ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಟಿಕೋತ್ಸವದಲ್ಲಿ ಅಂಬಾನಿ, ಸಾವನ್ನು ಗೆದ್ದ ಯುವತಿಯರ ನಡಿಗೆ

By Vanitha
|
Google Oneindia Kannada News

ಬೆಂಗಳೂರು, ಮಾರ್ಚ್,07: ಒಂದೆಡೆ ಇಡೀ ನಾಡು ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಉಪವಾಸ, ವ್ರತ ಪೂಜೆ ಪುನಸ್ಕಾರ, ಜಾಗರಣೆಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವೆಡೆ ಮಾರ್ಚ್ 8ರಂದು ಇರುವ ಮಹಿಳಾ ದಿನಾಚರಣೆಗೂ ಸಕಲ ಸಿದ್ಧತೆಗಳು ಭಾರೀ ಜೋರಾಗಿಯೇ ನಡೆಯುತ್ತಿವೆ.

ಹಲವು ವಿಶ್ವವಿದ್ಯಾಲಯಗಳು ಘಟಿಕೋತ್ಸವದ ಸಂಭ್ರಮದಲ್ಲಿ ಮುಳುಗಿವೆ. ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ತಂದೆ ತಾಯಿಯರಿಗೆ ಕೀರ್ತಿ ತಂದ ಆನಂದದಲ್ಲಿ ತೇಲುತ್ತಿದ್ದಾರೆ. ಮಂಗಳವಾರದಿಂದ ಮುಂಬೈನಲ್ಲಿ ಟಿ20 ಕ್ರಿಕೆಟ್ ಆರಂಭವಾಗಲಿದೆ. ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ ಪಾರ್ಟಿ ಕಾರ್ಯಕರ್ತರು ಎನ್ ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾರೆ.[ಮಹಾಶಿವರಾತ್ರಿ ಸಂಭ್ರಮ: ಉಪವಾಸ, ಜಾಗರಣೆ, ಅಭಿಷೇಕ, ಭಜನೆ]

ಒಟ್ಟಿನಲ್ಲಿ ಈ ಎರಡು ದಿನಗಳ ಕಾಲ ಸಮಾರಂಭದ ಮಹಾಪುರವೇ ಹರಿದು ಬರಲಿದೆ. ಒಂದೆಡೆ ಶಿವರಾತ್ರಿ, ಮತ್ತೊಂದೆಡೆ ಮಹಿಳಾ ದಿನಾಚರಣೆ, ನಾಳೆಯಿಂದ ಟಿ20 ಹೀಗೆ ನಾನಾ ವಿಶೇಷ ಸಂದರ್ಭದಲ್ಲಿ ಇಡೀ ದೇಶ ಮುಳುಗೇಳಲಿದೆ.

ಸಾವನ್ನು ಗೆದ್ದ ಯುವತಿಯರ ನಡಿಗೆ

ಸಾವನ್ನು ಗೆದ್ದ ಯುವತಿಯರ ನಡಿಗೆ

ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಭೂಪಾಲ್ ನಲ್ಲಿ ವೇದಿಕೆ ಕಲ್ಪಿಸಿದ ಎನ್ ಜಿಓ ಪ್ರೇರಣಾ ಅವರಿಗಾಗಿ ರ್ಯಾಂಪ್ ವಾಕ್ ಏರ್ಪಡಿಸಿತ್ತು. ಅದರಲ್ಲಿ ಕಿರುತೆರೆ ನಟಿ ಅಮಿತಾ ನಂಗೈ ಭಾಗವಹಿಸಿ ಆಸಿಡ್ ದಾಳಿಗೆ ತುತ್ತಾದ ಮಹಿಳೆಯರೊಂದಿಗೆ ವೇದಿಕೆ ಮೇಲೆ ಹೆಜ್ಜೆಹಾಕಿದರು.

ಗುಜರಾತಿನ ಘಟಿಕೋತ್ಸವದಲ್ಲಿ ಅಂಬಾನಿ

ಗುಜರಾತಿನ ಘಟಿಕೋತ್ಸವದಲ್ಲಿ ಅಂಬಾನಿ

ಗುಜರಾತಿನ ಗಾಂಧಿನಗರದಲ್ಲಿರುವ ಪ್ರೆಸಿಡೆಂಟ್ ಆಫ್ ದೀನದಯಾಳು ಪೆಟ್ರೋಲಿಯಂ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವಕ್ಕೆ ಆಗಮಿಸಿದ ಉದ್ಯಮಿ ಮುಖೇಶ್ ಅಂಬಾನಿ ವಿದ್ಯಾರ್ಥಿಗಳಿಗೆ ಪದವಿಪತ್ರ ನೀಡಿ ಶುಭಾಶಯ ಕೋರಿದರು.

ಈತನಿಗೆ ಕಾಲುಗಳೇ ಕೈಗಳು

ಈತನಿಗೆ ಕಾಲುಗಳೇ ಕೈಗಳು

ಎರಡು ಕೈಗಳನ್ನು ಕಳೆದುಕೊಂಡ ಜಮ್ಮು ಕಾಶ್ಮೀರದ ವಘಾಮಬಾಲ ಹಳ್ಳಿಯ
ಅಮೀರ್ ಹುಸೈನ್ ಅವರು ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸಲು ಅಭ್ಯಾಸ ನಿರತನಾಗಿರುವುದು ಹೀಗೆ. ಈತ ತನ್ನ ಎಲ್ಲಾ ಕಾರ್ಯಗಳನ್ನು ಕಾಲುಗಳಲ್ಲೇ ಮಾಡುತ್ತಾನೆ.

ಕಬ್ಬಡಿಯ ಅಂತಿಮ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು

ಕಬ್ಬಡಿಯ ಅಂತಿಮ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು

ನವದೆಹಲಿಯಲ್ಲಿ ನಡೆದ ಪ್ರೊ ಕಬ್ಬಡಿಯ ಫೈನಲ್ ನಲ್ಲಿ ಜಾನಪದ ಕಲಾವಿದರು ಭಾಗವಹಿಸಿ ತಮ್ಮ ಕಲಾತ್ಮಕ ನೃತ್ಯ ಪ್ರದರ್ಶಿಸಿ ಜನರ ಮನಗೆದ್ದರು.

English summary
Inshort news diary of National and Internation. Acid attack victim women walk the ramp with TV actress Amita Nangia during a fashion show organised by an NGO Prerna to mark the International Women's Day, in Bhopal. Industrialist Mukesh Ambani, President of Pt. Deendayal Petroleum University (PDPU) presents degree to the students during 4th annual PDPU convocation at Gandhinagar in Gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X