳಿಸಿದ್ದಾರೆ.

English summary
India and China have exchanges 100-200 intense warning shots before Moscow pact in along LAC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X