ಮೋದಿಯನ್ನು ಮೆಚ್ಚಿದ ಮುಸ್ಲಿಂ ಪ್ರವಾದಿ, ಜಮ್ಮುವಿನಲ್ಲಿ ಹಿಮದ ಮಳೆ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,18: ಕರ್ನಾಟಕ ಜನತೆ ಸಿದ್ದರಾಮಯ್ಯ ಮಂಡಿದಸಿದ ಬಜೆಟ್ ಕೇಳಿ ಲಾಭ ನಷ್ಟ, ಕೊಡು ಕೊಳ್ಳುವಿಕೆಯ ತುಲನೆಯಲ್ಲಿ ಮಗ್ನರಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ವಿದೇಶಿ ಪ್ರತಿನಿಧಿಗಳ ಜೊತೆ ದೇಶದ ಅಭಿವೃದ್ದಿಗೆ ಪೂರಕವಾದ ಅಂಶಗಳ ಚರ್ಚೆಯಲ್ಲಿ ನಿರತರಾಗಿದ್ದಾರೆ.

ದೇಶದ ನಾನಾ ಭಾಗಗಳಲ್ಲಿ ಬಣ್ಣ ನನ್ನ ಒಲವಿನ ಬಣ್ಣ ಎಂದು ಹೋಳಿ ಹಬ್ಬದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ನಾಡಿನಾದ್ಯಂತ ಜನರು ಬಿಸಿಲ ಬೇಗೆಯಲ್ಲಿ ಬೆಂದು ಹೋಗುತ್ತಿದ್ದರೆ, ಇನ್ನೊಂದೆಡೆ ಹಿಮದ ಮಳೆಯಾಗುತ್ತಿದೆ. ಹಲವೆಡೆ ಧಾರಕಾರ ಮಳೆಯಾಗುತ್ತಿದೆ. ಒಟ್ಟಿನಲ್ಲಿ ಪ್ರಾಕೃತಿಕ ವೈಪರಿತ್ಯಕ್ಕೆ ಜನರು ತಮ್ಮನ್ನು ಒಗ್ಗಿಸಿಕೊಂಡು ಬದುಕುತ್ತಿದ್ದಾರೆ.[ಬೇಸಿಗೆ ಮಳೆ, ಸದ್ಯಕ್ಕೆ ತಂಪಾಯ್ತು ಇಳೆ, ಮುಂದೆ ಬರೀ ಗೋಳೆ!]

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, 'ಭಯೋತ್ಪಾದನೆಯ ವಿರುದ್ಧದ ಹೋರಾಟವೆಂದರೆ ಯಾವುದೇ ಧರ್ಮಗಳ ಮುಖಾಮುಖಿಯಲ್ಲ. ಇದು ಮಾನವೀಯ ಮತ್ತು ಅಮಾನವೀಯ ಗುಣಗಳ ನಡುವಿನ ಹೋರಾಟ' ಎಂದು ನವದೆಹಲಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರ ಶ್ಲಾಘನೆಗೆ ಒಳಗಾಗಿದ್ದಾರೆ. ಇನ್ನಷ್ಟು ಸುದ್ದಿ ಇಲ್ಲಿವೆ.

ನರೇಂದ್ರ ಮೋದಿಯನ್ನು ಮೆಚ್ಚಿದ ಮುಸ್ಲಿಂ ಪ್ರವಾದಿ

ನರೇಂದ್ರ ಮೋದಿಯನ್ನು ಮೆಚ್ಚಿದ ಮುಸ್ಲಿಂ ಪ್ರವಾದಿ

ನಾನು ಭಯೋತ್ಪಾದನೆ ಮತ್ತು ಧರ್ಮ ಈ ಎರಡನ್ನು ಸಮೀಕರಿಸಿ ದೇಶದ ಶಾಂತಿಗೆ ಧಕ್ಕೆ ತರುವ ಮನೋಭಾವವನ್ನು ವಿರೋಧಿಸುತ್ತೇನೆ ಎಂದು ನವದೆಹಲಿಯಲ್ಲಿ ನಡೆದ ಸೂಫಿ ಫಾರಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಡಿದರು. ಇವರ ಮಾತುಗಳನ್ನು ಕೇಳಿದ ಮುಸ್ಲಿಂ ಪ್ರವಾದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದು ಹೀಗೆ.

ಹಿಮ ಮಳೆ, ಕೊಡೆ ಹಿಡಿದು ನಡೆ

ಹಿಮ ಮಳೆ, ಕೊಡೆ ಹಿಡಿದು ನಡೆ

ಜಮ್ಮು ಮತ್ತು ಕಾಶ್ಮೀರದ ಥನ್ಮಾರ್ಗ್ ಬಳಿಯ ಬರಮುಲ್ಲಾ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಹಿಮ ಆವೃತವಾಗಿದ್ದು, ಜನರು ಕೊಡೆ ಹಿಡಿದೇ ನಡೆಯಬೇಕಾಗಿದೆ.

ಥೈವಾನ್ ದೇಶದ ನಟಿಗೆ ಉತ್ತಮ ನಟಿ ಪ್ರಶಸ್ತಿ

ಥೈವಾನ್ ದೇಶದ ನಟಿಗೆ ಉತ್ತಮ ನಟಿ ಪ್ರಶಸ್ತಿ

ಥೈವಾನ್ ದೇಶದ ನಟಿಯಾದ ಶುಕ್ಯೂ ಅವರು ಮ್ಯಾಸ್ಯುನಲ್ಲಿ ನಡೆದ ಏಷಿಯನ್ ಫಿಲ್ಮ್ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ನಟಿ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ. ಆಗ ಕ್ಯಾಮರಕ್ಕೆ ತಮ್ಮ ಸಂತಸವನ್ನು ತೋರಿಸಿದ್ದು ಹೀಗೆ

ರಂಗೇರಿಸಿದ ಬಣ್ಣ

ರಂಗೇರಿಸಿದ ಬಣ್ಣ

ಉತ್ತರ ಪ್ರದೇಶದ ಮಥುರಾದಲ್ಲಿ ಜನರು ಲತ್ಮಾರ್ ಹೋಳಿ ಹಬ್ಬ ಆಚರಣೆಯಲ್ಲಿ ತೊಡಗಿದ್ದು, ರಾಧೆ ರಾಣಿ ದೇವಾಲಯದಲ್ಲಿ ಬಣ್ಣ ಬಣ್ಣ ಎರಚಾಟದಲ್ಲಿ ಎಲ್ಲರೂ ರಂಗೇರಿದ್ದರು.

 ವಿದೇಶಿ ಪ್ರತಿನಿಧಿಗಳ ನಡುವೆ ಮೋದಿ

ವಿದೇಶಿ ಪ್ರತಿನಿಧಿಗಳ ನಡುವೆ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವರ್ಲ್ದ್ ಸೂಫಿ ಫಾರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿದೇಶಿ ಪ್ರತಿನಿಧಿಗಳ ಜೊತೆ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಮಾತುಕತೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Inshort news of New delhi, Mathura, Jammu and Kashmir, Prime Minister Narendra Modi meeting with foreign delegates during the opening ceremony of World Sufi Forum at Vigyan Bhawan in New Delhi. People walk with umbrella during fresh snowfall at Tangmarg in Baramulla District of North Kashmir
Please Wait while comments are loading...