ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿ

|
Google Oneindia Kannada News

ನವದೆಹಲಿ, ಜುಲೈ 17 : ಕೋವಿಡ್ ಸೋಂಕಿತ ರೋಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತಾತ್ಕಾಲಿಕ ಆಸ್ಪತ್ರೆಗೆ ದಾಖಲಾಗಿದ್ದರೂ ವಿಮೆ ಪಡೆಯಲು ಅರ್ಹ ಎಂದು ಹೇಳಿದೆ. ಹಲವಾರು ರಾಜ್ಯಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Recommended Video

ಗೋವಾ ಹೋಗೋ ಪ್ಲಾನ್ ಇದ್ರೆ ಮೊದಲು ಕ್ಯಾನ್ಸಲ್ ಮಾಡಿ. |Oneindia kannada

ಶುಕ್ರವಾರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ತಾತ್ಕಾಲಿಕ ಆಸ್ಪತ್ರೆಯನ್ನು ಆಸ್ಪತ್ರೆ ಎಂದೇ ಪರಿಗಣಿಸಬೇಕು ಎಂದು ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ.

ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ

ವೈದ್ಯರ ಸೂಚನೆಯಂತೆ ಕೋವಿಡ್ ಸೋಂಕಿತ ರೋಗಿ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ರೋಗಿಯ ಚಿಕಿತ್ಸಾ ವೆಚ್ಚವನ್ನು ವಿಮೆ ಕಂಪನಿಗಳು ತುಂಬಬೇಕು ಎಂದು ಹೇಳಿದೆ. ಒಂದು ವೇಳೆ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳೇ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದ್ದರೂ ಅದರಲ್ಲಿರುವ ರೋಗಿಗೂ ವಿಮೆ ನೀಡಬೇಕು ಎಂದು ತಿಳಿಸಲಾಗಿದೆ.

ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ' ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'

Insurance Companies To Consider Make Shift Hospital

ಕೆಲವು ದಿನಗಳ ಹಿಂದೆ ಐಆರ್‌ಡಿಎಐ ವಿಮೆ ಕಂಪನಿಗಳಿಗೆ ನಗದು ರಹಿತ ಚಿಕಿತ್ಸೆಗೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಆಸ್ಪತ್ರೆಗೆ ದಾಖಲಾದ ವ್ಯಕ್ತಿ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದರೆ ನಗದು ರಹಿತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕೊರೊನಾ ವೈರಸ್; ಬಳ್ಳಾರಿ ಡಿಸಿ ಕಚೇರಿ ಕ್ಲೋಸ್ಕೊರೊನಾ ವೈರಸ್; ಬಳ್ಳಾರಿ ಡಿಸಿ ಕಚೇರಿ ಕ್ಲೋಸ್

ಜನರಲ್‌ ಇನ್ಷೂರೆನ್ಸ್‌ ಕಾರ್ಪೋರೇಷನ್ ಆಫ್‌ ಇಂಡಿಯಾ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳು ಎಷ್ಟು ದರವನ್ನು ನಿಗದಿ ಮಾಡಬಹುದು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ, ಕೆಲವು ಆಸ್ಪತ್ರೆಗಳು ಈ ದರಕ್ಕೆ ಒಪ್ಪಿಗೆ ನೀಡಿರಲಿಲ್ಲ.

ವಿವಿಧ ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ದರವಿದೆ. ವಿಮೆ ಹೊಂದಿರುವವರು ಚಿಕಿತ್ಸೆ ಪಡೆದರೆ ಅದನ್ನು ವಿಮಾ ಕಂಪನಿಗಳು ಪಾವತಿ ಮಾಡಿದರೆ ರೋಗಿಗಳಿಗೂ ಸಹಾಯಕವಾಗಲಿದೆ.

English summary
If COVID patient admitted to make shift hospital for treatment consider it as hospital IRDAl directed to insurance companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X